Thursday, 31st October 2024

TPG Nambiar: BPL ಸಂಸ್ಥಾಪಕ ಟಿಪಿಜಿ ನಂಬಿಯಾರ್‌ ವಿಧಿವಶ

nambiar

ಬೆಂಗಳೂರು: ಎಲೆಕ್ಟ್ರಾನಿಕ್ಸ್ ಉಪಕರಣ ತಯಾರಕ ಸಂಸ್ಥೆ ಬಿಪಿಎಲ್‌ನ (BPL) ಸಂಸ್ಥಾಪಕ ಮತ್ತು ಮಾಲೀಕ ಖ್ಯಾತ ಉದ್ಯಮಿ ಟಿಪಿಜಿ ನಂಬಿಯಾರ್‌(TPG Nambiar) (96) ವಿಧಿವಶರಾಗಿದ್ದಾರೆ. ಬಿಜೆಪಿ ನಾಯಕ ರಾಜೀವ್‌ ಚಂದ್ರಶೇಖರ್‌(Rajiv Chandrashekar) ಅವರ ಮಾವನಾಗಿರುವ ನಂಬಿಯಾರ್‌ ಅವರು ಬೆಂಗಳೂರಿನಲ್ಲಿ ನೆಲೆಸಿದ್ದರು. ದೀರ್ಘಕಾಲದ ಅನಾರೋಗ್ಯದ ನಂತರ, ಅವರು ಹಲವು ಹಲವು ಸಮಯದಿಂದ ಹಾಸಿಗೆ ಹಿಡಿದಿದ್ದರು ಎನ್ನಲಾಗಿದೆ.

ಇಂದು ಅವರ ಆರೋಗ್ಯದಲ್ಲಿ ಏಕಾಏಕಿ ಏರುಪೇರಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ.. 1963 ರಲ್ಲಿ ಅವರು ಬಿಪಿಎಲ್ ಇಂಡಿಯಾವನ್ನು ಸ್ಥಾಪಿಸಿದರು. ಅದೇ ಹೆಸರಿನ ಬ್ರಿಟಿಷ್ ಕಂಪನಿಯ ಸಹಯೋಗದೊಂದಿಗೆ, ಕಂಪನಿಯು ಭಾರತೀಯ ರಕ್ಷಣಾ ಪಡೆಗಳಿಗೆ ಅಗತ್ಯವಿರುವ ಸಣ್ಣ ಎಲೆಕ್ಟ್ರಾನಿಕ್ ಉಪಕರಣಗಳನ್ನು ತಯಾರಿಸಲು ಪ್ರಾರಂಭಿಸಿತು.

ಟಿ.ಪಿ.ಜಿ.ನಂಬಿಯಾರ್‌ ಅಂತ್ಯ ಸಂಸ್ಕಾರ ನಾಳೆ ಬೆಳಗ್ಗೆ 11 ಗಂಟೆಗೆ ಕಲ್ಪಲ್ಲಿ ಚಿತಾಗಾರದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇನ್ನು ನಂಬಿಯಾರ್‌ ಅವರ ಅಗಲಿಕೆಗೆ ಕರ್ನಾಟಕದ ಮಾಜಿ ಸಿಎಂ ಬಿ.ಎಸ್‌ ಯಡ್ಡಿಯೂರಪ್ಪ, ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಸೇರಿದಂತೆ ಅನೇಕ ಗಣ್ಯರು ಸಂತಾ ಸೂಚಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Narendra Modi: ಜಾಗತಿಕ ಸಮಸ್ಯೆಗಳಿಗೆ ಯುದ್ಧ ಭೂಮಿಯಿಂದ ಪರಿಹಾರ ದೊರೆಯದು; ನರೇಂದ್ರ ಮೋದಿ