Friday, 22nd November 2024

‘ಒಬ್ಬ ದರೋಡೆಕೋರ, ಮತ್ತೊಬ್ಬ ಕಳ್ಳ’: ಉದಯನಿಧಿ ಸ್ಟಾಲಿನ್

ಚೆನ್ನೈ: ತಮಿಳುನಾಡಿನಲ್ಲಿ ಬಿಜೆಪಿ ಜತೆಗಿನ ಬಾಂಧವ್ಯ ಕಡಿದುಕೊಳ್ಳುವುದಾಗಿ ಎಐಎಡಿಎಂಕೆ ಹೇಳಿಕೆ ನೀಡಿದ ವಿಚಾರಕ್ಕೆ ಸಂಬಂಧಿಸಿ ತಮಿಳುನಾಡು ಸಚಿವ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರು ಪ್ರತಿಕ್ರಿಯಿಸಿದ್ದು ಎರಡು ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

‘ಒಬ್ಬ ದರೋಡೆಕೋರ, ಮತ್ತೊಬ್ಬ ಕಳ್ಳ’ ಎಂಬಂತೆ ಎರಡೂ ಪಕ್ಷಗಳು ಒಟ್ಟಾಗಿ ಮುಂದಿನ ಚುನಾವಣೆಗೆ ಸ್ಪರ್ಧಿಸಬಹುದು. ಎಐಎಡಿಎಂಕೆ ಬಿಜೆಪಿಯೊಂದಿಗಿನ ತನ್ನ ಸಂಬಂಧವನ್ನು ಕಡಿದುಕೊಂಡರೂ, 2024ರ ಲೋಕಸಭಾ ಚುನಾವಣೆಯಲ್ಲಿ ಡಿಎಂಕೆ ವಿಜಯಶಾಲಿಯಾಗಲಿದೆ ಎಂದು ಅವರು ಭವಿಷ್ಯ ನುಡಿದರು. ಮತ್ತೆ ಹೇಳಿಕೆ ನೀಡಿದ ಸ್ಟಾಲಿನ್ ಎಐಎಡಿಎಂಕೆ ಮತ್ತು ಬಿಜೆಪಿ ಜಗಳವಾಡುವುದು ಮೊದಲ ಬಾರಿಯಲ್ಲ ಆದರೆ ಚುನಾವಣೆಯ ಸಮಯದಲ್ಲಿ, ಅವರು ಮತ್ತೆ ಒಂದಾಗುತ್ತಾರೆ. ಏಕೆಂದರೆ ಒಬ್ಬರು ದರೋಡೆಕೋರರು ಮತ್ತು ಇನ್ನೊಬ್ಬರು ಕಳ್ಳರು” ಎಂದು ಅವರು ಹೇಳಿದರು.

ಎಐಎಡಿಎಂಕೆ ಪಕ್ಷದ ಪ್ರಧಾನ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯ ನಂತರ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಜೊತೆಗಿನ ತನ್ನ ಸಂಬಂಧವನ್ನು ಎಐಎಡಿಎಂಕೆ ಮುರಿದುಕೊಂಡಿದೆ, ಬಿಜೆಪಿಯು ಎಐಎಡಿಎಂಕೆಯ ಮಾಜಿ ನಾಯಕರ ಬಗ್ಗೆ ಅನಗತ್ಯ ಟೀಕೆಗಳನ್ನು ಮಾಡುತ್ತಿದೆ ಎಂದು ಹೇಳಿದೆ.

ಜಯಲಲಿತಾ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಅಣ್ಣಾಮಲೈ ಮಾತನಾಡಿದ್ದರು. ಪಕ್ಷದ ಸಂಸ್ಥಾಪಕ ಅಣ್ಣಾದೊರೈ ಬಗ್ಗೆ ಅಣ್ಣಾಮಲೈ ವಿವಾದಾತ್ಮಕ ಹೇಳಿಕೆ ನೀಡಿದ್ದರು.