Thursday, 12th December 2024

ಬಿಡಾಡಿ ದನಗಳ ಹಾವಳಿ: ಹಳಿತಪ್ಪಿದ ಗೂಡ್ಸ್ ರೈಲು

ಚಂಡೀಗಢ: ಬಿಡಾಡಿ ದನಗಳು ರೈಲು ಹಳಿ ಮೇಲೆ ಬಂದಿದ್ದರಿಂದ ಗೂಡ್ಸ್ ರೈಲು ಹಳಿತಪ್ಪಿದೆ.

ಭಾನುವಾರ ರಾತ್ರಿ ಪಂಜಾಬ್‌ನ ರೂಪನಗರದಲ್ಲಿ ಗುರುದ್ವಾರ ಪಠಾ ಸಾಹಿಬ್ ಬಳಿ ಈ ಘಟನೆ ನಡೆದಿದೆ. ಪರಿಣಾಮ, ಗೂಡ್ಸ್ ರೈಲಿನ ಹದಿನಾರು ರೇಕ್‌ಗಳು ಹಳಿತಪ್ಪಿದವು. ದುರಸ್ತಿಗಾಗಿ ರೈಲು ಹಳಿಯನ್ನು ನಿರ್ಬಂಧಿಸಲಾಗಿದ್ದು, ಸೋಮವಾರ ಸಂಜೆ ವೇಳೆಗೆ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ.

ಏ.15 ರ ರಾತ್ರಿ, ದಾದರ್-ಪುದುಚೇರಿ ಎಕ್ಸ್‌ಪ್ರೆಸ್‌ನ 3 ಬೋಗಿಗಳು (ರೈಲು ಸಂಖ್ಯೆ 11005) ಮುಂಬೈನ ಮಾಟುಂಗಾ ನಿಲ್ದಾಣದ ಬಳಿ ಹಳಿತಪ್ಪಿದವು. ಸಿಎಸ್‌ಎಂಟಿ-ಗದಗ್ ಎಕ್ಸ್‌ಪ್ರೆಸ್‌ನ ಇಂಜಿನ್ ದಾದರ್-ಪುದುಚೇರಿ ಎಕ್ಸ್‌ಪ್ರೆಸ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಘಟನೆ ಸಂಭವಿಸಿದೆ.