Friday, 13th December 2024

ಕೆಲಸದಿಂದ ವಜಾ ಮಾಡಿದ್ದಕ್ಕೆ ಅಂಗಡಿಗೆ ಬೆಂಕಿ: ಇಬ್ಬರ ಸಾವು

ವಡ್ಗಾಂವ್: ತನ್ನ ಟೈಲರಿಂಗ್ ಅಂಗಡಿಯಲ್ಲಿ ಕೆಲಸದಿಂದ ವಜಾಗೊಳಿಸಿದ ವಿವಾದದ ಹಿನ್ನೆಲೆಯಲ್ಲಿ ಪೆಟ್ರೋಲ್ ಸುರಿದು  ಬೆಂಕಿ ಹಚ್ಚಿದ ಪರಿಣಾಮ 35 ವರ್ಷದ ಪುರುಷ ಮತ್ತು 32 ವರ್ಷದ ಮಹಿಳೆ ತೀವ್ರ ಸುಟ್ಟ ಗಾಯಗಳಿಂದ ಮೃತಪಟ್ಟಿದ್ದಾರೆ.

ಮಧ್ಯಪ್ರವೇಶಿಸಲು ಪ್ರಯತ್ನಿಸಿದ ಮೂರನೇ ವ್ಯಕ್ತಿಗೆ ಸುಟ್ಟ ಗಾಯಗಳಾಗಿವೆ.

ಮೃತರನ್ನು ಮಿಲಿಂದ್ ನಾಥಸಾಗರ್ (35) ಮತ್ತು ಬಾಲಾ ನೊಯಾ ಜೋನಿಂಗ್ (32) ಎಂದು ಗುರುತಿಸಲಾಗಿದೆ. ಇಬ್ಬರನ್ನು ರಕ್ಷಿಸಲು ಪ್ರಯತ್ನಿಸಿದ ಅವರ ನೆರೆಹೊರೆಯವ ರಾದ ಪ್ರಶಾಂತ್ ಕುಮಾರ್ ದೇಬ್ನಾರ್ (26) ಅವರಿಗೆ 35% ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಸ್ತುವಾರಿ ಇನ್ಸ್ಪೆಕ್ಟರ್ ಸುನಿಲ್ ಜಾಧವ್, ‘ಶನಿವಾರ ರಾತ್ರಿ, ನಾಥಸಾಗರ್ ಅಂಗಡಿಗೆ ಹೋಗಿ ಜೋನಿಂಗ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ವಿವರ ನೀಡಿದ್ದಾರೆ.