Sunday, 15th December 2024

ಸ್ನಾಕ್ಸ್ ಫುಡ್ ಸಂಸ್ಥೆ ಗೋದಾಮಿನಲ್ಲಿ ಅಗ್ನಿ ಅವಗಢ: ಸಾಗಣೆ ವಾಹನಗಳು ಭಸ್ಮ

ಥಾಣೆ: ನಗರದ ಹೆಸರಾಂತ ಸ್ನಾಕ್ಸ್ ಫುಡ್ ತಯಾರಕ ಸಂಸ್ಥೆಯ ಗೋದಾಮಿನಲ್ಲಿ ಶುಕ್ರವಾರ ಉಂಟಾದ ಅಗ್ನಿ ಆಕಸ್ಮಿಕದಲ್ಲಿ 12 ಸಾಗಾಣಿಕೆ ವಾಹನಗಳು ಸಂಪೂರ್ಣ ಭಸ್ಮವಾಗಿದೆ.

ನಗರದ ಪ್ರಮುಖ ತಿಂಡಿ ತಯಾರಕ ಕಂಪನಿ ಮನ್‍ಪಾಡಾ ಗೋಡೌನ್‍ಗೆ ಬೆಂಕಿ ತಗುಲಿದ್ದು, ಸರಕುಗಳನ್ನು ತುಂಬಿದ್ದ 12 ವಾಹನ ಗಳಿಗೆ ದೊಡ್ಡ ಪ್ರಮಾಣದ ಬೆಂಕಿ ಆವರಿಸಿ ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಅದೃಷ್ಟವಶಾತ್ ಅಪಘಾತದಲ್ಲಿ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ ಎಂದು ಆರ್‍ಡಿಎಂಸಿ ಮುಖ್ಯಸ್ಥ ಸಂತೋಷ್ ಕದಂ ತಿಳಿಸಿದ್ದಾರೆ.

ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸಿದೆ.