Saturday, 23rd November 2024

ವಿವಿಐಪಿಗಳ ಭದ್ರತೆಗೆ ಮಹಿಳಾ ಕಮಾಂಡೋಗಳಿಗೆ ತರಬೇತಿ ಆರಂಭ

ನವದೆಹಲಿ: ದೇಶದ ಅನೇಕ ವಿವಿಐಪಿಗಳ ಭದ್ರತೆಗೆಂದು ಮೊದಲ ಬಾರಿಗೆ ಮಹಿಳಾ ಕಮಾಂಡೋ ಗಳನ್ನು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಜ್ಜುಗೊಳಿಸುತ್ತಿದೆ.

ಮಹಿಳಾ ಸಿಬ್ಬಂದಿಯ ಪಡೆ 10 ವಾರಗಳ ತರಬೇತಿ ಆರಂಭಿಸಿದ್ದು, 33 ಮಹಿಳೆಯರು ಭಾಗಿಯಾಗಿ ದ್ದಾರೆ. ಭಾರೀ ಕಟ್ಟುನಿಟ್ಟಿನ ಆಯ್ಕೆ ಪ್ರಕ್ರಿಯೆ ಮೂಲಕ ಈ 33 ಮಹಿಳೆಯರನ್ನು ಆಯ್ಕೆ ಮಾಡಲಾ ಗಿದೆ. 33 ಮಂದಿಯನ್ನು ತರಬೇತಿಗೆ ಅಂತಿಮಗೊಳಿಸಲಾಗಿದ್ದು, ಪೇದೆಗಳಿಂದ ಸಬ್‌-ಇನ್ಸ್‌ಪೆಕ್ಟರ್‌ ವರೆಗು ಭಿನ್ನ ಸಾಮರ್ಥ್ಯ ಗಳಲ್ಲಿ ಕೆಲಸ ನಿರ್ವಹಿಸುವವರಿದ್ದಾರೆ.

ಎಕೆ-47 ಬಂದೂಕುಗಳೊಂದಿಗೆ ಸುಸಜ್ಜಿತ ಶಸ್ತ್ರಗಳೊಂದಿಗೆ ಗ್ರೇಟರ್‌ ನೋಯಿಡಾದಲ್ಲಿರುವ ಕ್ಯಾಂಪಸ್‌ನಲ್ಲಿ ವಿಶೇಷ ತರಬೇತಿ ಪಡೆಯಲಿದ್ದಾರೆ. ಮಹಿಳೆಯರ ಆರು ಪ್ಲಟೂನ್‌ಗಳನ್ನು ಸಜ್ಜುಗೊಳಿಸಲು ಕೇಂದ್ರ ಗೃಹ ಸಚಿವಾಲಯದ ಅನುಮತಿ ಪಡೆದ ಬಳಿಕ ಈ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.

ವಿವಿಐಪಿಗಳ ಭದ್ರತೆಯ ವಿಚಾರದಲ್ಲಿ ವಿಶೇಷ ಭದ್ರತಾ ಪಡೆ(ಎಸ್‌ಪಿಜಿ) ಹಾಗೂ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗಳ (ಸಿಐಎಸ್‌ಎಫ್‌) ಮಾದರಿಯನ್ನು ಅನುಸರಿಸುತ್ತಿರುವ ಸಿಆರ್‌ಪಿಎಫ್‌, ಒಟ್ಟಾರೆ 3.25 ಲಕ್ಷದಷ್ಟು ಇರುವ ತನ್ನ ಸಿಬ್ಬಂದಿ ಬಲದಲ್ಲಿ 6,000ದಷ್ಟು ಮಹಿಳೆಯರನ್ನು ಹೊಂದಿದೆ.

ಮಹಿಳೆಯರ ಆರು ಬೆಟಾಲಿಯನ್‌ಗಳನ್ನು ಹೊಂದಿರುವ ಸಿಆರ್‌ಪಿಎಫ್‌, ಸದ್ಯದ ಮಟ್ಟಿಗೆ ಜಮ್ಮು ಮತ್ತು ಕಾಶ್ಮೀರ, ಅಯೋಧ್ಯಾ, ಮಣಿಪುರ, ಅಸ್ಸಾಂ ಹಾಗೂ ದೇಶದ ಇತರೆ ಭಾಗಗಳಲ್ಲಿ ಕರ್ತವ್ಯಕ್ಕೆ ತನ್ನ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಿದೆ.