ಭೋಪಾಲ್: ಜಮ್ಮು-ಕಾಶ್ಮೀರದಿಂದ ಕರ್ನಾಟಕಕ್ಕೆ ಯೋಧರನ್ನು ಹೊತ್ತೊಯ್ಯುತ್ತಿದ್ದ ರೈಲು ಸ್ಫೋಟ(Train blast Attempt)ಕ್ಕೆ ಸಂಚು ರೂಪಿಸಿ ಹಳಿಗಳುದ್ದಕ್ಕೂ ಸ್ಫೋಟಕ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರೈಲ್ವೇ ಸಿಬ್ಬಂದಿಯೋರ್ವನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತನನ್ನು ಶಬೀರ್ ಎಂದು ಗುರುತಿಸಲಾಗಿದ್ದು, ಈತ ರೈಲ್ವೇ ಮಧ್ಯಪ್ರದೇಶದಲ್ಲಿ ಹಳಿಗಳ ಮೇಲೆ 10ಸ್ಫೋಟಕ ವಸ್ತುಗಳನ್ನು ಇಟ್ಟು, ರೈಲು ಸ್ಫೋಟಕ್ಕೆ ಸಂಚು ರೂಪಿಸಿದ್ದ. ಆದರೆ ಅದೃಷ್ಟವಶಾತ್ ರೈಲ್ವೆ ಅಧಿಕಾರಿಗಳ ಸಮಯಪ್ರಜ್ಞೆಯಿಂದ ಭಾರೀ ದುರಂತ ತಪ್ಪಿದೆ ಎನ್ನಲಾಗಿದೆ.
On detonators found on a railway track in Burhanpur, Madhya Pradesh, Central Railway says, "Shabeer, a Railway employee has been detained by Railway Protection Force (RPF) for enquiry."
— ANI (@ANI) September 23, 2024
ರೈಲ್ವೇ ಸಂರಕ್ಷಣಾ ಪಡೆ (ಆರ್‌ಪಿಎಫ್) ಆರೋಪಿ ಶಬೀರ್‌ನನ್ನು ಬಂಧಿಸಿದ್ದು, ಪ್ರಸ್ತುತ ರೈಲ್ವೇ ಆಸ್ತಿ ಕಾನೂನುಬಾಹಿರ ಸ್ವಾಧೀನ ಕಾಯ್ದೆಯಡಿ ತನಿಖೆ ನಡೆಸುತ್ತಿದೆ. ಇದಲ್ಲದೆ, ಆರೋಪಿಯ ಬಂಧನವನ್ನು ಸೆಂಟ್ರಲ್ ರೈಲ್ವೆ ಬಹಿರಂಗಪಡಿಸಿದೆ. ರೈಲ್ವೇ ಹಳಿಯಲ್ಲಿ ಡಿಟೋನೇಟರ್‌ಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಶಬೀರ್‌ನನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದೆ.
ಏನಿದು ಘಟನೆ?
ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯಲ್ಲಿ ಸೆ.18ರಂದು ಸೇನಾ ಯೋಧರನ್ನು ಹೊತ್ತೊಯ್ಯುತ್ತಿದ್ದ ರೈಲನ್ನು ಗುರಿಯಾಗಿಸಿ ಭಾರೀ ಸ್ಫೋಟಕ್ಕೆ ಸಂಚು ರೂಪಿಸಿರುವ ವಿಚಾರ ಬೆಳಕಿಗೆ ಬಂದಿತ್ತು. ಸಗ್ಪಥಾ ರೈಲ್ವೇ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಸೇನೆಯ ವಿಶೇಷ ರೈಲೊಂದು ಜಮ್ಮು-ಕಾಶ್ಮೀರದಿಂದ ಕರ್ನಾಟಕಕ್ಕೆ ಹೊರಟಿತ್ತು. ಈ ರೈಲನ್ನು ಗುರಿಯಾಗಿಸಿ ಕಿಡಿಗೇಡಿಗಳು ಸ್ಫೋಟಕ್ಕೆ ಸಂಚು ರೂಪಿಸಿದ್ದರು. ರೈಲ್ವೇ ಹಳಿಯುದ್ದಕ್ಕೂ ಸ್ಫೋಟಕಗಳನ್ನು ಅಳವಡಿಸಿ ವಿಧ್ವಂಸಕ ಕೃತ್ಯಕ್ಕೆ ಪ್ಲ್ಯಾನ್ ಮಾಡಿಕೊಂಡಿದ್ದರು. ಸ್ಫೋಟಕಗಳ ಮೇಲೆ ರೈಲು ಹೋಗುತ್ತಿದ್ದಂತೆ ಲೋಕೋ ಪೈಲಟ್‌ಗೆ ಇದರ ಅರಿವಾಗಿದ್ದು, ತಕ್ಷಣ ರೈಲನ್ನು ನಿಲ್ಲಿಸಿದ್ದಾರೆ. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ಸ್ಥಳಕ್ಕೆ ಭಯೋತ್ಪಾದಕ ನಿಗ್ರಹ ದಳ(ATS) ಮತ್ತು ಎನ್‌ಐಎ ಸ್ಥಳಕ್ಕೆ ಧಾವಿಸಿ ತನಿಖೆ ಕೈಗೆತ್ತಿಕೊಂಡಿತ್ತು.
And now this 👇@CNNnews18
— Anand Narasimhan🇮🇳 (@AnchorAnandN) September 22, 2024
Someone placed multiple detonators on the tracks in Nepanagar, Madhya Pradesh. Incident happened on 18th Sep. These detonators were railway detonators typically used to produce sound during the foggy season. When a special Army train passed over the… pic.twitter.com/9ZeQCWIAqy
ಈ ಸುದ್ದಿಯನ್ನೂ ಓದಿ: Train Blast in india : ಕರ್ನಾಟಕಕ್ಕೆ ಸೇನಾ ಸಿಬ್ಬಂದಿ ಕರೆದೊಯ್ಯುತ್ತಿದ್ದ ರೈಲು ಹಳಿ ಸ್ಫೋಟಿಸಿದ ದುಷ್ಕರ್ಮಿಗಳು