Saturday, 23rd November 2024

ಸಾಯಿಬಾಬಾ ದೇವಸ್ಥಾನ ಟ್ರಸ್ಟ್‌ಗೆ ತೆರಿಗೆ ವಿನಾಯಿತಿ

ಪುಣೆ: ₹ 175 ಕೋಟಿ ಆದಾಯ ತೆರಿಗೆ ಪಾವತಿಸುವುದರಿಂದ ಶಿರಡಿಯ ಶ್ರೀಸಾಯಿಬಾಬಾ ದೇವಸ್ಥಾನ ಟ್ರಸ್ಟ್‌ಗೆ ವಿನಾಯಿತಿ ನೀಡಲಾಗಿದೆ.

‘ಸುಪ್ರೀಂಕೋರ್ಟ್‌ನ ಆದೇಶದ ಅನ್ವಯ ಆದಾಯ ತೆರಿಗೆ ಇಲಾಖೆ ಈ ಕ್ರಮ ಕೈಗೊಂಡಿದೆ’ ಎಂದು ಟ್ರಸ್ಟ್‌ನ ಪ್ರಕಟಣೆ ತಿಳಿಸಿದೆ.

‘2015-16ನೇ ಹಣಕಾಸು ವರ್ಷದ ತೆರಿಗೆ ನಿರ್ಧರಿಸುವ ಸಂದರ್ಭದಲ್ಲಿ, ಆದಾಯ ತೆರಿಗೆ ಇಲಾಖೆಯು ಸಾಯಿಬಾಬಾ ಸಂಸ್ಥಾನ ವನ್ನು ಧಾರ್ಮಿಕ ಟ್ರಸ್ಟ್‌ ಬದಲಾಗಿ ಚಾರಿಟಬಲ್ ಟ್ರಸ್ಟ್‌ ಎಂದು ಪರಿಗಣಿಸಿ, ದೇಣಿಗೆ ಮೇಲೆ ಶೇ 30ರಷ್ಟು ಆದಾಯ ತೆರಿಗೆ ವಿಧಿಸಿತ್ತು’. ‘ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.

ಕೋರ್ಟ್‌ನ ಆದೇಶದಂತೆ, ಸಾಯಿಬಾಬಾ ಸಂಸ್ಥಾನವನ್ನು ಧಾರ್ಮಿಕ ಹಾಗೂ ಚಾರಿಟ ಬಲ್ ಟ್ರಸ್ಟ್‌ ಎಂದು ಪರಿಗಣಿಸಿದ ಇಲಾಖೆ, ಆದಾಯ ತೆರಿಗೆ ಪಾವತಿಸುವುದರಿಂದ ವಿನಾ ಯಿತಿ ನೀಡಿದೆ’ ಎಂದು ಟ್ರಸ್ಟ್‌ ತಿಳಿಸಿದೆ.