Thursday, 19th September 2024

Unique Tradition: ಇಲ್ಲಿನ ಗಂಡಸರಿಗೆ ಎರಡು ಮದುವೆ ಕಡ್ಡಾಯ; ಇದರ ಹಿಂದಿದೆ ವಿಚಿತ್ರ ಕಾರಣ!

Typical tradition

ಹೆಣ್ಣು ಸಿಗುವುದಿಲ್ಲ, ಆರ್ಥಿಕ ತೊಂದರೆ.. ಹೀಗೆ ವಿವಿಧ ಕಾರಣಗಳಿಂದಾಗಿ ಈಗಿನ ಕಾಲದಲ್ಲಿ ಒಂದು ಮದುವೆ (wedding) ಆಗೋದೇ ಕಷ್ಟ ಎನ್ನುವಂತ ಪರಿಸ್ಥಿತಿ ಇದೆ. ಆದರೆ ಇಲ್ಲಿ ಮಾತ್ರ ಎರಡೆರೆಡು ಬಾರಿ (two marriages) ಮದುವೆಯಾಗುತ್ತಾರೆ. ಇದು ಇಲ್ಲಿನ ಸಂಪ್ರದಾಯ (Unique Tradition) ಹೌದಾದರೂ ಇದರ ಕಾರಣ ಮಾತ್ರ ವಿಚಿತ್ರವೆನ್ನಬಹುದು.

ಭಾರತದಲ್ಲಿ (India) ಈ ಒಂದು ಹಳ್ಳಿಯಲ್ಲಿ ಪುರುಷರು ವಿಶಿಷ್ಟ ಸಂಪ್ರದಾಯವನ್ನು ಹೊಂದಿದ್ದಾರೆ. ಅವರು ಎರಡು ಬಾರಿ ಮದುವೆಯಾಗುತ್ತಾರೆ. ಈ ಪದ್ಧತಿಯು ಹಳ್ಳಿಯಲ್ಲಿ ಎಷ್ಟು ಬೇರೂರಿದೆ ಎಂದರೆ ಅದು ಈಗ ರೂಢಿಯಾಗಿ ಬಿಟ್ಟಿದೆ.

ಎರಡು ಮದುವೆ ಮಾಡಿಕೊಳ್ಳುವ ಸಂಪ್ರದಾಯಕ್ಕಿಂತಲೂ ಹೆಚ್ಚು ಆಶ್ಚರ್ಯಕರ ಸಂಗತಿಯೆಂದರೆ ಅದರ ಹಿಂದಿರುವ ಕಾರಣ. ತಲೆತಲಾಂತರಗಳಿಂದ ನಡೆದುಕೊಂಡು ಬಂದಿರುವ ಈ ಸಂಪ್ರದಾಯದ ಹಿಂದಿನ ಕಾರಣ ನಿಜಕ್ಕೂ ಬೆರಗು ಹುಟ್ಟಿಸುತ್ತದೆ.

Typical tradition

ಏನಿದು ಸಂಪ್ರದಾಯ?

ಕೆಲವೊಂದು ಆಚರಣೆ, ಸಂಪ್ರದಾಯ, ಪದ್ಧತಿಗಳು ನಮ್ಮನ್ನು ಬೆರಗುಗೊಳಿಸುತ್ತವೆ. ಭಾರತ- ಪಾಕಿಸ್ತಾನ ಗಡಿಯಲ್ಲಿರುವ ಭಾರತದ ಒಂದು ಹಳ್ಳಿಯಲ್ಲಿ ವಿಚಿತ್ರ ಸಂಪ್ರದಾಯ ಎಲ್ಲರಲ್ಲೂ ಬೆರಗು ಮೂಡಿಸುತ್ತದೆ.
ಈ ಗ್ರಾಮದಲ್ಲಿ ಪುರುಷರು ಎರಡು ಬಾರಿ ಮದುವೆಯಾಗುತ್ತಾರೆ. ಸ್ಥಳೀಯ ನಿಯಮದ ಪ್ರಕಾರ, ಒಬ್ಬ ವ್ಯಕ್ತಿ ಎರಡು ಮದುವೆಯಾಗದಿದ್ದರೆ ಅವನನ್ನು ಗ್ರಾಮದಿಂದ ಹೊರಹಾಕಲಾಗುತ್ತದೆ.

ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಈ ಗ್ರಾಮದಲ್ಲಿ ಸುಮಾರು 600 ಮಂದಿ ವಾಸಿಸುತ್ತಿದ್ದಾರೆ. ಗ್ರಾಮದ ಪ್ರತಿಯೊಬ್ಬ ಪುರುಷನಿಗೆ ಕನಿಷ್ಠ ಇಬ್ಬರು ಪತ್ನಿಯರಿದ್ದಾರೆ.

ಸಂಪ್ರದಾಯದ ಹಿಂದಿದೆ ಕಾರಣ

ಅಚ್ಚರಿ ಎನಿಸುವ ಈ ಸಂಪ್ರದಾಯದ ಹಿಂದಿನ ಕಾರಣ ಇನ್ನಷ್ಟು ಬೆರಗು ಮೂಡಿಸುತ್ತದೆ. ದೇರಸರ್ ಗ್ರಾಮದ ನಿವಾಸಿಗಳು ಪುರುಷನ ಮೊದಲ ಹೆಂಡತಿ ಎಂದಿಗೂ ಮಕ್ಕಳನ್ನು ಹೆರುವುದಿಲ್ಲ ಎಂದು ನಂಬುತ್ತಾರೆ. ಹೀಗಾಗಿ ಮಕ್ಕಳನ್ನು ಹೊಂದಲು ಎರಡನೇ ಮದುವೆ ಅಗತ್ಯವೆಂದು ಪರಿಗಣಿಸಲಾಗಿದೆ. ಈ ವಿಶಿಷ್ಟ ನಂಬಿಕೆಯು ಹಳ್ಳಿಯ ಪುರುಷರು ತಮ್ಮ ಮೊದಲ ಮದುವೆಯ ಅನಂತರ ಎರಡನೇ ಬಾರಿಗೆ ಮದುವೆಯಾಗುವಂತೆ ಮಾಡುತ್ತದೆ.

ಈ ವಿಚಿತ್ರ ನಂಬಿಕೆಯ ಮೂಲವು ಬಹಳ ಹಿಂದಿನದು. ಈ ಗ್ರಾಮದ ದಂಪತಿಗೆ ಬಹಳ ವರ್ಷ ಮಕ್ಕಳಾಗಲಿಲ್ಲ. ಹೀಗಾಗಿ ಆತ ಎರಡನೇ ಮದುವೆಯಾಗಿ ಮಕ್ಕಳನ್ನು ಪಡೆದನಂತೆ. ಈ ಘಟನೆ ಹಲವಾರು ಗ್ರಾಮಸ್ಥರ ಮನೆಯಲ್ಲೂ ನಡೆಯಿತು. ಹೀಗಾಗಿ ಈ ಗ್ರಾಮದಲ್ಲಿ ಎರಡು ಮದುವೆಯಾಗುವ ಸಂಪ್ರದಾಯ ಬೆಳೆದು ಬಂತು ಎನ್ನಲಾಗುತ್ತದೆ.

Male Harassment : ಈ ದೇಶದಲ್ಲಿ ಪುರುಷರೇ ಸುರಕ್ಷಿತವಲ್ಲ, ಮಹಿಳೆಯರೇ ಮಾಡ್ತಾರೆ ಅತ್ಯಾಚಾರ!

ನೀರಿನ ಕೊರತೆಯೂ ಕಾರಣ!

ಈ ಅಸಾಮಾನ್ಯ ಸಂಪ್ರದಾಯದ ಹಿಂದೆ ಇನ್ನೊಂದು ಕಾರಣವೂ ಇದೆ. ಗ್ರಾಮವು ತೀವ್ರ ನೀರಿನ ಕೊರತೆಯಿಂದ ಬಳಲುತ್ತಿದೆ. ನೀರು ತರಲು ಮಹಿಳೆಯರು ಪ್ರತಿದಿನ ಕನಿಷ್ಠ 5 ಕಿಲೋ ಮೀಟರ್ ನಡೆದುಕೊಂಡು ಹೋಗಬೇಕು. ಗರ್ಭಿಣಿಯರಿಗೆ ನೀರು ತರಲು ಅಷ್ಟು ದೂರ ನಡೆಯುವುದು ತುಂಬಾ ಸವಾಲಿನ ಕೆಲಸ. ಆದ್ದರಿಂದ ದೂರದಿಂದ ನೀರು ತರಬೇಕಾದ ಸಂದರ್ಭ ಬಂದಾಗ ಮಹಿಳೆಯರಿಗೆ ಹೊರೆಯನ್ನು ಕಡಿಮೆ ಮಾಡಲು ಗ್ರಾಮದ ಪುರುಷರು ಎರಡನೇ ಮದುವೆಯಾಗುತ್ತಾರೆ ಎನ್ನಲಾಗುತ್ತದೆ.