Thursday, 12th December 2024

ಕೇಂದ್ರ ಬಜೆಟ್ ಗೆ ಅನುಮೋದನೆ

ವದೆಹಲಿ: ಕೇಂದ್ರ ವಿತ್ತಸಚಿವೆ ನಿರ್ಮಲ ಸೀತಾರಾಮನ್‌ ಅವರು ಬುಧವಾರ ಸಂಸತ್ತು ಭವನದಲ್ಲಿ 2023-2024 ನೇ ಸಾಲಿನ ಕೇಂದ್ರ ಬಜೆಟ್‌ ಅನ್ನು ಮಂಡನೆ ಮಾಡಲಿದ್ದಾರೆ.

ಇದೇ ವೇಳೆ, ಬಜೆಟ್‌ ಮಂಡನೆಗೂ ಮುನ್ನ ಭಾರತದ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರನ್ನು ಭೇಟಿ ಮಾಡಿ ಬಜೆಟ್‌ಗೆ ಸಂಬಂಧಪಟ್ಟಂತೆ ಭೇಟಿ ಮಾಡಿದರು.

ಬಳಿಕ ಅವರು ಸಂಸತ್ತು ಭವನಕ್ಕೆ ತೆರಳಿ ಅಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಭಾಗಿಯಾಗಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ 2023ರ ಕೇಂದ್ರ ಬಜೆಟ್ ಗೆ ತನ್ನ ಅನುಮೋದನೆ ನೀಡಿದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೆಲವೇ ಕ್ಷಣಗಳಲ್ಲಿ ಬಜೆಟ್ ಮಂಡಿಸ ಲಿದ್ದಾರೆ. ಎಲ್ಪಿಜಿ ಬೆಲೆಯನ್ನು ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತಿದೆ.

 
Read E-Paper click here