Thursday, 12th December 2024

ಬಿಜೆಪಿ ನಾಯಕಿ ಉಮಾ ಭಾರತಿಗೆ ಕೊರೊನಾ ಸೋಂಕು ದೃಢ

ನವದೆಹಲಿ: ಬಿಜೆಪಿ ನಾಯಕಿ ಉಮಾ ಭಾರತಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸ್ವಯಂ ನಿರ್ಬಂಧಕ್ಕೊಳ ಪಟ್ಟಿದ್ದಾರೆ.

ಉಮಾಭಾರತಿ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ತಾವು ಕೊರೋನಾ ಸೋಂಕಿಗೆ ತುತ್ತಾಗಿದ್ದು, ಕಳೆದ 10 ದಿನಗಳಲ್ಲಿ ತಮ್ಮ ಸಂಪರ್ಕಕ್ಕೆ ಬಂದವರು ಪರೀಕ್ಷೆ ಮಾಡಿಸಿಕೊಳ್ಳಿ ಎಂದಿದ್ದಾರೆ. ಕಳೆದ ಮೂರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು, ಕೋವಿಡ್ ಪರೀಕ್ಷೆ ನಡೆಸಿದಾಗ ಸೋಂಕಿರುವುದು ಪತ್ತೆಯಾಗಿತ್ತು. ಪ್ರಸ್ತುತ ತಾವು ಹೃಷಿಕೇಶದಲ್ಲಿದ್ದು, ಇಲ್ಲಿನ ವಂದೇ ಮಾತರಂ ಕುಂಜ್ ನಲ್ಲಿ ಸ್ವಯಂ ಕ್ಲಾರಂಟೈನ್ ಆಗಿದ್ದೇನೆ.  ನಾಲ್ಕು ದಿನಗಳ ಬಳಿಕ ಮತ್ತೆ ಟೆಸ್ಟ್ ಗೆ ಒಳಪಡುತ್ತೇನೆ. ಕಳೆದ 10 ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದವರು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಟ್ವೀಟ್ ಮಾಡಿದ್ದಾರೆ.