Saturday, 14th December 2024

ಟಿಎಂಸಿ ರ‍್ಯಾಲಿಯಲ್ಲಿ ಸಿಡಿಲು ಬಡಿದು ಓರ್ವ ಸಾವು, 25 ಮಂದಿಗೆ ಗಾಯ

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಪಕ್ಷದ ರ‍್ಯಾಲಿ ಸಂದರ್ಭದಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬ ಮೃತಪಟ್ಟಿದ್ದು, 25 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯ ಇಂಡಾಸ್‍ನಲ್ಲಿ ಟಿಎಂಸಿ ಮುಖಂಡ ಅಭಿಷೇಕ್ ಬ್ಯಾನರ್ಜಿ ನಡೆಸುತ್ತಿದ್ದ ರ‍್ಯಾಲಿ ವೇಳೆ ಗುಡುಗು ಸಹಿತ ಸಿಡಿಲು ಬಡಿದು 40 ವರ್ಷದ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿದ್ದು, ಕನಿಷ್ಠ 25 ಮಂದಿ ಗಾಯಗೊಂಡಿ ದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರ್ಯಾಲಿಯಲ್ಲಿ ಭಾಗವಹಿಸಿದ್ದ ಸಾಬರ್ ಮಲ್ಲಿಕ್ ಮೃತಪಟ್ಟಿರುವ ಟಿಎಂಸಿ ಕಾರ್ಯಕರ್ತ ಎಂದು ಗುರುತಿಸಲಾಗಿದೆ.

ಮರಕ್ಕೆ ಸಿಡಿಲು ಬಡಿದ ಘಟನೆಯಲ್ಲಿ ಮಲ್ಲಿಕ್ ತೀವ್ರವಾಗಿ ಗಾಯಗೊಂಡರು ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೂ ಆತ ಬದುಕುಳಿಯಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.