Thursday, 12th December 2024

ಆಲ್ಕೋಹಾಲ್ ಎಂದು ಆಸಿಡ್ ಕುಡಿದು ಸಾವು

ಕೊವೈ: ತ್ರಿಪುರದ ಕೊವೈ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಆಲ್ಕೋಹಾಲ್ ಎಂದು ತಪ್ಪಾಗಿ ಆಸಿಡ್ ಕುಡಿದು ಮೃತಪಟ್ಟಿದ್ದಾನೆ.

ಮೃತನನ್ನು ಕಾರ್ತಿಕ್ ದೆಬಾರ್ಮಾ ಎಂದು ಗುರುತಿಸಲಾಗಿದೆ. ಫುಲ್ ಬಾಟಲ್ ಆಸಿಡ್ ಕುಡಿದು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿ ದ್ದಾರೆ.

ಕುಡಿತದ ಚಟ ಬೆಳೆಸಿಕೊಂಡಿದ್ದ ದೆಬಾರ್ಮಾ, ಸ್ಥಳೀಯ ಲಿಕ್ಕರ್ ಅಂಗಡಿಯಿಂದ ಕಂಠಪೂರ್ತಿ ಕುಡಿದಿದ್ದಾನೆ. ನಂತರ ಮನೆಗೆ ಬಂದು ಮಲಗಿದ್ದಾನೆ. ಮಧ್ಯರಾತ್ರಿಯಲ್ಲಿ ಮತ್ತೆ ಕುಡಿದಿದ್ದಾನೆ. ಅರೆಪ್ರಜ್ಞಾವಸ್ಥೆಯಲ್ಲಿ ಕಂಡುಬಂದ ಕೂಡಲೇ ಆತನ ಕುಟುಂಬ ಸದಸ್ಯರು ಆಸ್ಪತ್ರೆಗೆ ಸೇರಿಸಿದ್ದಾರೆ.