Wednesday, 9th October 2024

TRAI New Rule: ಒಟಿಪಿ ಸ್ವೀಕೃತಿಗೆ ಅಕ್ಟೊಬರ್‌ 1ರಿಂದ ಕಠಿಣ ನಿಯಮ ಜಾರಿ; ಟ್ರಾಯ್ ಉದ್ದೇಶವೇನು?

TRAI New Rule

ಬೆಂಗಳೂರು: ಯಾವುದಾದರೂ ಪಾರ್ಸೆಲ್ ಸ್ವೀಕರಿಸಬೇಕಿದ್ದರೆ, ಬ್ಯಾಂಕ್ ವಹಿವಾಟು ನಡೆಸಬೇಕಿದ್ದರೆ ಒಟಿಪಿ (one time password) ಪಡೆಯುವುದ ಕಡ್ಡಾಯ. ಆದರೆ, ಒಟಿಪಿ ಕಳುಹಿಸುವುದಕ್ಕೆ ಹೊಸ ನಿಯಮವನ್ನು (TRAI New Rule) ಅಕ್ಟೋಬರ್ 1ರಿಂದ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯ (TRAI) ಜಾರಿಗೊಳಿಸಿದೆ. ಹೊಸ ನಿಯಮಗಳು ಸುರಕ್ಷತೆಯ ದೃಷ್ಟಿಯಲ್ಲಿ ಉತ್ತಮವಾಗಿದ್ದರೂ ಕೋಟ್ಯಂತರ ಮೊಬೈಲ್ ಬಳಕೆದಾರರು ಒಟಿಪಿ ಸ್ವೀಕರಿಸುವ ವಿಚಾರದಲ್ಲಿ ಕೆಲವೊಂದು ಅಡಚಣೆಗಳನ್ನು ಎದುರಿಸುವ ಸಾಧ್ಯತೆಗಳಿವೆ.

ಆರಂಭದಲ್ಲಿ ಸೆಪ್ಟೆಂಬರ್‌ನಲ್ಲೇ ಹೊಸ ನಿಯಮ ಜಾರಿಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ಟೆಲಿಕಾಂ ಆಪರೇಟರ್‌ಗಳಿಗೆ ವ್ಯಾಪಾರ ಸಂದೇಶಗಳ ಪಟ್ಟಿ ತಯಾರಿಸಲು ಹೆಚ್ಚಿನ ಸಮಯ ಬೇಕಾಗಿದ್ದರಿಂದ ಗಡುವನ್ನು ವಿಸ್ತರಿಸಲಾಗಿತ್ತು. ಈಗ ಆನ್‌ಲೈನ್ ಪಾವತಿ ಮತ್ತು ವಿತರಣೆಗಳನ್ನು ಅಧಿಕೃತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಒಟಿಪಿಗಳ ನಿಯಮಗಳು ಜಾರಿ ಬಂದಿವೆ.

ಟೆಲಿಕಾಂ ಆಪರೇಟರ್‌ಗಳು ಪಟ್ಟಿ ಮಾಡಿರುವ ಸಂಸ್ಥೆಗಳಲ್ಲಿ ಗ್ರಾಹಕರಿಗೆ ಪಾರ್ಸೆಲ್ ಕಳುಹಿಸಿರುವ ಕಂಪನಿಗಳು ಇಲ್ಲದೇ ಹೋದರೆ ಸಮಸ್ಯೆ ಆಗುವುದು ಖಚಿತ. ಬಳಕೆದಾರರಿಗೆ ಹಣಕಾಸಿನ ವಹಿವಾಟುಗಳನ್ನು ಪೂರ್ಣಗೊಳಿಸುವುದು ಕಷ್ಟವಾಗಲಿದೆ. ಪಾರ್ಸೆಲ್‌ಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.

TRAI New Rule

ಎಸ್‌ಎಂಎಸ್‌ಗೆ ಹೊಸ ನಿಯಮ

ಭಾರತದಲ್ಲಿ ಮೊಬೈಲ್ ಬಳಕೆದಾರರ ಸುರಕ್ಷತೆ ಹೆಚ್ಚಿಸುವ ಉದ್ದೇಶದಿಂದ ದೂರಸಂಪರ್ಕ ಸಂಸ್ಥೆಗಳು ಅನಧಿಕೃತ ಯುಆರ್‌ಎಲ್, ಒಟಿಟಿ ಮತ್ತು ಎಸ್‌ಎಂಎಸ್ ಸಂದೇಶಗಳನ್ನು ಹೊಂದಿರುವ ಎಪಿಕೆಗಳಿಗೆ ನಿರ್ಬಂಧ ವಿಧಿಸಲು ಟಿಆರ್‌ಎಐ ಕಡ್ಡಾಯಗೊಳಿಸಿದೆ. ಈ ನಿಯಮ ಕೂಡ ಅಕ್ಟೋಬರ್ 1ರಿಂದ ಜಾರಿಯಾಗಿದೆ.

ಟಿಆರ್‌ಎಐನ ಸ್ಪ್ಯಾಮ್ ಮಾರ್ಗಸೂಚಿಯ ಹೊಸ ನಿಯಮದ ಪ್ರಕಾರ ಮೊಬೈಲ್ ಬಳಕೆದಾರರಿಗೆ ಮಾಹಿತಿಯನ್ನು ಕಳುಹಿಸುವ ಕಂಪೆನಿಗಳು ಟೆಲಿಕಾಂ ಸಂಸ್ಥೆಯಲ್ಲಿ ತಮ್ಮ ಹೆಸರನ್ನು ಪಟ್ಟಿ ಮಾಡಬೇಕಾಗುತ್ತದೆ. ಅಜಾಗರೂಕತೆಯಿಂದ ಬಳಕೆದಾರರು ಕ್ಲಿಕ್ ಮಾಡಬಹುದಾದ ಲಿಂಕ್‌ಗಳಿಂದ ಉಂಟಾಗುವ ಅಪಾಯಗಳನ್ನು ತಗ್ಗಿಸಲು ಇದೊಂದು ಸುರಕ್ಷಿತ ಕ್ರಮ.

TRAI New Rule

ಯಾವ ಬದಲಾವಣೆ ?

ಟೆಲಿಕಾಂ ಕಂಪನಿಗಳು ತಮ್ಮನ್ನು ಖಾತ್ರಿಪಡಿಸುವ ಹೊಸ ಸಂದೇಶ ಮಾದರಿ ರಚಿಸಬೇಕು. ಎಸ್‌ಎಂಎಸ್‌ ಸಂದೇಶಗಳ ಕಠಿಣ ತಪಾಸಣೆಗೆ ಇರುವ ಏಕೈಕ ಮಾರ್ಗ ಇದಾಗಿದೆ. ಯಾವುದೇ ಸಂದೇಶದಲ್ಲಿ ಯುಆರ್‌ಎಲ್ ಅಥವಾ ಫೋನ್ ನಂಬರ್‌ಗಳಿದ್ದರೆ ಅವುಗಳ ಪಟ್ಟಿ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ನೆಟ್ವರ್ಕ್ ಆಪರೇಟರ್‌ಗಳು ಈ ಸಂದೇಶಗಳನ್ನು ನಿರ್ಬಂಧಿಸುತ್ತಾರೆ

ಇನ್ನು ಎಸ್‌ಎಂಎಸ್‌ ಪಠ್ಯಗಳ ಮೇಲ್ಭಾಗದಲ್ಲಿ ಕಾಣುತ್ತವೆ. ಸಂದೇಶ ವಿಷಯದ ಸಾಲಿನಂತೆಯೇ ಇದು ಇರುತ್ತದೆ. ಬ್ಯಾಂಕ್‌, ಪಾವತಿ ಸೇವೆ ಅಥವಾ ಝೋಮ್ಯಾಟೋ, ಉಬರ್ ನಂತಹ ವಿವಿಧ ಪ್ಲಾಟ್‌ಫಾರ್ಮ್‌ಗಳ ಮಾಹಿತಿಯಲ್ಲಿಯೂ ಕಾಣಲೇಬೇಕು.

Life Insurance Policy: ಎಲ್‌ಐಸಿ ಪಾಲಿಸಿದಾರರಿಗೆ ಗುಡ್‌ನ್ಯೂಸ್; ಸರೆಂಡರ್ ಮೌಲ್ಯ ಹೆಚ್ಚಳ

ಇದರಿಂದ ಅಪಾಯವನ್ನು ಉಂಟು ಮಾಡುವ ಯಾವುದೇ ವಾಣಿಜ್ಯ ಸಂದೇಶಗಳು ರವಾನೆಯಾಗುವುದಿಲ್ಲ ಎಂದು ಪರಿಶೀಲಿಸಲು ವಿಶ್ವಾಸಾರ್ಹ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತದೆ.