Saturday, 23rd November 2024

ಸೈನ್‌ಇನ್ ಆಗದೆ ಓದುವ ಟ್ವೀಟ್‌ ಪೋಸ್ಟ್‌ಗಳಿಗೆ ಮಿತಿ…!

ವದೆಹಲಿ: ಎಲಾನ್ ಮಸ್ಕ್ ಯಾವುದೇ ಟ್ವೀಟ್ ನೋಡಲು, ಅದರಲ್ಲಿರುವ ವಿಷಯ ಓದಲು ಕಡ್ಡಾಯವಾಗಿ ಟ್ವಿಟರ್‌ಗೆ ಸೈನ್‌ ಇನ್ ಆಗಬೇಕು ಎಂದು ಹೇಳಿದ್ದಾರೆ. ಸೈನ್‌ಇನ್ ಆಗದೆ ಓದುವ ಟ್ವೀಟ್‌ ಪೋಸ್ಟ್‌ಗಳಿಗೆ ಮಿತಿ ಹೇರಿದ್ದಾರೆ.

ಜನರು ಇಷ್ಟು ದಿನ ನೇರವಾಗಿ ಟ್ವೀಟ್ ಕ್ಲಿಕ್ ಮಾಡಿದರೆ ಅದನ್ನು ಸೈನ್‌ಇನ್ ಆಗದೇ ವೀಕ್ಷಣೆ ಮಾಡಬಹುದಿತ್ತು. ಆದರೆ ಇನ್ನೂ ಮುಂದೆ ಪ್ರತಿದಿನ ಹೀಗೆ ಕೆಲವು ಪೋಸ್ಟ್‌ ಗಳನ್ನು ಮಾತ್ರ ನೋಡಲು ಸಾಧ್ಯ. ಉಳಿದ ಪೋಸ್ಟ್‌ಗಳನ್ನು ನೋಡಲು ಸೈನ್‌ಇನ್ ಆಗುವುದು ಅನಿವಾರ್ಯವಾಗಿದೆ.

ವೆರಿಫೈಡ್‌ ಖಾತೆ ಹೊಂದಿರುವ ಗ್ರಾಹಕರು ದಿನಕ್ಕೆ 6 ಸಾವಿರ ಪೋಸ್ಟ್, ಸಾಮಾನ್ಯ ಬಳಕೆದಾರರು ದಿನಕ್ಕೆ 600 ಪೋಸ್ಟ್ ಮತ್ತು ಹೊಸದಾಗಿ ಖಾತೆ ತೆರೆದವರು ದಿನಕ್ಕೆ 300 ಪೋಸ್ಟ್‌ ನೋಡಬಹುದು. ಹೆಚ್ಚಿನ ಪೋಸ್ಟ್‌ ವೀಕ್ಷಣೆ ಮಾಡಲು ಸೈನ್‌ಇನ್ ಆಗುವುದು ಕಡ್ಡಾಯವಾಗಿದೆ.

ಕಳೆದ ಅಕ್ಟೋಬರ್‌ನಲ್ಲಿ ಎಲಾನ್ ಮಸ್ಕ್ ಟ್ವಿಟರ್ ಖರೀದಿ ಮಾಡಿದ ಮೇಲೆ ಬಳಕೆದಾರರಿಗೆ ಉಚಿತವಾಗಿ ವೆರಿಫೈಡ್ ಅಕೌಂಟ್ ಬ್ಲೂ ಟಿಕ್ ಸಿಗುತ್ತಿಲ್ಲ. ಹಣ ಪಾವತಿ ಮಾಡಿದರೆ ಯಾರಿಗೆ ಬೇಕಾದರೂ ಸಹ ಬ್ಲೂ ಟಿಕ್ ನೀಡಲಾಗುತ್ತಿದೆ. ಇಂತಹ ಸಮಯ ದಲ್ಲಿಯೇ ಟ್ವೀಟ್ ಪೋಸ್ಟ್ ವೀಕ್ಷಣೆ ಮಾಡಲು ಮಿತಿ ಹೇರಲಾಗಿದೆ.