ನವದೆಹಲಿ: ಕೋವಿಡ್-19 ಕಾರಣದಿಂದಾಗಿ ದೇಶದ ಎಲ್ಲಾ ವಿವಿಗಳಲ್ಲೂ ಆಫ್ಲೈನ್ ಪರೀಕ್ಷೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂಬ ಸಂದೇಶ ಸುಳ್ಳು ಎಂದು ವಿವಿ ಅನುದಾನ ಆಯೋಗ (ಯುಜಿಸಿ) ಈ ವಿಚಾರವಾಗಿ ಸ್ಪಷ್ಟನೆ ನೀಡಿದೆ.
ಮಹತ್ವದ ಪ್ರಕಟಣೆ ಹಂಚಿಕೊಂಡ ಯುಜಿಸಿ, ಟ್ವಿಟರ್‌ನಲ್ಲಿ ಬಿತ್ತರಗೊಂಡಿರುವ ಸಾರ್ವಜನಿಕ ಸೂಚನೆ ನಕಲಿ ಮತ್ತು ಅಂತಹ ಯಾವುದೇ ಸೂಚನೆ ಯನ್ನು ಅಧಿಕೃತವಾಗಿ ಹೊರಡಿಸಿಲ್ಲ ಎಂದು ತಿಳಿಸಿದೆ.
ನಕಲಿ ನೋಟೀಸ್‌ನಲ್ಲಿ, “ಎಲ್ಲಾ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಕೋವಿಡ್-19 ಮಾರ್ಗಸೂಚಿ ಗಳನ್ನು ಅನುಸರಿಸಿಕೊಂಡು ಕಾರ್ಯ ನಿರ್ವಹಿಸುತ್ತಿರುವುದರಿಂದ, ತವರು ಕೇಂದ್ರಗಳಲ್ಲಿ ಭೌತಿಕ ಅಂತರ ಕಾಯ್ದುಕೊಂಡು ಆಫ್‌ಲೈನ್ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು” ಎಂದು ಹೇಳಲಾಗಿದೆ.
ನಕಲಿ ನೋಟೀಸ್ ಬಗ್ಗೆ ಪ್ರತಿಕ್ರಿಯಿಸಿದ ಯುಜಿಸಿ “ವಿಶ್ವವಿದ್ಯಾಲಯ ಅನುದಾನ ಆಯೋಗವು ಅಂತಹ ಯಾವುದೇ ಸೂಚನೆ ನೀಡಿಲ್ಲ,” ಎಂದು ಟ್ವೀಟ್ ಮಾಡಿದೆ.
ಕೋವಿಡ್-19 ನಿರ್ಬಂಧಗಳನ್ನು ಸಡಿಲಿಸಿರುವ ಹಿನ್ನೆಲೆಯಲ್ಲಿ ಗುರು ಗೋಬಿಂದ್ ಸಿಂಗ್ ಇಂದ್ರಪ್ರಸ್ಥ ವಿಶ್ವವಿದ್ಯಾ ಲಯ (ಜಿಜಿಎಸ್‌ಐಪಿಯು) ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ನಂತಹ ವಿಶ್ವವಿದ್ಯಾ ಲಯಗಳು ಫೆಬ್ರವರಿ 7, 2022 ರಿಂದ ಅನೇಕ ವಿಭಾಗಗಳಾದ್ಯಂತ ಆಫ್‌ಲೈನ್ ತರಗತಿಗಳನ್ನು ಪುನರಾರಂಭಿಸಿವೆ. ಕೋವಿಡ್-19 ಮಾರ್ಗಸೂಚಿಗಳ ಕಟ್ಟುನಿಟ್ಟಾದ ಅನುಸರಣೆಯೊಂದಿಗೆ, ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಬೋಧನೆ ಮತ್ತು ಕಲಿಕಾ ಚಟುವಟಿಕೆಗಳು ಆಫ್‌ಲೈನ್ ಮೋಡ್‌ನಲ್ಲಿ ಪುನರಾರಂಭಗೊಂಡಿವೆ.