Thursday, 12th December 2024

ಟಿಆರ್‌ಪಿ ಹಗರಣ: 14ನೇ ಆರೋಪಿ ರೊಮಿಲ್‌ ರಾಮ್‌ಗರ‍್ಹಿಯಾ ಬಂಧನ

ಮುಂಬೈ: ಟಿಆರ್‌ಪಿ ಹಗರಣದ ಸಂಬಂಧ ಮುಂಬೈ ಪೊಲೀಸರು ಗುರುವಾರ ಪ್ರಸಾರ ವೀಕ್ಷಕ ಸಂಶೋಧನಾ ಮಂಡಳಿಯ ಮಾಜಿ ಮುಖ್ಯ ನಿರ್ವಹಣಾಧಿಕಾರಿ ರೊಮಿಲ್‌ ರಾಮ್‌ಗರ‍್ಹಿಯಾ ರನ್ನು ಬಂಧಿಸಿದ್ದಾರೆ. ಹಗರಣದ ಸಂಬಂಧ ಬಂಧಿಸಲಾದ 14ನೇ ಆರೋಪಿಯಾಗಿದ್ದಾರೆ.

ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದರು. ಭಾನುವಾರ ರಿಪಬ್ಲಿಕ್‌ ಮೀಡಿಯಾ ನೆಟ್‌ವರ್ಕ್‌ನ ಸಿಇಒ ವಿಕಾಸ್‌ ಖಾನ್‌ಚಂದಾನಿರನ್ನು ಬಂಧಿಸಿದ್ದು, ಬುಧವಾರ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದರು.