Sunday, 15th December 2024

ಡಿಸೆಂಬರ್ 2023ರೊಳಗೆ ಮೊದಲ ನೀರೊಳಗಿನ ಮೆಟ್ರೋ ಯೋಜನೆ ಪೂರ್ಣ

ಕೋಲ್ಕತ್ತಾ: ಡಿಸೆಂಬರ್ 2023ರ ಒಳಗಾಗಿ ಭಾರತದ ಮೊದಲ ನಿರೋಳಗಿನ ಮೆಟ್ರೋ ಸೇವೆ ಪೂರ್ವ-ಪಶ್ಚಿಮ ಕಾರಿಡಾರ್ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಹೂಗ್ಲಿ ನದಿಯ ಮೂಲಕ ಹಾದು ಹೋಗುವ ನೀರೊಳಗಿನ ಮೆಟ್ರೋ ಸೇವೆಯು ಕೋಲ್ಕತ್ತಾ ಮತ್ತು ಹೌರಾ ನಗರಗಳನ್ನು ಸಂಪರ್ಕಿಸುತ್ತದೆ. ಈ ಯೋಜನೆಯ ಮೂಲಕ ದೇಶದ ಮೊದಲ ಮೆಟ್ರೋ ರೈಲು ಸೇವೆ ಪಡೆದುಕೊಂಡ ಕೋಲ್ಕತ್ತಾ ನಗರಕ್ಕೆ ಈಗ ದೇಶದಲ್ಲಿಯೇ ಮೊದಲ ನೀರೋಳಗಿನ ಮೆಟ್ರೋ ಸೇವೆ ಪಡೆದ ನಗರ ಎಂಬ ಮತ್ತೊಂದು ಗರಿ ಸೇರ್ಪಡೆಯಾಗುತ್ತಿದೆ.

ನಿರೋಳಗಿನ ಮೆಟ್ರೋ ಸೇವೆಯ ಕಾಮಗಾರಿಯ ಮುಕ್ತಾಯವಾಗುವ ಮೂಲಕ ಎರಡು ವಿಶಿಷ್ಟ ಮೂಲಸೌಕರ್ಯಗಳನ್ನು ಪ್ರಯಾಣಿಕರಿಗೆ ಒದಗಿಸಲಿದೆ. ಅತಿ ಕಷ್ಟಕರವಾದ ಈ ಯೋಜನೆಯಲ್ಲಿ ಜರ್ಮನ್ ಮೂಲದ ಯಂತ್ರಗಳೊಂದಿಗೆ ನುರಿತ ವಿದೇಶಿ ತಜ್ಞರ ಸಹಾಯ ಪಡೆಯುವ ಮೂಲಕ ಕಾಮಗಾರಿಗೆ ವೇಗ ನೀಡಲಾಗುತ್ತಿದೆ ಎಂದು ಕೆಎಂಆರ್‌ಸಿ ಅಧಿಕಾರಿ ತಿಳಿಸಿದರು.

ಸುರಂಗವನ್ನು ನಿರ್ಮಿಸಲು ಪ್ರತಿ ಕಿಲೋಮೀಟರ್‌ಗೆ ಸುಮಾರು ₹ 120 ಕೋಟಿ ವೆಚ್ಚ ವಾಗುತ್ತದೆ. ಆದರೆ ಹೂಗ್ಲಿ ನದಿಯಲ್ಲಿನ ನೀರಿನ ಆಳದ ಮೇಲೆ ಸುರಂಗ ನಿರ್ಮಿಸಲಾಗು ತ್ತಿದ್ದು ವೆಚ್ಚವು ಪ್ರತಿ ಕಿಲೋಮೀಟರ್‌ಗೆ ಸುಮಾರು 157 ಕೋಟಿಗಳಷ್ಟು ಹೆಚ್ಚಾಗಲಿದೆ. ಈ ಯೋಜನೆಯಿಂದ ಹೌರಾ ಮತ್ತು ಸೀಲ್ದಾ ನಡುವಿನ ಈ ಮೆಟ್ರೋ ಮಾರ್ಗವು ರಸ್ತೆಯ ಮೂಲಕ 1.5 ಗಂಟೆಗಳ ಪ್ರಯಾಣದ ಸಮಯವನ್ನು 40 ನಿಮಿಷಗಳಿಗೆ ಕಡಿತಗೊಳಿಸುವುದರೊಂದಿಗೆ ಜನದಟ್ಟಣೆ ಕಡಿಮೆಗೊಳಿಸಲಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ನೀರೊಳಗಿನ ಮೆಟ್ರೋ ಸುರಂಗ ನಿರ್ಮಾಣ:

ಕೆಲವು ಪುನರ್ವಸತಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಸುರಂಗ ನಿರ್ಮಾಣ ವಿಳಂಬವಾಗಿದೆ ಎಂದು ಮೆಟ್ರೋ ಅಧಿಕಾರಿ ತಿಳಿಸಿದ್ದಾರೆ. ಕೋಲ್ಕತ್ತಾ ಮೆಟ್ರೋ ರೈಲು ನಿಗಮವು ಜರ್ಮನ್ ದೇಶದ ಉಪಕರಣಗಳು ಮತ್ತು ತಜ್ಞರ ಸಹಾಯದಿಂದ ನೀರೊ ಳಗಿನ ಮೆಟ್ರೋ ಸುರಂಗವನ್ನು ನಿರ್ಮಿಸುವ ಸಾಹಸಮಯ ಕೆಲಸವನ್ನು ಕೈಗೆತ್ತಿಕೊಂಡಿತು. ಪ್ರೇರಣಾ ಮತ್ತು ರಚನಾ ಎಂಬ ಹೆಸರಿನ ಎರಡು ಜರ್ಮನ್ ನಿರ್ಮಿತ ಸುರಂಗ ಕೊರೆಯುವ ಯಂತ್ರಗಳನ್ನು ಕಾಮಗಾರಿಯಲ್ಲಿ ಬಳಕೆ ಮಾಡಲಾಗುತ್ತಿದೆ.

 
Read E-Paper click here