Sunday, 15th December 2024

ದೀದಿ ಪಕ್ಷಕ್ಕೆ ತ್ರಿಪುರ ಬಿಜೆಪಿ ಶಾಸಕ ಸೇರ್ಪಡೆ ಶೀಘ್ರ

ಕೋಲ್ಕತ್ತಾ: ತ್ರಿಪುರ ಬಿಜೆಪಿ ಶಾಸಕ ಆಶಿಷ್​ ದಾಸ್​ ತೃಣಮೂಲ ಕಾಂಗ್ರೆಸ್​ ಸೇರ್ಪಡೆ ಯಾಗಲಿದ್ದಾರೆ.

ಟಿಎಂಸಿ ನಾಯಕರ ಜೊತೆ ಚರ್ಚೆ ನಡೆಸುತ್ತಿರುವ ಆಶಿಷ್​ ದಾಸ್​ ಬುಧವಾರ ದೀದಿ ಪಕ್ಷಕ್ಕೆ ಸೇರಲಿದ್ದಾರೆ. ತೃಣಮೂಲ ಕಾಂಗ್ರೆಸ್​ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್​ ಬ್ಯಾನರ್ಜಿ ಜೊತೆ ಕೊಲ್ಕತ್ತಾದ ಕಚೇರಿಯಲ್ಲಿ ಶಾಸಕ ಆಶಿಷ್​ ದಾಸ್​ ಮಾತುಕತೆ ನಡೆಸಿ ದ್ದಾರೆ.

ಬಿಜೆಪಿ ಶಾಸಕ ಆಶಿಷ್​ ದಾಸ್​, ನಾನು ಕಲಿಘಾಟ್​ ದೇಗುಲಕ್ಕೆ ಭೇಟಿ ನೀಡಿ ಬಿಜೆಪಿ ಪಕ್ಷಕ್ಕಾಗಿ ಸೇವೆ ಸಲ್ಲಿಸಿದ್ದಕ್ಕೆ ಪ್ರಾಯಶ್ವಿತವಾಗಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮುಂದಿನ ಹೆಜ್ಜೆ ಇಡಲಿದ್ದೇನೆ ಎಂದು ಹೇಳಿದರು.

ತ್ರಿಪುರದಲ್ಲಿ 2023ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈಗಾಗಲೇ, ತ್ರಿಪುರಾ ದಲ್ಲೂ ಅಧಿಕಾರ ಸ್ಥಾಪನೆಗೆ ಮುಂದಾ ಗಿರುವ ಟಿಎಂಸಿ 2023ರಲ್ಲಿ ವಿಪ್ಲಬ್​ ದೇವ್​ ನೇತೃತ್ವದ ಬಿಜೆಪಿ ಸರ್ಕಾರ ಉರುಳಿಸಲು ಪ್ಲಾನ್​ ಮಾಡುತ್ತಿದೆ.

ಕೆಲ ಸಮಯದ ಹಿಂದಷ್ಟೇ ತ್ರಿಪುರಾ ಸರ್ಕಾರ ಎರಡು ಬಾರಿ ರಾಜ್ಯದಲ್ಲಿ ತೃಣಮೂಲ ಕಾಂಗ್ರೆಸ್​​ ಪಾದಯಾತ್ರೆಗೆ ಅನುಮತಿ ನಿರಾಕರಿಸಿತ್ತು. ಈ ವಿಚಾರವನ್ನು ಪ್ರಶ್ನಿಸಿ ಟಿಎಂಸಿ ಹೈಕೋರ್ಟ್ ಮೆಟ್ಟಿಲೇರಿತ್ತು.