Thursday, 12th December 2024

ಟೊಮೆಟೊ ಮಾರಿ 1.5 ಕೋಟಿ ರೂ. ಗಳಿಸಿದ ರೈತ

ಮುಂಬೈ: ಮಹಾರಾಷ್ಟ್ರದ ಪುಣೆ ಜಿಲ್ಲೆಯ ರೈತರೊಬ್ಬರು ಟೊಮೆಟೊ ಬೆಳೆದಿದ್ದಾರೆ.

ತುಕಾರಾಮ್ ಭಾಗೋಜಿ ಗಾಯಕರ್ ಮತ್ತು ಅವರ ಕುಟುಂಬವು ಒಂದು ತಿಂಗಳಲ್ಲಿ 13,000 ಟೊಮೆಟೊ ಕ್ರೇಟ್ ಗಳನ್ನು ಮಾರಾಟ ಮಾಡುವ ಮೂಲಕ 1.5 ಕೋಟಿ ರೂ.ಗಿಂತ ಹೆಚ್ಚು ಸಂಪಾದಿಸಿದ್ದಾರೆ ಎನ್ನಲಾಗಿದೆ.

ತುಕಾರಾಂ ಅವರು 18 ಎಕರೆ ಕೃಷಿ ಭೂಮಿಯನ್ನು ಹೊಂದಿದ್ದಾರೆ. 12 ಎಕರೆ ಭೂಮಿಯಲ್ಲಿ, ಅವರು ತಮ್ಮ ಮಗ ಈಶ್ವರ್ ಗಾಯಕರ್ ಮತ್ತು ಸೊಸೆ ಸೋನಾಲಿ ಅವರ ಸಹಾಯದಿಂದ ಟೊಮೆಟೊ ಬೆಳೆಯುತ್ತಾರೆ. ಅವರು ಉತ್ತಮ ಗುಣಮಟ್ಟದ ಟೊಮೆಟೊಗಳನ್ನು ಬೆಳೆಯುತ್ತಾರೆ.