Friday, 22nd November 2024

ಅಕ್ಟೋಬರ್ 1ರಿಂದ ಅನ್​ಲಾಕ್​ 5.0 ಜಾರಿ

ನವದೆಹಲಿ: ಲಾಕ್​ಡೌನ್​ ಸಡಿಲಿಕೆ ಅಂದರೆ ಅನ್​ಲಾಕ್​ 4.0 ಇದೇ ಸೆಪ್ಟೆಂಬರ್ 30ರಂದು ಮುಕ್ತಾಯಗೊಳ್ಳಲಿದ್ದು, ಅಕ್ಟೋಬರ್ 1ರಿಂದ ಅನ್​ಲಾಕ್​ 5.0 ಜಾರಿಯಾಗಲಿದೆ.

ಕೇಂದ್ರ ಸರ್ಕಾರವು ಅನ್​ಲಾಕ್​ 5.0 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಬೇಕಿದೆ. ಅಂದರೆ ಕೊರೋನಾ ವೈರಸ್​ ಬಂದಾಗಿನಿಂದ ಮುಚ್ಚಿರುವ ಶಿಕ್ಷಣ ಸಂಸ್ಥೆಗಳು, ಸಿನಿಮಾ ಥಿಯೇಟರ್​​ಗಳು ಈ ಅನ್​ಲಾಕ್​ 5.0 ಮೂಲಕ ತೆರೆಯುವ ನಿರೀಕ್ಷೆ ಯಲ್ಲಿ ಜನರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೀವ್ರ ಕೊರೋನಾ ಬಾಧಿತ 7 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿ ದ್ದರು. ಈ ಸಭೆಯಲ್ಲಿ ಪ್ರಧಾನಿ ಮೋದಿ, ಅತೀ ಸೂಕ್ಷ್ಮ ಕಂಟೈನ್ಮೆಂಟ್​ ​ ಜೋನ್ ಕಲ್ಪನೆ ಕಾರ್ಯಗತಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಆಯಾ ರಾಜ್ಯದ ಸಿಎಂಗಳಿಗೆ ಸೂಚನೆ ನೀಡಿದ್ದರು. ದೆಹಲಿಯನ್ನೂ ಒಳಗೊಂಡಂತೆ ಈ 7 ರಾಜ್ಯಗಳ ಮುಖ್ಯಮಂತ್ರಿಗಳಿಗೆ ವಾರದಲ್ಲಿ ಒಂದು ಅಥವಾ ಎರಡು ದಿನ ಲಾಕ್​ಡೌನ್​ ಅಥವಾ ಕರ್ಫ್ಯೂ ವಿಧಿಸುವುದನ್ನು ತಡೆಯುವಂತೆ ಮೋದಿ ಸಲಹೆ ನೀಡಿದ್ದರು.

ಸಾರ್ವಜನಿಕರು ಹೆಚ್ಚಿನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಕೇಂದ್ರವು ಸಾಲು-ಸಾಲು ಸಡಿಲಿಕೆಗಳನ್ನು ಘೋಷಿಸಲಿದೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಅನ್​ಲಾಕ್​ 4.0 ಮಾರ್ಗಸೂಚಿ ಹೊರಡಿಸು ವಾಗ, ಕೇಂದ್ರದ ಅನುಮತಿ ಇಲ್ಲದೇ ರಾಜ್ಯ ಸರ್ಕಾರಗಳು ಸ್ವಇಚ್ಛೆಯಿಂದ ಲಾಕ್​ಡೌನ್​ ವಿಧಿಸಲು ಸಾಧ್ಯವಿಲ್ಲ ಎಂದು ಗೃಹ ವ್ಯವಹಾರಗಳ ಸಚಿವಾಲಯ ಹೇಳಿತ್ತು. ಆರ್ಥಿಕ ಚಟುವಟಿಕೆಗಳು:

ರೆಸ್ಟೋರೆಂಟ್​​ಗಳು, ಮಾಲ್​ಗಳು, ಸಲೂನ್​ ಹಾಗೂ ಜಿಮ್​ಗಳನ್ನು ತೆರೆಯಲು ಕೇಂದ್ರ ಗೃಹ ಇಲಾಖೆ ಅನುಮತಿ ನೀಡಿದೆ. ಅದೇ ರೀತಿ ಅಕ್ಟೋಬರ್​​ನಿಂದ ಇನ್ನೂ ಹೆಚ್ಚಿನ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡಬಹುದೆಂದು ನಿರೀಕ್ಷಿಸಲಾಗಿದೆ.

ಇನ್ನು, ಅಕ್ಟೋಬರ್ 1ರಿಂದ ಸಿನಿಮಾ ಥಿಯೇಟರ್​​ಗಳನ್ನು ತೆರೆಯಲು ಕೇಂದ್ರವು ಅವಕಾಶ ನೀಡುತ್ತದೆ ಎಂಬ ಊಹಾಪೋಹ ಗಳು ಹರಿದಾಡುತ್ತಿವೆ. ಆದರೆ ಈ ಬಗ್ಗೆ ಕೇಂದ್ರವು ಇನ್ನೂ ಸಹ ಮಾರ್ಗಸೂಚಿ ಬಿಡುಗಡೆ ಮಾಡಿಲ್ಲ. ಪಶ್ಚಿಮ ಬಂಗಾಳ ರಾಜ್ಯವು ಅಕ್ಟೋಬರ್​ 1ರಿಂದ ಸಿನಿಮಾ ಥಿಯೇಟರ್​​​ಗಳನ್ನು ತೆರೆಯುವುದಾಗಿ ಘೋಷಿಸಿದೆ. ಶೇ.50ರಷ್ಟು ಅಥವಾ ಅದಕ್ಕಿಂತೂ ಕಡಿಮೆ ಜನರಿಗೆ ಥಿಯೇಟರ್​​ನಲ್ಲಿ ಕುಳಿತುಕೊಳ್ಳಲು ಅವಕಾಶ ನೀಡಲಾಗಿದೆ.

ಕೊರೋನಾ ಸಾಂಕ್ರಾಮಿಕ ರೋಗದಿಂದ ಅತೀ ಹೆಚ್ಚು ಒಡೆತ ತಿಂದ ಕ್ಷೇತ್ರ ಪ್ರವಾಸೋದ್ಯಮ. ಸದ್ಯ ಚೇತರಿಕೆಯ ಹಾದಿಯಲ್ಲಿದೆ. ಅಕ್ಟೋಬರ್​​​ನಿಂದ ಪ್ರವಾಸಿಗರಿಗೆ ಪ್ರವಾಸಿ ತಾಣಗಳು ತೆರೆಯಬಹುದು ಎಂಬ ನಿರೀಕ್ಷೆ ಇದೆ.