Wednesday, 29th May 2024

ಉ.ಪ್ರದೇಶ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ

ಲಕ್ನೋ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ.

ರೈತರು, ಕೊವಿಡ್ 19 ವಾರಿಯರ್ಸ್​, ಶಿಕ್ಷಕರು ಮತ್ತು ಮಧ್ಯಮ ವರ್ಗದವರಿಗೆ ಅನುಕೂಲವಾಗುವಂತ ಹಲವು ಅಂಶಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ.

ರಾಜ್ಯದ ಹಲವು ಪತ್ರಕರ್ತರ ವಿರುದ್ಧ ಹಾಕಲಾದ ಸುಳ್ಳು ಕೇಸ್​ಗಳನ್ನು ಹಿಂಪಡೆಯುವುದಾಗಿಯೂ ಪ್ರಿಯಾಂಕಾ ಗಾಂಧಿ ವಾದ್ರಾ ತಿಳಿಸಿದ್ದಾರೆ. ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದ 10 ದಿನಗಳಲ್ಲಿ ಛತ್ತೀಸ್​ಗಢ್​​ನಂತೆಯೇ ಇಲ್ಲಿಯೂ ಕೂಡ ರೈತರ ಎಲ್ಲ ರೀತಿಯ ಕೃಷಿ ಸಾಲ ಮನ್ನಾ ಮಾಡಲಾಗುವುದು. ಭತ್ತ ಮತ್ತು ಗೋಧಿಯನ್ನು ಪ್ರತಿ ಕ್ವಿಂಟಲ್​ಗೆ 2500 ರೂ.ಗೆ ಖರೀದಿ ಮಾಡಲಾಗುವುದು ಮತ್ತು ಕಬ್ಬನ್ನು ಪ್ರತಿ ಕ್ವಿಂಟಲ್​​ಗೆ 400 ರೂಪಾಯಿಗೆ ಖರೀದಿಸಲಾಗುವುದು. ವಿದ್ಯುತ್​ ಬಿಲ್​​ನಲ್ಲಿ ಅರ್ಧದಷ್ಟು ಕಡಿಮೆ ಮಾಡಲಾ ಗುತ್ತದೆ ಮತ್ತು ಕೊರೊನಾ ಸಾಂಕ್ರಾಮಿಕ ಅವಧಿಯಲ್ಲಿ ಬಾಕಿ ಇರುವ ಗ್ರಾಹಕರ್​ ಬಿಲ್​​ನ ಹಣವನ್ನು ಮನ್ನಾ ಮಾಡಲಾಗುತ್ತದೆ ಎಂದೂ ಪ್ರಿಯಾಂಕಾ ಗಾಂಧಿ ವಾದ್ರಾ ತಿಳಿಸಿದ್ದಾರೆ.

ಬೀಡಾಡಿ ಹಸುಗಳಿಂದ ಬೆಳೆ ಹಾನಿ ಸಂಕಷ್ಟ ಅನುಭವಿಸಿದ ರೈತರಿಗೆ 3 ಸಾವಿರ ರೂಪಾಯಿ ಪರಿಹಾರ, 2. ಛತ್ತೀಸ್​ಗಢ್​ನಂತೆ ಉತ್ತರಪ್ರದೇಶದಲ್ಲೂ ಕೂಡ ಹಸುವಿನ ಸಗಣಿಗೆ ಕೆಜಿಗೆ 2 ರೂಪಾಯಿಯನ್ನು ಕೊಟ್ಟ ಖರೀದಿಸಲಾಗುವುದು, 3. ಕೊರೊನಾ ಸಾಂಕ್ರಾಮಿಕ ವಿರುದ್ಧ ಹೋರಾಡಿ ಅದರಲ್ಲೇ ಪ್ರಾಣ ಕಳೆದುಕೊಂಡ ಕೊವಿಡ್​ 19 ವಾರಿಯರ್ಸ್​ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ, 4. ಹೊರಗುತ್ತಿಗೆ ನೌಕರಿ ವ್ಯವಸ್ಥೆ ನಿಲ್ಲಿಸಿ, ತಾತ್ಕಾಲಿಕ ವಾಗಿ ಕೆಲಸ ಮಾಡುತ್ತಿ ರುವ ಉದ್ಯೋಗಿಗಳನ್ನು ಮಾಡುವ ಭರವಸೆ, 5. ತಾತ್ಕಾಲಿಕ ಶಿಕ್ಷಕರು ಮತ್ತು ಶಿಕ್ಷಾ ಮಿತ್ರರ ಖಾಯಂ ಮತ್ತು ಸಂಸ್ಕೃತ-ಉರ್ದು ಶಿಕ್ಷಕ ಹುದ್ದೆಗಳ ಭರ್ತಿ, 6. ಗ್ರಾಮೀಣ ಮತ್ತು ನಗರ ಭಾಗದಲ್ಲಿರುವ ಬಡಜನರು-ಮಧ್ಯಮವರ್ಗದವರಿಗೆ ವಸತಿ ವ್ಯವಸ್ಥೆ.

7. ಎಸ್​ಸಿ/ಎಸ್​ಟಿ ವಿದ್ಯಾರ್ಥಿಗಳಿಗೆ ಪದವಿವರೆಗೂ ಉಚಿತ ಶಿಕ್ಷಣ, ಈ ವರ್ಗದ ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿಯಲ್ಲೂ ಮೀಸಲಾತಿ. 8. ಶಾಲಾ ಅಡುಗೆ ಯವರ ವೇತನ ತಿಂಗಳಿಗೆ 5000 ರೂ.ಗೆ ಹೆಚ್ಚಳ. ಸೇರಿದಂತೆ ಹಲವು ಆಫರ್​ಗಳನ್ನ ಪ್ರಿಯಾಂಕ ಗಾಂಧಿ ಜನರ ಮುಂದೆ ಇಟ್ಟಿದ್ದಾರೆ.

error: Content is protected !!