Sunday, 15th December 2024

ತ್ರಿಪುರದಲ್ಲಿ ಬಿಸಿಗಾಳಿ: ಏ.23 ರವರೆಗೆ ಶಾಲೆ ಮುಚ್ಚುಗಡೆ

ತ್ರಿಪುರ: ಬಿಸಿಲಿನ ಝಳದಿಂದಾಗಿ ದೈನಂದಿನ ಜೀವನಕ್ಕೆ ತೊಂದರೆಯಾಗತೊಡಗಿದೆ. ಮಕ್ಕಳು ಶಾಲೆಗೆ ಹೋಗಿ ಬರುವಾಗ ಬಿಸಿಲಿನ ತಾಪ ಎದುರಿಸಬೇಕಾಗಿದೆ.

ಬಿಸಿಗಾಳಿ ಪರಿಸ್ಥಿತಿಯಿಂದಾಗಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳನ್ನು ಏಪ್ರಿಲ್ 18 ರಿಂದ 23 ರವರೆಗೆ ಮುಚ್ಚಲಾಗುವುದು ಎಂದು ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಹಾ ಹೇಳಿದ್ದಾರೆ.

ಬಿಸಿಲಿನ ತಾಪವು ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ, ಎಲ್ಲಾ ಸರ್ಕಾರಿ ಮತ್ತು ರಾಜ್ಯ ಅನುದಾನಿತ ಶಾಲೆಗಳನ್ನು ಮುಚ್ಚುವುದಾಗಿ ಘೋಷಿಸಿದ್ದಾರೆ. ಚಾಲ್ತಿ ಯಲ್ಲಿರುವ ಹವಾಮಾನ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಖಾಸಗಿ ಶಾಲೆಗಳಿಗೂ ಇದೇ ರೀತಿ ಮಾಡುವಂತೆ ಅವರು ಮನವಿ ಮಾಡಿದರು.

ತ್ರಿಪುರಾದಲ್ಲಿ 4,226 ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳು 7.02 ಲಕ್ಷ ವಿದ್ಯಾರ್ಥಿಗಳನ್ನು ಹೊಂದಿವೆ. ಆದರೆ, ರಾಜ್ಯದ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯ ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

ತ್ರಿಪುರಾದಲ್ಲಿ ಕಳೆದ ಮೂರು ದಿನಗಳಿಂದ ಪಾದರಸವು ಸುಮಾರು 37 ಡಿಗ್ರಿ ಸೆಲ್ಸಿಯಸ್ ಇತ್ತು. ಏಪ್ರಿಲ್ 20ರವರೆಗೆ ಮಳೆಯಾ ಗುವ ಸಾಧ್ಯತೆ ಇಲ್ಲ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಒಡಿಶಾದಲ್ಲಿ ಬಿಸಿಲಿನ ತಾಪದಿಂದಾಗಿ ಬಾವಲಿಗಳು ಸಾವನ್ನಪ್ಪುತ್ತಿವೆ, ಈಗಾಗಲೇ 8 ಬಾವಲಿಗಳು ಮೃತಪಟ್ಟಿದ್ದು, ಉಳಿದವು ಗಳನ್ನು ಉಳಿಸಿಕೊಳ್ಳಲು ಸ್ಥಳೀಯರು ನೀರು ಸ್ಪ್ರೇ ಮಾಡುತ್ತಿದ್ದಾರೆ.