Friday, 22nd November 2024

ಪುಲ್ವಾಮಾ ಉಗ್ರರ ದಾಳಿಗೆ ಇಂದು ಎರಡು ವರ್ಷ

ನವದೆಹಲಿ: ಪುಲ್ವಾಮಾ ಉಗ್ರರ ದಾಳಿಗೆ ಇಂದು ಎರಡು ವರ್ಷ. ಭಾರತೀಯರು ವೀರ ಯೋಧರ ಬಲಿದಾನವನ್ನು ನೆನಪಿಸಿದ್ದು, ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ.

2019ರಲ್ಲಿ ಫೆಬ್ರವರಿ 14ರಂದು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭದ್ರತಾ ಸಿಬ್ಬಂದಿಯನ್ನು ಸಾಗಿಸುವ ವಾಹನದ ಮೇಲೆ ಪುಲ್ವಾಮಾದ ಅವಾಂತಿಪೋರಾ ಬಳಿ ಐಇಡಿ ತುಂಬಿದ ಆತ್ಮಹತ್ಯಾ ಬಾಂಬರ್ ದಾಳಿ ನಡೆಸಲಾಯಿತು. ಈ ದಾಳಿ ಯಿಂದಾಗಿ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) 40 ಯೋಧರು ಹುತಾತ್ಮರಾದರು.

ಬಳಿಕ ಪಾಕಿಸ್ತಾನ ಬಾಲಕೋಟ್ ಉಗ್ರ ತರಬೇತಿ ಶಿಬಿರಕ್ಕೆ ವೈಮಾನಿಕ ದಾಳಿಯೊಂದಿಗೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಭಾರತ ತಿರುಗೇಟು ನೀಡಿತ್ತು.

ಪ್ರಸ್ತುತ ಪುಲ್ವಾಮಾ ದಾಳಿಯ ಕಹಿ ನೆನಪು ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದ್ದು, ಭಾರತೀಯರು ನಾವು ಎಂದಿಗೂ ಮರೆಯುವುದಿಲ್ಲ, ಎಂದಿಗೂ ಕ್ಷಮಿಸುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.