ಪ್ರತಾಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ಖಜೂರಿ ಗ್ರಾಮದಲ್ಲಿ ಘಟನೆ ನಡೆದಿದೆ. ಮೃತ ರನ್ನು ಸಮೀಪದ ಟೋನಿ ಗ್ರಾಮದ ನಿವಾಸಿಗಳಾದ ನಂದಲಾಲ್ ಪೈಕ್ರಾ (27) ಮತ್ತು ಸಂಜಯ್ ಯಾದವ್ (25) ಎಂದು ಗುರುತಿಸಲಾಗಿದೆ.
ಪ್ರತಾಪುರ್ ಮಾರುಕಟ್ಟೆಯಿಂದ ಮನೆಗೆ ಹಿಂದಿರುಗುತ್ತಿದ್ದ ವೇಳೆ ಏಕಾಏಕಿ ಮಳೆ ಆರಂಭ ವಾಯಿತು. ಈ ಸಮಯದಲ್ಲಿ ಇಬ್ಬರೂ ಮರದ ಕೆಳಗೆಯಿರುವ ಅಂಗಡಿಯ ಮುಂದೆ ಆಶ್ರಯ ಪಡೆದಿದ್ದರು. ಆಗ ಇದ್ದಕ್ಕಿದ್ದಂತೆ ಅಲ್ಲಿ ಮಿಂಚು ಬಡಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಅಂಗಡಿ ಮಾಲೀಕ ಸೇರಿದಂತೆ ಇತರ ಮೂವರಿಗೆ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆ ಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ ಎನ್ನಲಾಗತ್ತಿದೆ.