Monday, 23rd September 2024

Unique Tradition: ಈ ಗ್ರಾಮದ ಮಹಿಳೆಯರು ವರ್ಷದಲ್ಲಿ ಐದು ದಿನ ವಸ್ತ್ರವನ್ನೇ ಧರಿಸುವುದಿಲ್ಲ!

Unique Tradition

ನಮ್ಮ ದೇಶದ ಪ್ರತಿಯೊಂದು ಹಳ್ಳಿ, ನಗರ, ರಾಜ್ಯಗಳಲ್ಲಿ ವಿವಿಧ ಆಚರಣೆಗಳಿವೆ. ಪ್ರತಿಯೊಂದು ಭಾಗದಲ್ಲೂ ವಿಶಿಷ್ಟ ಆಚಾರ, ವಿಚಾರಗಳು, ಸಂಪ್ರದಾಯ (Unique Tradition), ಪದ್ಧತಿಗಳಿವೆ. ವೈವಿಧ್ಯತೆಯಿಂದ ಸಮೃದ್ಧವಾಗಿರುವ ದೇಶದ ವಿವಿಧ ಭಾಗದಲ್ಲಿ ವಿಭಿನ್ನ ಸಾಂಸ್ಕೃತಿಕ ಹಿನ್ನೆಲೆಯೂ ಇದೆ.

ರಾಷ್ಟ್ರದಾದ್ಯಂತ ಕಂಡುಬರುವ ಅಸಂಖ್ಯಾತ ಸಂಪ್ರದಾಯಗಳಲ್ಲಿ ಹಿಮಾಚಲ ಪ್ರದೇಶದ ಹಳ್ಳಿಯೊಂದರಲ್ಲಿ ವಿಭಿನ್ನ ರೀತಿಯ ಸಂಪ್ರದಾಯವೊಂದು ಅನೇಕ ಶತಮಾನಗಳಿಂದ ಆಚರಿಸಲಾಗುತ್ತಿದೆ.

ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಪಿಣಿ ಗ್ರಾಮದಲ್ಲಿ ಶ್ರಾವಣ ಮಾಸದ ಕೊನೆಯ ಐದು ದಿನಗಳ ಕಾಲ ಮಹಿಳೆಯರು ಬಟ್ಟೆ ಧರಿಸದಿರುವ ಪುರಾತನ ಸಂಪ್ರದಾಯವನ್ನು ಆಚರಿಸಲಾಗುತ್ತದೆ.

Unique Tradition

ಈ ಅವಧಿಯಲ್ಲಿ ಮಹಿಳೆಯರು ಮನೆಯೊಳಗೆ ಇರುತ್ತಾರೆ. ತಮ್ಮ ಪತಿಯನ್ನೂ ಭೇಟಿಯಾಗುವುದಿಲ್ಲ. ನಗುವುದು ಅಥವಾ ಹೆಚ್ಚು ಮಾತನಾಡುವುದು ಇಲ್ಲ. ಪುರುಷರಿಗೆ ಮಹಿಳೆಯರಿರುವ ಪ್ರದೇಶಕ್ಕೆ ಹೋಗಲು ಅನುಮತಿ ಕಟ್ಟುನಿಟ್ಟಾದ ನಿರ್ಬಂಧವಿರುತ್ತದೆ. ಮದ್ಯ ಮತ್ತು ಮಾಂಸವನ್ನು ಯಾರೂ ಸೇವಿಸುವಂತಿಲ್ಲ.

ಈ ಆಚರಣೆ ಅನೇಕ ಶತಮಾನಗಳಿಂದ ನಡೆದುಕೊಂಡು ಬಂದಿದೆ. ಇದಕ್ಕೆ ಪೂರಕ ಹಿನ್ನೆಲೆಯೂ ಇದೆ. ಅನೇಕ ಶತಮಾನಗಳ ಹಿಂದೆ ಪಿಣಿ ಗ್ರಾಮದಲ್ಲಿ ರಾಕ್ಷಸರ ಆಕ್ರಮಣವಾಯಿತು. ಮಹಿಳೆಯರು ಇದರಿಂದ ಹೆಚ್ಚು ತೊಂದರೆ ಅನುಭವಿಸಿದರು.

Unique Tradition

ಭಾದ್ರಪದ ಮಾಸದ ಮೊದಲ ದಿನದಂದು ‘ಲಹು ಘೋಂಡ್’ ದೇವರು ಕಾಣಿಸಿಕೊಂಡು ಈ ರಾಕ್ಷಸರನ್ನು ಸಂಹರಿಸಿ ಗ್ರಾಮವನ್ನು ಉಳಿಸಿದನೆಂದು ಹೇಳಲಾಗುತ್ತದೆ. ಬಳಿಕ ಅಂದಿನಿಂದ ಈ ಹಬ್ಬವನ್ನು ವಾರ್ಷಿಕವಾಗಿ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಬಟ್ಟೆಗಳನ್ನು ಧರಿಸುವುದು ಮತ್ತೊಂದು ರಾಕ್ಷಸ ದಾಳಿಯನ್ನು ಆಹ್ವಾನಿಸುತ್ತದೆ ಎಂಬ ನಂಬಿಕೆ ಇದೆ.

Unique Tradition: ಇಲ್ಲಿನ ಗಂಡಸರಿಗೆ ಎರಡು ಮದುವೆ ಕಡ್ಡಾಯ; ಇದರ ಹಿಂದಿದೆ ವಿಚಿತ್ರ ಕಾರಣ!

ಕಾಲಾನಂತರದಲ್ಲಿ ಈ ಸಂಪ್ರದಾಯದ ಕಟ್ಟುನಿಟ್ಟು ಕಡಿಮೆಯಾಗಿದೆ.ಕೆಲವು ಮಹಿಳೆಯರು ತೆಳುವಾದ ಬಟ್ಟೆಗಳನ್ನು ಧರಿಸಲು ಅಥವಾ ಐದು ದಿನಗಳ ವಿಶ್ರಾಂತಿ ಪಡೆಯುವುದನ್ನು ಆಯ್ಕೆ ಮಾಡಿಕೊಂಡರು. ಆದರೆ ನಂಬಿಕೆ ಇನ್ನೂ ಉಳಿದಿದೆ. ಹಬ್ಬವನ್ನು ಗ್ರಾಮದಲ್ಲಿ ಅನೇಕರು ಆಚರಿಸುತ್ತಾರೆ. ಸಂಪ್ರದಾಯದ ಪಾವಿತ್ರ್ಯತೆ ಮತ್ತು ಗೌಪ್ಯತೆಯನ್ನು ಕಾಪಾಡಲಾಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ಪಿಣಿ ಗ್ರಾಮವನ್ನು ಪ್ರವೇಶಿಸಲು ಅನುಮತಿ ಇರುವುದಿಲ್ಲ.

.