Sunday, 15th December 2024

ಮುಂಬೈ ಪೊಲೀಸರ ಕಸ್ಟಡಿಗೆ ಭೂಗತ ಪಾತಕಿ ರವಿ ಪೂಜಾರಿ

ಮುಂಬೈ: ಭೂಗತ ಪಾತಕಿ ರವಿ ಪೂಜಾರಿಯನ್ನ ಮಂಗಳವಾರ ಮುಂಬೈಗೆ ಕರೆತರಲಾಗಿದೆ.

ಕಳೆದ ವಾರ ಬೆಂಗಳೂರು ಕೋರ್ಟ್​ನಲ್ಲಿ ಸುದೀರ್ಘ ವಾದ – ವಿವಾದದ ಬಳಿಕ ಮುಂಬೈ ಪೊಲೀಸರಿಗೆ ಪೂಜಾರಿ ಕಸ್ಟಡಿ ನೀಡಲಾ ಗಿದೆ. ರವಿ ಪೂಜಾರಿ ಮಾರ್ಚ್​ 9ನೇ ತಾರೀಖಿನವರೆಗೂ ಮುಂಬೈ ಪೊಲೀಸರ ಕಸ್ಟಡಿಯಲ್ಲೇ ಇರಲಿದ್ದಾನೆ.

ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಲೇ ಬಂದಿದ್ದ ಭೂಗತಪಾತಕಿ ರವಿ ಪೂಜಾರಿ ಯನ್ನ 2020ರ ಫೆಬ್ರವರಿ ತಿಂಗಳಲ್ಲಿ ಕರ್ನಾಟಕ ಪೊಲೀಸರು ಸೆನೆಗಲ್​ನಲ್ಲಿ ಬಂಧಿಸಿ ಬೆಂಗಳೂರಿಗೆ ಕರೆ ತಂದಿದ್ದರು.