ಯುಜಿಸಿ-ಎನ್‍ಇಟಿ 2020 ಮತ್ತು ಜೂನ್ 2021ನ್ನು ಆಂಧ್ರಪ್ರದೇಶದ ವಿಶಾಖಪಟ್ಟಣ, ಒಡಿಶಾದ ಪುರಿ, ಭುವನೇಶ್ವರ, ಕಟಕ್ ಮತ್ತು ಗಂಜಾಂ ಜಿಲ್ಲೆಯ ಬೆಹ್ರಾಂಪು ಹಾಗೂ ರಾಜಘಡ ಜಿಲ್ಲೆಯ ಗುನುಪುರಗಳಲ್ಲಿನ ಪರೀಕ್ಷಾ ಕೇಂದ್ರಗಳಲ್ಲಿ ಮುಂದೂಡಿಕೆ ಮಾಡ ಲಾಗಿದೆ ಎಂದು ದಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಸೂಚನೆಯಲ್ಲಿ ತಿಳಿಸಿದೆ.
ಪಶ್ಚಿಮ ಬಂಗಾಳ ಕೋಲ್ಕತ್ತಾ ಮತ್ತು ದುರ್ಗಾಪುರ, ಒಡಿಶಾದ ಭುವನೇಶ್ವರ, ಕಟಕ್ ಮತ್ತು ಸಂಬಾಲ್ಪುರ ಮತ್ತು ಆಂದ್ರಪ್ರದೇಶದ ವಿಜಯವಾಡಾ, ವಿಶಾಖಪಟ್ಟಂಗಳಲ್ಲಿನ ಕೇಂದ್ರಗಳಲ್ಲಿ ಐಐಎಫ್‍ಟಿ ಎಂಬಿಜೆಯ ಪ್ರವೇಶ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಅದು ಹೇಳಿದೆ.
ಪರೀಕ್ಷೆಗೆ ನೋಂದಾಯಿಸಿಕೊಂಡು ಮೇಲೆ ತಿಳಿಸಿದ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗ ಬೇಕಿದ್ದ ಅಭ್ಯರ್ಥಿಗಳಿಗೆ ಪರೀಕ್ಷೆಯ ಮುಂದಿನ ದಿನಾಂಕವನ್ನು ಅನಂತರ ತಿಳಿಸಲಾ ಗುವುದು ಎಂದು ಎನ್‍ಟಿಎ ತಿಳಿಸಿದೆ.
ಹೀಗಿದ್ದರೂ ಮೇಲೆ ತಿಳಿಸಲಾದ ಪರೀಕ್ಷಾ ಕೇಂದ್ರಗಳಲ್ಲಿ ಮಾತ್ರ ಪರೀಕ್ಷೆ ಮುಂದಕ್ಕೆ ಹಾಕಲಾಗಿದೆ. ಪರೀಕ್ಷೆಯು ಒಡಿಶಾ, ಆಂದ್ರಪ್ರದೇಶ, ಪಶ್ಚಿಮಬಂಗಾಳ ಮತ್ತು ಇತರ ರಾಜ್ಯಗಳಲ್ಲಿನ ಉಳಿದ ನಗರಗಳಲ್ಲಿ ನಿಗದಿತವಾಗಿರುವಂತೆಯೇ ನಡೆಯಲಿದೆ ಎಂಬುದನ್ನು ಅಭ್ಯರ್ಥಿಗಳು ಗಮನಿಸಬೇಕು ಎಂದು ಎನ್‍ಟಿಎ ವಿವರಿಸಿದೆ.