Thursday, 12th December 2024

20 ಸೆಂ.ಮೀ ಮಳೆ: ಬನ್ಸ್ವಾರಾ-ಉದಯಪುರ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತ

ಜೈಪುರ: ಕಳೆದ 24 ಗಂಟೆಗಳಲ್ಲಿ ರಾಜಸ್ಥಾನದಲ್ಲಿ 20 ಸೆಂ.ಮೀಗಿಂತ ಹೆಚ್ಚು ಮಳೆಯಾಗಿದೆ. ಬನ್ಸ್ವಾರಾ-ಉದಯಪುರ ಹೆದ್ದಾರಿಯಲ್ಲಿ ನೀರು ನಿಂತಿರುವು ದರಿಂದ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ರಾಜ್‌ಸಮಂದ್, ಚಿತ್ತೋರ್‌ಗಢ, ಅಜ್ಮೀರ್, ಭಿಲ್ವಾರಾ ಮತ್ತು ಪಾಲಿ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಭಾರಿ ಮಳೆ ಸುರಿದಿದೆ. 24 ಗಂಟೆಗಳ ಅವಧಿಯಲ್ಲಿ ಬನ್ಸ್ವಾರಾ ಮತ್ತು ಡುಂಗರ್‌ಪುರದ ಕೆಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ಪ್ರತಾಪಗಢದ ಪೀಪಲ್‌ಖೂಟ್‌ನಲ್ಲಿ ಅತಿ ಹೆಚ್ಚು (26.ಸೆಂ.ಮೀ) ಮಳೆ ದಾಖಲಾಗಿದೆ.

ಬನ್ಸ್ವಾರಾದಲ್ಲಿ 19.5 ಸೆಂ.ಮೀ ಮತ್ತು ಡೂಂಗರ್‌ಗಢದ ಚಿಖಾಲಿಯಲ್ಲಿ 13.2 ಸೆಂ. ‌ಮೀ ಮಳೆಯಾಗಿದೆ. ಸಲೋಪತ್, ಬಗಿದೌರಾ, ಭುಂಗ್ರಾ, ಅರ್ಥುನಾ ಮತ್ತು ಬನ್ಸ್ವಾರದ ಕೇಸರಪುರದಲ್ಲಿ 12.7 ಸೆಂ. ‌ಮೀ – 19.5 ಸೆಂ. ‌ಮೀ ಮಳೆಯಾಗಿದೆ ಎಂದು ಜೈಪುರ ಹವಾಮಾನ ಕೇಂದ್ರ ತಿಳಿಸಿದೆ.

ಮಂಗಳವಾರ ಮತ್ತು ಬುಧವಾರ ರಾಜ್ಯದ ದಕ್ಷಿಣ ಮತ್ತು ಪೂರ್ವ ಭಾಗಗಳ ಕೆಲವು ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.