Thursday, 12th December 2024

ಏಳು ಟ್ರಕ್ ಗಳ ಮೇಲೆ ಶಂಕಿತ ಉಗ್ರರ ದಾಳಿ, ಐದು ಜನರ ಸಾವು

ಗುವಾಹಟಿ: ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯಲ್ಲಿ ಗುರುವಾರ ರಾತ್ರಿ ಏಳು ಟ್ರಕ್ ಗಳ ಮೇಲೆ ಶಂಕಿತ ಉಗ್ರರು ನಿರ್ದಾಕ್ಷಿಣ್ಯವಾಗಿ ಗುಂಡು ಹಾರಿಸಿ, ಬೆಂಕಿ ಹಚ್ಚಿದ ಪರಿಣಾಮ ಐವರು ಜನರು ಮೃತಪಟ್ಟು, ಒಬ್ಬರು ಗಾಯಗೊಂಡಿದ್ದಾರೆ.

ಶಸ್ತ್ರಸಜ್ಜಿತ ಜನರ ಗುಂಪು ಸಿಮೆಂಟ್ ಸಾಗಿಸುತ್ತಿದ್ದ ಆರು ಮತ್ತು ಕಲ್ಲಿದ್ದಲು ತುಂಬಿದ ಟ್ರಕ್ ಗಳನ್ನು ನಿಲ್ಲಿಸಿ ನಿರ್ದಾಕ್ಷಿಣ್ಯವಾಗಿ ಗುಂಡು ಹಾರಿಸಲು ಪ್ರಾರಂಭಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.

ಗುಂಪು ಹಲವಾರು ನಿಮಿಷಗಳ ಕಾಲ ವಾಹನಗಳ ಮೇಲೆ ಗುಂಡು ಹಾರಿಸಿ ನಂತರ ಅವರಿಗೆ ಬೆಂಕಿ ಹಚ್ಚಿತು. ಘಟನೆಯಲ್ಲಿ ಐದು ಜನರು ಮೃತಪಟ್ಟಿದ್ದು, ಒಬ್ಬರಿಗೆ ಗಾಯವಾಗಿದೆ. ಅವರೆಲ್ಲರೂ ಟ್ರಕ್ ಗಳ ಚಾಲಕರು ಮತ್ತು ಹ್ಯಾಂಡಿಮ್ಯಾನ್ ಗಳು’ ಎಂದು ದಿಮಾ ಹಸಾವೊ ದ ಪೊಲೀಸ್ ಅಧೀಕ್ಷಕ ಜಯಂತ್ ಸಿಂಗ್ ಹೇಳಿ ದರು.

ಈ ದಾಳಿಯಲ್ಲಿ ದಿಮಾಸಾ ರಾಷ್ಟ್ರೀಯ ವಿಮೋಚನಾ ಸೇನೆ ಭಾಗಿಯಾಗಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಡಿಎನ್ಎಲ್ಎಯ ಸುಲಿಗೆ ಬೇಡಿಕೆ ಗಳಿಗೆ ಮಣಿಯಲು ಸಿಮೆಂಟ್ ಕಾರ್ಖಾನೆ ನಿರಾಕರಿಸಿದ್ದು ಅದಕ್ಕೆ ಕಾರಣವಾಗಿದೆ ಎಂದು ಶಂಕಿಸಲಾಗಿದೆ. ಘಟನೆ ನಡೆದ ತಕ್ಷಣ ಹೆಚ್ಚುವರಿ ಪಡೆಗಳನ್ನು ಸ್ಥಳಕ್ಕೆ ಸಾಗಿಸ ಲಾಗಿದ್ದು, ಘಟನೆಯಲ್ಲಿ ಭಾಗಿಯಾಗಿರುವವರನ್ನು ಬಂಧಿಸಲು ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ’ ಎಂದು ಸಿಂಗ್ ಹೇಳಿದರು.