Friday, 13th December 2024

ಎರಡು ಅವಧಿಗೆ ಗುಜರಾತ್ ಸಿಎಂ ಆಗಿದ್ದ ಕೇಶುಭಾಯ್ ಪಟೇಲ್ ನಿಧನ

ಅಹಮದಾಬಾದ್ : ಗುಜರಾತ್ ಮಾಜಿ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್(92) ನಿಧನರಾದರು. ಹಿರಿಯ ಬಿಜೆಪಿ ಮುಖಂಡ ಎರಡು ಅವಧಿಗೆ ಗುಜರಾತ್ ಮುಖ್ಯಮಂತ್ರಿಯಾಗಿದ್ದರು.

ಕೇಶುಭಾಯ್ ಅವರು ಗುರುವಾರ ಅಹಮದಾಬಾದ್ನ ಆಸ್ಪತ್ರೆಗೆ ಕರೆದೊಯ್ಯುವಾಗ ಉಸಿರಾಟದ ತೊಂದರೆಯಿಂದ ನರಳು ತ್ತಿದ್ದರು. ಕೇಶುಭಾಯ್ ಸೆಪ್ಟೆಂಬರ್ ನಲ್ಲಿ ಕೊರೊನಾ ಸೋಂಕಿಗೆ ಗುರಿಯಾಗಿದ್ದರು. ಕೋವಿಡ್ -19 ರೋಗ ನಿರ್ಣಯ ಮಾಡುವ ಸಮಯದಲ್ಲಿ ಬಿಜೆಪಿ ನಾಯಕ ಲಕ್ಷಣರಹಿತರಾಗಿದ್ದರು.