ಬಟ್ಟೆಗಳನ್ನು ಆಳವಾಗಿ ಸ್ವಚ್ಛಗೊಳಿಸುವ ಮತ್ತು ನಿಧಾನವಾಗಿ ಕಾಳಜಿ ವಹಿಸುವ ಸಂಪೂರ್ಣ ಫ್ಯಾಬ್ರಿಕ್ ಆರೈಕೆ ಪರಿಹಾರ. ಬಟ್ಟೆ ಎರಡು ಪಟ್ಟು ಬಾಳಿಕೆ ಬರುವಂತೆ ಮಾಡುತ್ತದೆ.
ಬಟ್ಟೆ ಹಾಳಾಗದಂತೆ ತಡೆಯಲು, ಬಟ್ಟೆಗಳನ್ನು ಸುಕ್ಕು–ರಹಿತವಾಗಿಡಲು ಮತ್ತು ಬಣ್ಣಗಳನ್ನು ಸಂರಕ್ಷಿಸಲು ಅರ್ಥ ಗರ್ಭಿತ ವೈಶಿಷ್ಟ್ಯಗಳ ಗುಚ್ಛ.
ಮುಂಬೈ: 100 ಕ್ಕೂ ಹೆಚ್ಚು ವರ್ಷಗಳಿಂದ ಜೀವನವನ್ನು ಉತ್ತಮಗೊಳಿಸುತ್ತಿರುವ ಪ್ರಮುಖ ಜಾಗತಿಕ ಅಪ್ಲಯನ್ಸ್ ಕಂಪನಿ ಯಾದ ಎಲೆಕ್ಟ್ರೋಲಕ್ಸ್, ಇಂದು ಭಾರತದಲ್ಲಿ ತನ್ನ ಹೊಸ ಶ್ರೇಣಿಯ ಸಂಪೂರ್ಣ ಆಟೋಮ್ಯಾಟಿಕ್ ಫ್ರಂಟ್ ಲೋಡ್ ವಾಷಿಂಗ್ ಮೆಷಿನ್ ಗಳು ಹಾಗೂ ಡ್ರೈಯರ್ ಗಳ ಬಿಡುಗಡೆಯ ಬಗ್ಗೆ ಘೋಷಿಸಿದೆ.
ಅಲ್ಟಿಮೇಟ್ ಕೇರ್ 300 ಮತ್ತು ಅಲ್ಟಿಮೇಟ್ ಕೇರ್ 500 ಸರಣಿಗಳು ಅಲ್ಟ್ರಾಮಿಕ್ಸ್, ಹೈಜೀನಿಕ್ ಕೇರ್, ವುಲ್ ಮಾರ್ಕ್ ಬ್ಲೂ ಸರ್ಟಿಫಿಕೇಶನ್, ರಿವರ್ಸ್ ಟಂಬ್ಲಿಂಗ್, ಸ್ಮಾರ್ಟ್ ಸೆನ್ಸಾರ್ಸ್, ಕಲರ್ ಕೇರ್ ನಂತಹ ಹೊಚ್ಚ ಹೊಸ ವೈಶಿಷ್ಟ್ಯಗಳಿಂದ ಸುಸಜ್ಜಿತ ವಾಗಿದ್ದು, ಇದು ಶ್ರಮರಹಿತ ಲಾಂಡ್ರಿ ಅನುಭವ ನೀಡುವುದರೊಂದಿಗೆ, ಒಗೆಯುವುದರಿಂದ ಹಿಡಿದು ಒಣಗಿಸುವ ಆವರ್ತನ ದವರೆಗೆ ಬಟ್ಟೆಗಳಿಗೆ ಕೋಮಲ ಆರೈಕೆ ನೀಡುತ್ತದೆ.
ಎಲೆಕ್ಟ್ರೋಲಕ್ಸ್ ನ ಆರೈಕೆ ತಂತ್ರಜ್ಞಾನಗಳೊಂದಿಗೆ ತಮ್ಮ ಉಡುಪುಗಳ ಉತ್ತಮ ಕಾಳಜಿಯನ್ನು ತೆಗೆದುಕೊಳ್ಳುವ ಮೂಲಕ ಅಗತ್ಯಕ್ಕಿಂತ ಮೊದಲೇ ಬಟ್ಟೆಗಳನ್ನು ವಿಲೇವಾರಿ ಮಾಡುವ ಮಾದರಿಯನ್ನು ಮೀರಿ ಗ್ರಾಹಕರನ್ನು ಉತ್ತೇಜಿಸಲು ಎಲೆಕ್ಟ್ರೋ ಲಕ್ಸ್ ಗುರಿ ಹೊಂದಿದೆ. ಈ ಆರೈಕೆ ಪರಿಹಾರಗಳು ಮೆಚ್ಚಿನ ಬಟ್ಟೆಗಳನ್ನು ಹೆಚ್ಚು ಕಾಲ ಆಕರ್ಷಕವಾಗಿ ಕಾಣುವಂತೆ ವಿನ್ಯಾಸ ಗೊಳಿಸಲಾಗಿದೆ ಮತ್ತು ಅರ್ಧದಷ್ಟು ಪರಿಸರದ ಪ್ರಭಾವದೊಂದಿಗೆ ಎರಡು ಪಟ್ಟು ಹೆಚ್ಚು ಕಾಲ ಉಳಿಯುವಂತೆ ಮಾಡುತ್ತದೆ.
ಅರ್ಥಗರ್ಭಿತ ವೈಶಿಷ್ಟ್ಯಗಳು ಉಪಯುಕ್ತತೆ ಮತ್ತು ಸರಳತೆಯನ್ನು ಆಧರಿಸಿವೆ ಹಾಗೂ ಪರಿಸರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವ ಮೂಲಕ, ಸಮರ್ಥನೀಯ ಸಮಾಜಕ್ಕೆ ಕೊಡುಗೆ ನೀಡುವ ಎಲೆಕ್ಟ್ರೋಲಕ್ಸ್‌ನ ದೃಷ್ಟಿಕೋನಕ್ಕೆ ಅನುಗುಣವಾಗಿರುತ್ತವೆ. ಇದರ ವ್ಯಾಪ್ತಿಯು ಈ ಕೆಳಗಿನವುಗಳನ್ನು ಒಳಗೊಂಡಿದೆ-
- ಅಲ್ಟಿಮೇಟ್ ಕೇರ್ 300
- 5 ಕೆಜಿ, 8 ಕೆಜಿ ಮತ್ತು 9 ಕೆಜಿ ಫ್ರಂಟ್ ಲೋಡ್ ವಾಷಿಂಗ್ ಮೆಷಿನ್ ಗಳು
- 5 ಕೆಜಿ ಮತ್ತು 8 ಕೆಜಿ ವಾಷರ್ ಡ್ರೈಯರ್ ಮಾಡೆಲ್ ಗಳು,
- ಅಲ್ಟಿಮೇಟ್ ಕೇರ್ 300
- 5 ಕೆಜಿ, ಮತ್ತು 8.5 ಕೆಜಿ ವೆಂಟಿಂಗ್ ಡ್ರೈಯರ್ ಗಳು
- ಅಲ್ಟಿಮೇಟ್ ಕೇರ್ 500
- 8 ಕೆಜಿ ಮತ್ತು 9 ಕೆಜಿ ಫ್ರಂಟ್ ಲೋಡ್ ವಾಷಿಂಗ್ ಮೆಷಿನ್ ಗಳು
- ಕ್ರಮವಾಗಿ 6 ಕೆಜಿ ಮತ್ತು 9 ಕೆಜಿ ವಾಷರ್ ಮತ್ತು ಡ್ರೈಯರ್ ಮಾಡೆಲ್ ಗಳು
ಅಲ್ಟಿಮೇಟ್ ಕೇರ್ ಶ್ರೇಣಿಯ ವಾಷಿಂಗ್ ಮೆಷಿನ್ಗಳು ಬೆಲೆಬಾಳುವ ಉಣ್ಣೆಯ ಬಟ್ಟೆಗಳಿಗೆ ಉತ್ತಮ–ವರ್ಗದ ಆರೈಕೆ ಯನ್ನು ಖಾತ್ರಿಪಡಿಸುತ್ತದೆ, ಇದು ಕಡಿಮೆ ತಾಪಮಾನವನ್ನು ಕಡಿಮೆ ಸ್ಪಿನ್ ವೇಗದೊಂದಿಗೆ ಸಂಯೋಜಿಸುತ್ತದೆ ಮತ್ತು ಉಣ್ಣೆಯನ್ನು ಕೈಯಿಂದ ಒಗೆದಷ್ಟೇ ಸೌಮ್ಯವಾಗಿರುತ್ತದೆ ಎಂದು ವೂಲ್ಮಾರ್ಕ್ ಪ್ರಮಾಣೀಕರಿಸಿದೆ. ಈ ಶ್ರೇಣಿಯು ಎಲೆಕ್ಟ್ರೋಲಕ್ಸ್‌ನ ಅತ್ಯಂತ ವಿದ್ಯುತ್ ಮಿತವ್ಯಯಕಾರಿ ವಾಷಿಂಗ್ ಮೆಷಿನ್ಗಳಲ್ಲಿ ಒಂದಾಗಿದೆ. ಅದರ ಇಕೋ ಇನ್ವರ್ಟರ್ ಮೋಟಾರ್ 50% ಕಡಿಮೆ ವಿದ್ಯುತ್ ಬಳಕೆಯೊಂದಿಗೆ ನಿಶ್ಯಬ್ದ ಮತ್ತು ಹೆಚ್ಚು ವಿಶ್ವಾಸಾರ್ಹ ಕಾರ್ಯ ಕ್ಷಮತೆಯನ್ನು ನೀಡಲು ಕಂಪನವನ್ನು ಕಡಿಮೆ ಮಾಡುತ್ತದೆ.
ಎಲೆಕ್ಟ್ರೋಲಕ್ಸ್ ಇಂಡಿಯಾದ ವಾಣಿಜ್ಯ ನಿರ್ದೇಶಕ ಸುಧೀರ್ ಪಾಟೀಲ್, “ಆಧುನಿಕ ಭಾರತೀಯ ಮನೆಯ ವಿಶಿಷ್ಟ ಅಗತ್ಯಗಳನ್ನು ಪೂರೈಸಲು ಚಿಂತನೆಯಿಂದ ವಿನ್ಯಾಸಗೊಳಿಸಲಾದ ವೈಶಿಷ್ಟ್ಯಗಳನ್ನು ಹೊಂದಿರುವ ಕ್ಲಾಸ್ ವಾಷಿಂಗ್ ಮೆಷಿನ್ಗಳಲ್ಲಿ ನಮ್ಮ ಹೊಸ ಶ್ರೇಣಿಯ ಅತ್ಯುತ್ತಮ ಶ್ರೇಣಿಯನ್ನು ಪರಿಚಯಿಸಲು ನಾವು ಸಂತೋಷಪಡುತ್ತೇವೆ. ಅಲ್ಟಿಮೇಟ್ ಕೇರ್ ಶ್ರೇಣಿಯ ವಾಷಿಂಗ್ ಮೆಷಿನ್ಗಳು ಮತ್ತು ಡ್ರೈಯರ್ ಗಳು ಸಂಪೂರ್ಣ ಫ್ಯಾಬ್ರಿಕ್ ಕೇರ್ ಪರಿಹಾರ ನೀಡುವ ಗುರಿ ಹೊಂದಿವೆ ಮತ್ತು ಒಳನೋಟವುಳ್ಳ ವೈಶಿಷ್ಟ್ಯಗಳು ಹಾಗೂ ಅತ್ಯಾಕರ್ಷಕವಾದ ಸ್ಕ್ಯಾಂಡಿನೇವಿಯನ್ ವಿನ್ಯಾಸವು ಗ್ರಾಹಕರನ್ನು ಆಕರ್ಷಿಸುತ್ತದೆ ಎಂದು ನಾವು ನಂಬುತ್ತೇವೆ” ಎಂದಿದ್ದಾರೆ.
ಪ್ರಮುಖ ವೈಶಿಷ್ಟ್ಯಗಳು
ಅಲ್ಟ್ರಾಮಿಕ್ಸ್
ಗ್ರಾಹಕರು ಅತ್ಯಂತ ಕಷ್ಟಪಡುವ ಅಂಶವನ್ನು ಪರಿಹರಿಸಲು, ಅಲ್ಟ್ರಾಮಿಕ್ಸ್ ತಂತ್ರಜ್ಞಾನವು ಡಿಟರ್ಜೆಂಟ್‌ಗಳು ಮತ್ತು ಸಾಫ್ಟ್ ನರ್ ಗಳನ್ನು ಸಂಪೂರ್ಣವಾಗಿ ಕರಗಿಸುತ್ತದೆ ಮತ್ತು ಡ್ರಮ್‌ಗೆ ಪ್ರವೇಶಿಸುವ ಮೊದಲು ಸಕ್ರಿಯಗೊಳಿಸುವುದನ್ನು ಖಚಿತ ಪಡಿಸುತ್ತದೆ. ಕಡಿಮೆ ಆವರ್ತನದ ಸಮಯದಲ್ಲಿ ಪರಿಣಾಮಕಾರಿಯಾಗಿ, ಕೋಮಲವಾದ ಬಟ್ಟೆಯ ಆರೈಕೆ ಮತ್ತು ಡಿಟರ್ಜೆಂಟ್ ಕಲೆಗಳನ್ನು ತಡೆಯುತ್ತದೆ.
ಹೈಜೀನಿಕ್ ಕೇರ್
ಹೈಜಿನಿಕ್‌ಕೇರ್ ಆಯ್ಕೆಯು 99.9% ರಷ್ಟು ಅಲರ್ಜಿಕಾರಕಗಳು ಮತ್ತು ಸೂಕ್ಷ್ಮಾಣುಗಳನ್ನು ತೆಗೆದುಹಾಕಲು ಮೃದುವಾದ ಆವಿಯ ಸ್ಪ್ರೇಯೊಂದಿಗೆ ಒಗೆಯುವಿಕೆಯನ್ನು ಪೂರ್ಣಗೊಳಿಸುತ್ತದೆ. ಹೈಜಿನಿಕ್ ಕೇರ್ ಕೇವಲ 40º ಸೆ ಯಲ್ಲಿ ಆವಿಯನ್ನು ಉತ್ಪಾದಿಸುತ್ತದೆ, ಆದ್ದರಿಂದ ಇದು ನಿಮ್ಮ ಬಟ್ಟೆಗಳ ಮೇಲೆ ಮೃದುವಾಗಿರುತ್ತದೆ, ಹಾಗೂ ಅದೇ ಸಮಯದಲ್ಲಿ ವಿದ್ಯುತ್ ಉಳಿಸುತ್ತದೆ.
ವೂಲ್ ಮಾರ್ಕ್ ಬ್ಲೂ
ಕಡಿಮೆ ಉಷ್ಣಾಂಶ ಮತ್ತು ಅತ್ಯಂತ ನಿಧಾನಗತಿಯ ಸ್ಪಿನ್ ಪ್ರಮಾಣದೊಂದಿಗೆ, ವೂಲ್‌ಮಾರ್ಕ್ ಪ್ರಮಾಣೀಕರಣದ ಪ್ರಕಾರ ವಿಶೇಷ ಉಣ್ಣೆಯ ಆವರ್ತನ ಉಣ್ಣೆಯನ್ನು ಕೈಯಿಂದ ಒಗೆದಷ್ಟು ಮೃದುವಾಗಿರುತ್ತದೆ. ಲೇಬಲ್ ನಲ್ಲಿ “ಕೈಯಿಂದ ಮಾತ್ರ ಒಗೆಯಬೇಕು” ಎಂದಿದ್ದರೂ, ನಿಮ್ಮ ಅತ್ಯಂತ ಅಮೂಲ್ಯವಾದ ಉಣ್ಣೆಯ ಉಡುಪುಗಳನ್ನು ನೀವು ಇದರಲ್ಲಿ ಒಗೆಯಬಹುದಾಗಿದೆ.
ಇಕೋಇನ್ವರ್ಟರ್ ಮೋಟಾರ್
ಸಾಂಪ್ರದಾಯಿಕ ಮಾದರಿಗಳಿಗೆ ಹೋಲಿಸಿದರೆ, ಇಕೋ ಇನ್ವರ್ಟರ್ ಮೋಟಾರ್ 50% ವರೆಗೆ ಕಡಿಮೆ ವಿದ್ಯುತ್ ಬಳಸುತ್ತದೆ* ಇದರೊಂದಿಗೆ ನಿಶ್ಶಬ್ದವಾದ, ವಿಶ್ವಾಸಾರ್ಹ ಕಾರ್ಯಕ್ಷಮತೆಯನ್ನು ನೀಡುತ್ತದೆ.
ಅಲ್ಟಿಮೇಟ್ ಕೇರ್ ಫಾಸ್ಟ್ ಫ್ಲೆಕ್ಸಿಬಲ್ ಸೈಕಲ್‌ನಂತಹ ಹೆಚ್ಚುವರಿ ಅರ್ಥಗರ್ಭಿತ ವೈಶಿಷ್ಟ್ಯಗಳೊಂದಿಗೆ ಬರುತ್ತದೆ, ಇದರಲ್ಲಿ ನಿಮ್ಮ ವೇಳಾಪಟ್ಟಿಗೆ ಹೊಂದುವ ಸಮಯ ಶ್ರೇಣಿಯಿಂದ ನೀವು ಆಯ್ಕೆ ಮಾಡಬಹುದು. ಉದಾಹರಣೆ: 15 ಸೈಕಲ್ ಒಂದು ಸಣ್ಣ ಪ್ರಮಾಣದ ಬಟ್ಟೆ ಅಥವಾ ಒಂದೇ ಬಟ್ಟೆಗೆ ಸೂಕ್ತವಾಗಿದ್ದು, 15 ನಿಮಿಷಗಳ ಒಗೆಯುವಿಕೆಯನ್ನು ನೀಡುತ್ತದೆ. ಇದು ಆಡ್ ಕ್ಲೋತ್ಸ್ ವೈಶಿಷ್ಟ್ಯವನ್ನು ಸಹ ಹೊಂದಿದೆ, ಇದು ಬಳಕೆದಾರರಿಗೆ ಮರೆತುಹೋದ ಬಟ್ಟೆಗಳನ್ನು ಸೇರಿಸಲು ವಾಷ್ ಅನ್ನು ವಿರಾಮಗೊಳಿಸಲು ಅನುಮತಿಸುತ್ತದೆ. ಒಣಗಿದ ನಂತರ ತಾಜಾತನವನ್ನು ಖಚಿತಪಡಿಸಿಕೊಳ್ಳಲು ಬಟ್ಟೆಗಳನ್ನು ಕಲುಷಿತ ಹೊರಾಂಗಣ ಗಾಳಿಯಿಂದ ದೂರವಿಡುತ್ತದೆ.
ಲಭ್ಯತೆ
ಅಲ್ಟಿಮೇಟ್ ಕೇರ್ 300 ಮತ್ತು 500 ಶ್ರೇಣಿಗಳು ಎಲ್ಲಾ ಪ್ರಮುಖ ರೀಟೇಲ್ ಸ್ಟೋರ್ ಗಳಲ್ಲಿ ಲಭ್ಯವಿದೆ.