ನವದೆಹಲಿ: ಗುಜರಾತಿನ ಗಾಂಧಿನಗರದಲ್ಲಿ ಹಲವು ರಾಷ್ಟ್ರಗಳು ಮತ್ತು ರಾಜ್ಯಗಳ ಸಹಯೋಗದಲ್ಲಿ ಆಯೋಜಿಸಿದ್ದ ನವೀಕರಿಸಬಹುದಾದ ಇಂಧನ ಹೂಡಿಕೆದಾರರ 4ನೇ ಜಾಗತಿಕ ಸಭೆ ಮತ್ತು ರಿ-ಇನ್ವೆಸ್ಟ್ ಎಕ್ಸ್‌ಪೊ (Re-invest Expo) ವೇಳೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅವರು, ಡೆನ್ಮಾರ್ಕ್ (Denmark), ಜರ್ಮನಿ (Germany) ಸೇರಿದಂತೆ ವಿವಿಧ ರಾಷ್ಟ್ರಗಳಿಂದ ಆಗಮಿಸಿದ್ದ ಪ್ರತಿನಿಧಿಗಳೊಂದಿಗೆ ದ್ವಿ ಪಕ್ಷೀಯ ಸಭೆ ನಡೆಸಿ ಹೂಡಿಕೆಗೆ ಆಕರ್ಷಿಸಿದರು.
ಇದೇ ವೇಳೆ ಸಚಿವರು, ನವೀಕರಿಸಬಹುದಾದ ವಸ್ತುಗಳಿಗೆ ಮೀಸಲಾದ ಹೂಡಿಕೆ ಕಾರ್ಯವಿಧಾನವನ್ನು ಉಭಯ ರಾಷ್ಟ್ರಗಳ ಸಹಯೋಗದಲ್ಲಿ ರಚಿಸಿರುವುದು ಇದೇ ಮೊದಲು ಎಂದು ಸಂತಸ ಹಂಚಿಕೊಂಡರು.
ಭಾರತ-ಡೆನ್ಮಾರ್ಕ್ ಉಭಯ ರಾಷ್ಟ್ರಗಳ ಸಹಕಾರ ಪರಸ್ಪರ ಗೌರವದ ಅಡಿಪಾಯದ ಮೇಲೆ ನಿರ್ಮಿಸಲ್ಪಟ್ಟಿದೆ. ಇದು ದೇಶದ ಸುಸ್ಥಿರ ಭವಿಷ್ಯ, ಆರ್ಥಿಕತೆ ಮತ್ತು ಪರಿಸರ ಸಂರಕ್ಷಣೆಗಾಗಿ ಸಮಾನ ಗುರಿಗಳೊಂದಿಗೆ ಮುನ್ನಡೆದಿದೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | R Ashok: ವಿಶ್ವ ಮಟ್ಟದಲ್ಲಿ ಭಾರತ ಶ್ರೇಷ್ಠ ದೇಶವಾಗಿ ಹೊರಹೊಮ್ಮಿದೆ: ಆರ್. ಅಶೋಕ್
ಡೆನ್ಮಾರ್ಕ್‌ನ ಕೈಗಾರಿಕೆ, ವ್ಯಾಪಾರ ಮತ್ತು ಹಣಕಾಸು ಸಚಿವ ಮೊರ್ಗೆನ್ ಬೊಡ್ಸ್ಕೋವ್ ಮತ್ತು ಜರ್ಮನಿಯ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಚಿವೆ ಸ್ವೆಂಜಾ ಅವರೊಂದಿಗೆ ಸಚಿವ ಪ್ರಲ್ಹಾದ್ ಜೋಶಿ ಪರಸ್ಪರ ಮಾತುಕತೆ ನಡೆಸಿದರು.
ಹಸಿರು ಇಂಧನ ಕ್ಷೇತ್ರದಲ್ಲಿ ಉಭಯ ರಾಷ್ಟ್ರಗಳ ನಡುವಿನ ಸಹಯೋಗವನ್ನು ಹೆಚ್ಚಿಸಲು ನಾವು ಒಟ್ಟಾಗಿ ನಿರ್ಧರಿಸಿದ್ದೇವೆ ಎಂದೂ ಹೇಳಿದರು.
ಭಾರತದ ಸಾಧನೆಗೆ ಜರ್ಮನ್ ಹೆಮ್ಮೆ
ಹಸಿರು ಇಂಧನ ಶಕ್ತಿ ಉತ್ಪಾದನೆಯಲ್ಲಿ ಭಾರತ ಜಗತ್ತಿನಲ್ಲೇ ಪ್ರಮುಖ ಪಾತ್ರ ವಹಿಸುತ್ತಿದೆ. ಜಾಗತಿಕ ಸವಾಲುಗಳಿಗೆ ಭಾರತವೇ ಉತ್ತರವಾಗಿದೆ ಎಂದು ಜರ್ಮನಿಯ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಚಿವೆ ಸ್ವೆಂಜಾ ಶುಲ್ಜೆ ಹೆಮ್ಮೆ ವ್ಯಕ್ತಪಡಿಸಿದರು.
ಈ ಸುದ್ದಿಯನ್ನೂ ಓದಿ | IND vs BAN: ಮೊದಲ ಟೆಸ್ಟ್‌ಗೆ ಭಾರತದ ತ್ರಿವಳಿ ಸ್ಪಿನ್ ಅಸ್ತ್ರ
32.45 ಲಕ್ಷ ಕೋಟಿ ಹೂಡಿಕೆ
ಭಾರತದ REVision 2030ರ ಯೋಜನೆಗೆ ₹32.45 ಲಕ್ಷ ಕೋಟಿ ಹೂಡಿಕೆ ಆಗಿದ್ದು, ಭಾರತದ ಸುಸ್ಥಿರ ಭವಿಷ್ಯವನ್ನು ನಿರ್ಮಿಸುವ ನಿಟ್ಟಿನಲ್ಲಿ ನಮ್ಮ ಬದ್ಧತೆಯನ್ನು ಪರಿಗಣಿಸಿ, ಹಣಕಾಸು ಸಂಸ್ಥೆಗಳು 2030ರ ವೇಳೆಗೆ $386 ಶತಕೋಟಿಯಷ್ಟು ಹೆಚ್ಚುವರಿ ಹಣಕಾಸು ಒದಗಿಸಲು ಸಿದ್ಧವಾಗಿವೆ ಎಂದು ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.