Sunday, 3rd November 2024

ಮರಡೋನಾ ನಿಧನಕ್ಕೆ ಕೇರಳದಲ್ಲಿ ಎರಡು ದಿನಗಳ ಶೋಕಾಚರಣೆ

ತಿರುವನಂತಪುರ(ಕೇರಳ): ಫುಟ್ಬಾಲ್ ದಂತಕತೆ ಮರಡೋನಾ ಅವರ ನಿಧನದ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಎರಡು ದಿನಗಳ ಶೋಕಾಚರಣೆ ಘೋಷಿಸಿದೆ.

ಇದು ರಾಜ್ಯದ ಇತಿಹಾಸದಲ್ಲಿಯೇ ಅಪರೂಪದ ಗೌರವ ಸೂಚಕವಾಗಿದೆ. ಮರಡೋನಾ ಸಮಾಜವಾದಿಗಳ ಜೊತೆ ನಿಂತ ಅತ್ಯುತ್ತಮ ಕ್ರೀಡಾಪಟು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್, ಕೇರಳ ಸೇರಿದಂತೆ ಪ್ರಪಂಚಾದ್ಯಂತ ಅಭಿಮಾನಿಗಳು ಮರಡೋನಾ ಸಾವಿನಿಂದ ತೀವ್ರ ನೊಂದಿದ್ದಾರೆ ಎಂದು ಸಿಎಂ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

1986ರಲ್ಲಿ ವಿಶ್ವಕಪ್ ಫುಟ್ಬಾಲ್ ಪಂದ್ಯದಲ್ಲಿ ಅರ್ಜೆಂಟೀನಾ ಗೆದ್ದ ನಂತರ ಕೇರಳ ಫುಟ್ಬಾಲ್ ಅಭಿಮಾನಿಗಳ ಹೃದಯದಲ್ಲಿ ಮರಡೋನಾ ಜಾಗ ಪಡೆದಿದ್ದರು ಎಂದು ಪಿಣರಾಯ್ ವಿಜಯನ್ ತಿಳಿಸಿದ್ದಾರೆ.

ನವೆಂಬರ್ 26 ಮತ್ತು 27 ರಂದು ರಾಜ್ಯಾದ್ಯಂತ ಶೋಕಾಚರಣೆ ಆಚರಿಸಲಾಗುತ್ತಿದೆ ಎಂದು ಕೇರಳ ಕ್ರೀಡಾ ಸಚಿವ ಇಪಿ ಜಯರಾಜನ್ ತಿಳಿಸಿದ್ದಾರೆ.