– ಪದವಿಪೂರ್ವ ವಿದ್ಯಾರ್ಥಿಗಳಿಗೆ ಹೊಸ ವಿದ್ಯಾರ್ಥಿವೇತನ ಆರಂಭ
– ವಿಶ್ವವಿದ್ಯಾಲಯದ ಅಡ್ಮಿನಶನ್ಸ್ ಪೋರ್ಟಲ್ ಮೂಲಕ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು
ನವದೆಹಲಿ: ಭಾರತದ ಅತಿ ಯುವ ಇನ್‌ಸ್ಟಿಟ್ಯೂಶನ್ ಆಫ್ ಎಮಿನೆನ್ಸ್ (ಐಒಇ) ಶಿವ್ ನಾಡಾರ್ ವಿಶ್ವವಿದ್ಯಾಲಯವು 2024-25 ರ ಶೈಕ್ಷಣಿಕ ವರ್ಷಕ್ಕೆ ಅಡ್ಮಿಶನ್‌ಗಳನ್ನು ಆರಂಭಿಸಿದೆ. ಇಂಜಿನಿಯರಿಂಗ್, ನೈಸರ್ಗಿಕ ವಿಜ್ಞಾನ, ನಿರ್ವಹಣೆ ಮತ್ತು ಉದ್ಯಮಶೀಲತೆ ಮತ್ತು ಮಾನವಶಾಸ್ತ್ರ ಹಾಗೂ ಸಮಾಜ ಶಾಸ್ತ್ರದಲ್ಲಿನ ಎಲ್ಲ ನಾಲ್ಕು ಪ್ರೋಗ್ರಾಮ್‌ಗಳಿಗೂ ಅರ್ಜಿಗಳನ್ನು ವಿಶ್ವವಿದ್ಯಾಲಯವು ಆಹ್ವಾನಿಸುತ್ತಿದೆ. ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ನಮೂನೆ ಲಭ್ಯವಿದೆ (http://www.snu.edu.in/home).
2024-25 ಕ್ಕೆ 12ನೇ ತರಗತಿಯಲ್ಲಿ ತಮ್ಮ ಶಾಲೆಯಲ್ಲಿ ಉತ್ತಮ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹೊಸ ವಿದ್ಯಾರ್ಥಿವೇತನವನ್ನು ವಿಶ್ವವಿದ್ಯಾ ಲಯವು ಆರಂಭಿಸಿದೆ. ವಿದ್ಯಾರ್ಥಿವೇತನಗಳ ವಿವರಗಳು ಈ ವೆಬ್‌ಸೈಟ್ ಲಿಂಕ್‌ನಲ್ಲಿ ಲಭ್ಯವಿದೆ: https://snuadmissions.com/.
“ಮುಂಬರುವ ಶೈಕ್ಷಣಿಕ ವರ್ಷಕ್ಕೆ ಅಡ್ಮಿಶನ್‌ಗಳು ತೆರೆದಿರುವ ಹಿನ್ನೆಲೆಯಲ್ಲಿ, ತಾವು ಆಯ್ಕೆ ಮಾಡಿದ ಕ್ಷೇತ್ರಗಳಲ್ಲಿ ಪರಿಣಿತಿ ಸಾಧಿಸಲು ಬಯಸುವ ಪ್ರತಿಭಾವಂತ ವ್ಯಕ್ತಿಗಳನ್ನು ನಾವು ಆಹ್ವಾನಿಸುತ್ತಿದ್ದೇವೆ. ಶೈಕ್ಷಣಿಕ ಸಾಧನೆಗಳ ಹೊರತಾಗಿಯೂ, ನಮ್ಮ ಸಂಸ್ಥೆಯಲ್ಲಿ ಅನ್ವೇಷಣೆ, ಸಂಕೀರ್ಣ ಚಿಂತನೆ ಮತ್ತು ಸಮಗ್ರ ಭಾವನಾತ್ಮಕ ಮತ್ತು ದೈಹಿಕ ಯೋಗಕ್ಷೇಮಕ್ಕೆ ಪ್ರೋತ್ಸಾಹ ನೀಡುತ್ತೇವೆ” ಎಂದು ದೆಹಲಿ ಎನ್‌ಸಿಆರ್‌ನ ಶಿವ ನಾಡಾರ್ ವಿಶ್ವವಿದ್ಯಾ ಲಯದ ಉಪಕುಲಪತಿ ಡಾ. ಅನನ್ಯ ಮುಖರ್ಜಿ ಹೇಳಿದ್ದಾರೆ.
ಅತ್ಯಂತ ಯಶಸ್ವಿ ವೃತ್ತಿ ಅಭಿವೃದ್ಧಿ ಕೇಂದ್ರ (ಸಿಡಿಸಿ) ಅನ್ನು ಶಿವ ನಾಡಾರ್ ಇನ್‌ಸ್ಟಿಟ್ಯೂಶನ್ ಆಫ್ ಎಮಿನೆನ್ಸ್ ಹೊಂದಿದೆ. ಕಳೆದ ವರ್ಷ ಗೂಗಲ್, ಮೈಕ್ರೋಸಾಫ್ಟ್, ಗೋಲ್ಡ್‌ಮನ್ ಸ್ಯಾಕ್ಸ್, ಪಿಡಬ್ಲ್ಯೂಸಿ, ಯುಬಿಎಸ್, ಪಾಲೋಆಲ್ಟೋ, ಸಿಲಿಕಾನ್ ಲ್ಯಾಬ್ಸ್, ಮೆಕಿನ್ಸೆ, ಎಲ್&ಟಿ, ಏರ್‌ಬಸ್, ಹೋಂಡಾ, ಜೆಕೆ ಟೈರ್ಸ್ ಇತ್ಯಾದಿ ಪ್ರಮುಖ ಸಂಸ್ಥೆಗಳು ವಿಶ್ವವಿದ್ಯಾಲಯದ ಪದವೀಧರರನ್ನು ನೇಮಿಸಿಕೊಂಡಿವೆ.
ಶಿವ ನಾಡಾರ್ ವಿಶ್ವವಿದ್ಯಾಲಯದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಭಾರತ ಮತ್ತು ವಿದೇಶಗಳಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿವೆ. ಕೆಲವು ವಿದ್ಯಾರ್ಥಿಗಳು, ತಮ್ಮ ಪದವಿ ವ್ಯಾಸಂಗವನ್ನು ಪೂರೈಸಿದ ನಂತರ ಪಿಎಚ್‌ಡಿ ಕಾರ್ಯಕ್ರಮಗಳಿಗೆ ಪ್ರವೇಶವನ್ನೂ ಪಡೆದುಕೊಂಡಿದ್ದಾರೆ. ಇದು ವಿಶ್ವವಿದ್ಯಾಲಯದ ನಾಲ್ಕು ವರ್ಷದ ಸಂಶೋಧನೆ ಪದವಿಯ ಮೌಲ್ಯವನ್ನು ಎತ್ತಿಹಿಡಿಯುತ್ತದೆ ಮತ್ತು ಜಾಗತಿಕವಾಗಿ ಸ್ಫರ್ಧಾತ್ಮಕ ಪ್ರತಿಭೆಯನ್ನು ಪೋಷಿಸುವಲ್ಲಿ ಇದರ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ.
2011 ರಲ್ಲಿ ಸ್ಥಾಪನೆಯಾದ ವಿಶ್ವವಿದ್ಯಾಲಯವು, 286 ಎಕರೆ ಕ್ಯಾಂಪಸ್ ಅನ್ನು ಹೊಂದಿದ್ದು, ಸುಮಾರು 3000 ವಿದ್ಯಾರ್ಥಿಗಳು ಮತ್ತು 250 ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ. 2022 ರಲ್ಲಿ ಸಂಸ್ಥೆಗೆ ‘ಇನ್‌ಸ್ಟಿಟ್ಯೂಶನ್ ಆಫ್ ಎಮಿನೆನ್ಸ್’ ಎಂಬ ಸ್ಟೇಟಸ್ ಅನ್ನು ನೀಡಲಾಗಿದೆ.
ವಿದ್ಯಾರ್ಥಿಗಳಿಗೆ ಹಲವು ಪ್ರಯೋಜನಗಳು
ವಿಶ್ವವಿದ್ಯಾಲಯವು ತಮ್ಮ ಕ್ಷೇತ್ರಗಳಲ್ಲಿ ಅಪಾರ ಮತ್ತು ವೈವಿಧ್ಯಮಯ ಅನುಭವವನ್ನು ಹೊಂದಿರುವ ಜಾಗತಿಕವಾಗಿ ಮನ್ನಣೆ ಪಡೆದಿರುವ ಸಿಬ್ಬಂದಿಯನ್ನು ಹೊಂದಿದೆ. ಕಲಿಕೆ ಅವಕಾಶವು ತರಗತಿಯ ಹೊರಗೂ ಇದ್ದು, 50 ಕ್ಕೂ ಹೆಚ್ಚು ಕ್ಲಬ್‌ಗಳು ಮತ್ತು ಸೊಸೈಟಿಗಳನ್ನು ಸ್ಥಾಪಿಸಲಾಗಿದೆ. ಸುಸ್ಥಿರತೆಗೆ ಸಂಯೋಜಿತ ವಿನ್ಯಾಸ, ಮಾಡೆಲ್ ಯುನೈಟೆಡ್ ನೇಶನ್ಸ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಫೋಟೋಗ್ರಫಿ, ರೋಬೋಟಿಕ್ಸ್ ಮತ್ತು ಇನ್ನೂ ಅನೇಕ ಜನಪ್ರಿಯ ಕ್ಲಬ್‌ಗಳು ಇವೆ.
ಕ್ರೀಡೆ ಮತ್ತು ದೈಹಿಕ ಯೋಗಕ್ಷೇಮವು ಕಲಿಕೆಯ ಅವಿಭಾಜ್ಯ ಅಂಗವಾಗಿದೆ. ಇಲ್ಲಿ ವಿಶ್ವದರ್ಜೆಯ ಮೂಲಸೌಕರ್ಯವಿದೆ ಮತ್ತು ವಿದ್ಯಾರ್ಥಿಗಳಿಗೆ ಹಲವು ಚಟುವಟಿಕೆಗಳಿಗೆ ಅವಕಾಶವಿದೆ. ಇದರಲ್ಲಿ 90,000 ಚದರಡಿ ವಿಶಾಲವಾದ ಇಂಡೋರ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮತ್ತು 5,71,410 ಚದರಡಿ ಅಂತಾ ರಾಷ್ಟ್ರೀಯ ಮಾನದಂಡದ ಹೊರಾಂಗಣ ಫೀಲ್ಡ್ ಮತ್ತು ಸ್ಕ್ವಾಷ್, ಬ್ಯಾಡ್ಮಿಂಟನ್, ಈಕ್ವೆಸ್ಟ್ರಿಯನ್ ತರಬೇತಿ ಇತ್ಯಾದಿ ಹಲವು ಆಯ್ಕೆಗಳಿವೆ.
ದೆಹಲಿ-ಎನ್‌ಸಿಆರ್‌ನ ಶಿವ ನಾಡಾರ್ ವಿಶ್ವವಿದ್ಯಾಲಯದ ಬಗ್ಗೆ: ಶಿವ ನಾಡಾರ್ ಇನ್‌ಸ್ಟಿಟ್ಯೂಶನ್ ಆಫ್ ಎಮಿನೆನ್ಸ್ ವಿದ್ಯಾರ್ಥಿ ಕೇಂದ್ರಿತ, ಬಹು ಶಿಸ್ತಿನ ಸಂಶೋಧನೆ ವಿಶ್ವವಿದ್ಯಾಲಯವಾಗಿದ್ದು, ಪದವಿಪೂರ್ವ, ಪದವಿ ಮತ್ತು ಸ್ನಾತಕೋತ್ತರ ಮಟ್ಟಗಳಲ್ಲಿ ವಿವಿಧ ಶೈಕ್ಷಣಿಕ ಕೋರ್ಸ್‌ಗಳನ್ನು ಒದಗಿಸುತ್ತದೆ. ಸಂಸ್ಥೆಯನ್ನು 2011 ರಲ್ಲಿ ಎಚ್‌ಸಿಎಲ್‌ನ ಸಂಸ್ಥಾಪಕ ಶಿವ ನಾಡಾರ್ ಅವರಿಂದ ಸ್ಥಾಪಿತವಾದ ದತ್ತಿ ಸಂಸ್ಥೆ ಶಿವ ನಾಡಾರ್ ಫೌಂಡೇಶನ್ ಅಡಿಯಲ್ಲಿ ಸ್ಥಾಪಿಸಲಾಗಿದೆ.
ಕ್ಯೂಎಸ್ ಏಷ್ಯಾ 2024 ರ ರ್‍ಯಾಂಕಿಂಗ್‌ಗಳ ಪ್ರಕಾರ, ಏಷ್ಯಾದಲ್ಲಿ ಪ್ರಮುಖ ಸಂಸ್ಥೆಗಳ ಪೈಕಿ 36% ಮತ್ತು ಭಾರತೀಯ ಸಂಸ್ಥೆಗಳ ಪೈಕಿ 41ನೇ ಶ್ರೇಣಿಯನ್ನು ಶಿವ ನಾಡಾರ್ ಇನ್‌ಸ್ಟಿಟ್ಯೂಶನ್ ಆಫ್ ಎಮಿನೆನ್ಸ್ ಪಡೆದುಕೊಂಡಿದೆ. ನೇಚರ್ ಇಂಡೆಕ್ಸ್ 2023 ಪ್ರಕಾರ ಸಂಶೋಧನೆಗೆ ಅಗ್ರ 30 ಭಾರತದ ಶೈಕ್ಷಣಿಕ ಸಂಸ್ಥೆಗಳ ಪೈಕಿ ಒಂದು ಎಂದು ಹೆಸರಾಗಿದೆ. ಸರ್ಕಾರದ ರಾಷ್ಟ್ರೀಯ ಸಾಂಸ್ಥಿಕ ರ್‍ಯಾಂಕಿಂಗ್ ಫ್ರೇಮ್‌ವರ್ಕ್ (ಎನ್‌ಐಆರ್‌ಎಫ್)ನಲ್ಲಿ ಸತತ ಆರು ವರ್ಷಗಳವರೆಗೆ ಒಟ್ಟಾರೆ ಪಟ್ಟಿಯಲ್ಲಿ ‘ಅಗ್ರ 100’ ಎಂಬ ಹೆಗ್ಗಳಿಕೆಯ ಶಿವ ನಾಡಾರ್ ಐಒಇ ಪಡೆದುಕೊಂಡಿದೆ. ಎನ್‌ಐಆರ್‌ಎಫ್-2022 ರಲ್ಲಿ ಇದು ‘ವಿಶ್ವವಿದ್ಯಾಲಯ’ ವಿಭಾಗದಲ್ಲಿ 62ನೇ ಸ್ಥಾನವನ್ನು ಪಡೆದುಕೊಂಡಿದೆ.