ಜಮ್ಮು: ಕಳೆದ ವರ್ಷ ದಕ್ಷಿಣ ಕಾಶ್ಮೀರದಲ್ಲಿ ಮೂವರು ಬಿಜೆಪಿ ಕಾರ್ಯಕರ್ತರ ಹಾಗೂ ಒಬ್ಬ ಪೊಲೀಸ್ ಸಿಬ್ಬಂದಿ ಕೊಲೆ ಮಾಡಿ ತಪ್ಪಿಸಿಕೊಂಡಿದ್ದ ಟಿಆರ್‌ರ‍್ಫ್‌ಗೆ ಸೇರಿದ ಪ್ರಮುಖ ಉಗ್ರನನ್ನು ಸಾಂಬಾ ಜಿಲ್ಲೆಯಲ್ಲಿ ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಜಹೂರ್ ಅಹಮದ್ ಅಲಿಯಾಸ್ ಖಾಲಿದ್‍ನನ್ನು ಸಾಂಬಾ ಜಿಲ್ಲೆಯ ಮನೆಯೊಂದರಲ್ಲಿ ಬಂಧಿಸ ಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಲಷ್ಕರ್-ಎ-ತೋಯ್ಬಾ (ಎಲ್‍ಇಟಿ) ಭಯೋತ್ಪಾದಕ ಸಂಘಟನೆ ಶಾಖೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಟಿಆರ್‍ಎಫ್‍ನ ಮುಖಂಡನಾಗಿ ಖಾಲಿದ್ ಉಗ್ರ ಚಟುವಟಿಕೆಗಳನ್ನು ನಡೆಸುತ್ತಿದ್ದ. ಪಾಕಿಸ್ತಾನದಿಂದ ಬಂದ ಅಕ್ರಮ ಶಸ್ತ್ರಾಸ್ತ್ರಗಳನ್ನು ಪಡೆದು ಕೊಳ್ಳಲು ಖಾಲಿದ್ ಸಾಂಬಾಗೆ ಬಂದಿದ್ದು, ಮನೆಯೊಂದನ್ನು ಬಾಡಿಗೆ ಪಡೆದು ವಾಸಿಸುತ್ತಿದ್ದ ಖಚಿತ ಸುಳಿವು ಅನಂತನಾಗ್ ಪೊಲೀಸರಿಗೆ ತಿಳಿದಿದೆ.
ಖಾಲಿದ್, ಕಳೆದ ವರ್ಷ ದಕ್ಷಿಣ ಕಾಶ್ಮೀರದ ಕುಲ್ಗಾಮ್‍ನ ಬಿಜೆಪಿ ಕಾರ್ಯಕರ್ತರನ್ನು ಹತ್ಯೆಗೈದು ಒಂದು ಪೊಲೀಸ್ ಸಿಬ್ಬಂದಿ ಯನ್ನು ಫುರ್ರಾ ಗ್ರಾಮದಲ್ಲಿ ಕೊಲೆ ಮಾಡಿದ್ದ ಆರೋಪ ಎದುರಿಸುತ್ತಿದ್ದಾನೆ.
ಖಾಲಿದ್ ಬಂಧನದಿಂದ ಕಣಿವೆ ಪ್ರದೇಶದಲ್ಲಿ ಮತ್ತೊಬ್ಬ ಪ್ರಮುಖ ಭಯೋತ್ಪಾದಕನ ಬಂಧನವಾದಂತಾಗಿದೆ. ಉಗ್ರನ ವಿಚಾರಣೆ ನಡೆಯುತ್ತಿದ್ದು, ಮತ್ತಷ್ಟು ಉಗ್ರರ ಬಂಧನ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.