Thursday, 12th December 2024

ನಾಗರಿಕ ಸೇವಾ ಪರೀಕ್ಷೆ ನಡೆಯುವಾಗಲೇ ಕಾಲೇಜ್ ಕ್ಯಾಂಪಸ್ ನಲ್ಲಿ ನಡೆಯಿತು ರೇಪ್!

ಲಕ್ನೋ: ಉತ್ತರ ಪ್ರದೇಶದ ನಾಗರಿಕ ಸೇವಾ ಪರೀಕ್ಷೆ ಕಳೆದ ಭಾನುವಾರ ನಡೆಯಿತು.
ಈ ವೇಳೆ ಝಾನ್ಸಿ ಯ ಕಾಲೇಜ್ ಒಂದರಲ್ಲಿ ಪರೀಕ್ಷಾ ಕೇಂದ್ರ ತೆರೆಯಲಾಗಿತ್ತು. ಪರೀಕ್ಷೆ ನಡೆಯುವ. ವೇಳೆಯೇ ಇದೇ ಕಾಲೇಜ್ ಕ್ಯಾಂಪಸ್ ನಲ್ಲಿ ಹತ್ತು ಹನ್ನೆರಡು ಹುಡುಗರ ಗುಂಪು ಬಾಲಕಿಯೊಬ್ಬಳನ್ನು ಪೊದೆಗೆ ಎಳೆದೊಯ್ದು ಅತ್ಯಾಚಾರ ಮಾಡಿದ್ದಾರೆ.
ಅಲ್ಲದೇ ಬಾಲಕಿ ಬಳಿಯಿದ್ದ ಮೊಬೈಲ್ ಹಾಗೂ 2 ಸಾವಿರ ರುಪಾಯಿ ಕೂಡ ದೋಚಿದ್ದಾರೆ. ಹತ್ರಾಸ್ ಅತ್ಯಾಚಾರ ಪ್ರಕರಣ ಹಸಿಯಾಗಿರುವಾಗಲೇ ಈ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.