Friday, 22nd November 2024

ಕೇಂದ್ರ ಸರ್ಕಾರದ ಸುಗ್ರೀವಾಜ್ಞೆ ವಿರುದ್ಧ ಎಎಪಿ ಒಂದು ವಾರ ಪ್ರತಿಭಟನೆ

ವದೆಹಲಿ: ದೆಹಲಿಯ ಸೇವಾ ವಿಷಯಗಳ ಆಡಳಿತಾತ್ಮಕ ನಿಯಂತ್ರಣ ಕುರಿತು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ವಿರುದ್ಧ ಆಮ್ ಆದ್ಮಿ ಪಕ್ಷ ವಾರಗಳ ಕಾಲ ಪ್ರತಿಭಟನೆ ಹಮ್ಮಿ ಕೊಂಡಿದೆ.

ವಿವಿಧ ಪ್ರದೇಶಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಸ್ಪಷ್ಟ ಸಂದೇಶ ವನ್ನು ರವಾನಿಸಲಾಗುತ್ತದೆ ಎಂದು ಎಎಪಿ ಪ್ರಕಟಣೆ ತಿಳಿಸಿದೆ.

ಈ ಮೊದಲು ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಪಕ್ಷವು ಈ ವಿಷಯದ ಕುರಿತು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿತ್ತು.

ಪೊಲೀಸ್‌, ಸಾರ್ವಜನಿಕ ಸುವ್ಯವಸ್ಥೆ ಮತ್ತು ಭೂಮಿಯನ್ನು ಹೊರತುಪಡಿಸಿ ದೆಹಲಿ ಯಲ್ಲಿ ಸೇವೆಗಳ ನಿಯಂತ್ರಣವನ್ನು ಸುಪ್ರೀಂ ಕೋರ್ಟ್‌ ಚುನಾಯಿತ ಸರ್ಕಾರಕ್ಕೆ ಹಸ್ತಾಂ ತರಿಸಿದ ಒಂದು ವಾರದ ನಂತರ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿ ಸಿತ್ತು.

ಸುಪ್ರೀಂ ಕೋರ್ಟ್‌ನ ತೀರ್ಪಿನ ಮೊದಲು ದೆಹಲಿ ಸರ್ಕಾರದ ಎಲ್ಲಾ ಅಧಿಕಾರಿಗಳ ವರ್ಗಾವಣೆ ಮತ್ತು ನೇಮಕಾತಿ ಅಧಿಕಾರವು ಲೆಫ್ಟಿನೆಂಟ್‌ ಗರ್ವನರ್‌ ಅವರ ಕಾರ್ಯನಿರ್ವಾಹಕ ನಿಯಂತ್ರಣದಲ್ಲಿತ್ತು.