Thursday, 24th October 2024

ಭಾರತೀಯ ವಾಯುಪಡೆ ದಿನಾಚರಣೆ ಇಂದು

ನವದೆಹಲಿ: ಭಾರತೀಯ ವಾಯು ಪಡೆಯನ್ನು 1932, ಅ. 8ರಂದು ಸ್ಥಾಪಿಸಲಾಯಿತು. ಅಂದಿ ನಿಂದ ಪ್ರತೀ ವರ್ಷ ಅಕ್ಟೋಬರ್‌ 8ರಂದು ಹಲವು ಯುದ್ಧಗಳಲ್ಲಿ ಭಾರತೀಯ ವಾಯುಸೇನೆ ಸಲ್ಲಿಸಿದ ಅನುಪಮ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ಭಾರತೀಯ ವಾಯುಪಡೆ ದಿನ ವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

ವಿಶ್ವದಲ್ಲಿ ಅತೀ ದೊಡ್ಡ ವಾಯು ಪಡೆಯನ್ನು ಹೊಂದಿರುವ ರಾಷ್ಟ್ರಗಳ ಪೈಕಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಅಮೆರಿಕ, ರಷ್ಯಾ ಮತ್ತು ಚೀನದ ಅನಂತರದ ಸ್ಥಾನದಲ್ಲಿ ಭಾರತ ಇದೆ. ಮಾತ್ರವಲ್ಲದೇ ಜಗತ್ತಿನ ಶಕ್ತಿಶಾಲಿ ವಾಯು ಸೇನೆಗಳಲ್ಲಿ ಭಾರತೀಯ ವಾಯುಪಡೆಯೂ ಒಂದಾ ಗಿದೆ.

1933ರ ಎ.1ರಂದು ಮೊದಲ ಯುದ್ಧ ವಿಮಾನ ಭಾರತೀಯ ವಾಯು ಸೇನೆಗೆ ಸೇರ್ಪಡೆಯಾಗಿತ್ತು. ಜತೆಗೆ 4 ವಿಮಾನಗಳಿದ್ದವು. ಆಗ ವಾಯುಪಡೆಯನ್ನು “ರಾಯಲ್‌ ಇಂಡಿಯನ್‌ ಏರ್‌ಫೋರ್ಸ್‌’ ಎಂದು ಕರೆಯಲಾಗುತ್ತಿತ್ತು. ನಮ್ಮಲ್ಲಿ ಒಟ್ಟು 60 ವಾಯುಪಡೆ ನಿಲ್ದಾಣಗಳಿವೆ. ವಾಯು ಸೇನೆ ಯಲ್ಲಿ 1,39,576 ಸಕ್ರಿಯ ಅಧಿಕಾರಿಗಳಿದ್ದು, 1,40,000 ಮಂದಿ ಮೀಸಲು ಪಡೆಯಲ್ಲಿದ್ದಾರೆ.

ಗರುಡ್‌ ಕಮಾಂಡೋ
ಗರುಡ್‌ ಕಮಾಂಡೋ ವಾಯು ಪಡೆಯ ವಿಶೇಷ ಕಮಾಂಡೋ ಪಡೆ. ಕಮಾಂಡೋ ಪಡೆ ಗಳಲ್ಲೇ ಅತೀ ಸುದೀರ್ಘ‌ ತರಬೇತಿ ಯನ್ನು ಗರುಡ್‌ನಲ್ಲಿ ನೀಡಲಾಗುತ್ತದೆ.

ವಾಯುಪಡೆಯ ಹಿಂಡನ್‌ ವಾಯು ನಿಲ್ದಾಣ ಏಷ್ಯಾದಲ್ಲೇ ಅತೀ ದೊಡ್ಡ ವಾಯು ನೆಲೆ. ಗಾಜಿಯಾಬಾದ್‌ನಲ್ಲಿರುವ ಇದು ವೆಸ್ಟರ್ನ್ ಏರ್‌ ಕಮಾಂಡ್‌ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.