Saturday, 14th December 2024

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಭಾರೀ ಭದ್ರತಾ ಲೋಪ: ಯುವಕ ಸೇರಿ ಇಬ್ಬರು ವಶಕ್ಕೆ

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಭಾರೀ ಭದ್ರತಾ ಲೋಪ ಸಂಭವಿಸಿದೆ.

ಲೋಕಸಭೆ ಕಲಾಪ ನಡೆಯುತ್ತಿದ್ದ ವೇಳೆ ಯುವಕನೊಬ್ಬ ವೀಕ್ಷಕರು ಕೂರುವ ಗ್ಯಾಲರಿಯಿಂದ ಸದನದೊಳಗೆ ಜಿಗಿದಿದ್ದಾನೆ. ಇದರಿಂದ ಕಲಾಪಕ್ಕೆ ಅಡ್ಡಿ ಯಾಯಿತು. ಕೂಡಲೇ ಆ ಆತನನ್ನು ವಶಕ್ಕೆ ಪಡೆಯಲಾಗಿದೆ. ಹೀಗಾಗಿ ಕಲಾಪವನ್ನು ಮುಂದೂಡಲಾಗಿದೆ.

ದಿಢೀರ್​​ ಗ್ಯಾಲರಿಯಿಂದ ಜಿಗಿದ ಯುವಕನೊಬ್ಬ ಸ್ಮೋಕ್​ ಕ್ರ್ಯಾಕರ್​ವೊಂದನ್ನು ಸ್ಪ್ರೇ ಮಾಡಿದ್ದಾನೆ. ಆಗ ಸದನದಲ್ಲಿದ್ದ ಸಚಿವರು, ಸಂಸದರು ಆತಂಕ ದಿಂದ ಹೊರ ಬಂದಿದ್ದಾರೆ. ಇದೇ ವೇಳೆ, ಹೊರಗಿನ ಗೇಟ್​ ಬಳಿಯೂ ಯುವತಿಯೊಬ್ಬಳು ಇದೇ ರೀತಿ ಬಣ್ಣವನ್ನು ಸ್ಪ್ರೇ ಮಾಡಿದ್ದಾಳೆ.

ಲೋಕಸಭೆ ಪ್ರತಿಪಕ್ಷ ನಾಯಕ ಅಧೀರ್​ ರಂಜನ್​ ಚೌಧರಿ, ”ಇದು ಸದನದಲ್ಲಿ ಗೊಂದಲ ಸೃಷ್ಟಿಸಿರುವ ಘಟನೆಯಾಗಿದೆ. ಇಬ್ಬರು ಯುವಕರು ಇದ್ದಕಿ ದ್ದಂತೆ ಗ್ಯಾಲರಿಯಿಂದ ಜಿಗಿದು ಸದನದೊಳಗೆ ನುಗ್ಗಿ ಬಂದರು. ಆಗ ತಮ್ಮ ಕೈಯಲ್ಲಿದ್ದ ಬಣ್ಣವನ್ನು ತೂರಿದರು. ಅವರನ್ನು ಸದನದಲ್ಲಿದ್ದ ಸಂಸದರೇ ಹಿಡಿದಿದ್ದಾರೆ. ನಂತರ ಭದ್ರತಾ ಸಿಬ್ಬಂದಿಗೆ ಒಪ್ಪಿಸಲಾಗಿದೆ. ಇದು ಖಂಡಿತ ಭದ್ರತಾ ಲೋಪ” ಎಂದು ಹೇಳಿದ್ದಾರೆ.