Sunday, 15th December 2024

ಟಿವಿ ವರದಿಗಾರನ ಬರ್ಬರ ಹತ್ಯೆ: ದುಷ್ಕರ್ಮಿಗಳ ಬಂಧನ

ಚೆನ್ನೈ: ಟಿವಿ ವರದಿಗಾರನನ್ನು ಭಾನುವಾರ ತಡರಾತ್ರಿ ಮೂವರು ದುಷ್ಕರ್ಮಿಗಳ ಗ್ಯಾಂಗ್ ಚೆನ್ನೈನ ಹೊರವಲಯದಲ್ಲಿ ಬರ್ಬರವಾಗಿ ಕೊಲೆ ಮಾಡಿದೆ.

ಕುಂದ್ರಾತೂರ್‌ನ ಸೋಮಂಗಲಂ ಬಳಿಯ ನಲ್ಲೂರು ಗ್ರಾಮದ ನಿವಾಸಿಯಾಗಿದ್ದ ಮೊಸೆಸ್, ತಮಿಳನ್ ಟಿವಿಯ ವರದಿಗಾರನಾಗಿ ಕೆಲಸ ಮಾಡುತ್ತಿದ್ದರು. ಅವರ ತಂದೆ ಜ್ಞಾನರಾಜ್ ಯೇಸುದಾಸನ್ ಸಹ ತಮಿಳು ದಿನಪತ್ರಿಕೆಯ ವರದಿಗಾರರು.

ಭಾನುವಾರ ರಾತ್ರಿ ಮೊಸೆಸ್‌ಗೆ ದೂರವಾಣಿ ಕರೆ ಬಂದ ನಂತರ ಮನೆಯಿಂದ ಹೊರಟುಹೋದ ನಂತರ ವಾಪಸ್ ಹಿಂತಿರುಗ ಲಿಲ್ಲ. ಮೂವರು ದುಷ್ಕರ್ಮಿಗಳ ಗುಂಪು ಮೊಸೆಸ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾರೆ ಎಂದು ಕಾಂಚೀಪುರಂ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಘಟನೆ ನಡೆದು ಎರಡು ಗಂಟೆಗಳಲ್ಲಿ ಪೊಲೀಸರು ಮೂವರು ಹಂತಕರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ವಿಘ್ನೇಶ್(19), ವೆಂಕಟೇಶ್(18), ಮತ್ತು ಮನೋಜ್(19) ಎಂದು ಗುರುತಿಸಲಾಗಿದೆ.