Friday, 15th November 2024

UPI Payment: ಇನ್ನು ಮುಂದೆ ಬ್ಯಾಂಕ್ ಖಾತೆ ಇಲ್ಲದಿದ್ದರೂ ಯುಪಿಐ ಮೂಲಕ ಪಾವತಿ ಮಾಡಬಹುದು!

UPI Payment

ದೇಶಾದ್ಯಂತ ಸಾಕಷ್ಟು ಜನಪ್ರಿಯಗೊಂಡಿರುವ ಯುಪಿಐ ಖಾತೆದಾರರಿಗೆ (UPI account) ಇಲ್ಲೊಂದು ಪ್ರಮುಖ ಸುದ್ದಿ ಇದೆ. ಅದೇನೆಂದರೆ ಇನ್ನು ಮುಂದೆ ಯುಪಿಐ ಪಾವತಿಗೆ (UPI Payment) ಬ್ಯಾಂಕ್ ಖಾತೆಯ (bank account) ಅಗತ್ಯವಿಲ್ಲ. ಯಾಕೆಂದರೆ ಈಗ ಬ್ಯಾಂಕ್ ಖಾತೆ ಇಲ್ಲದೆಯೂ ಯುಪಿಐ (UPI) ಮೂಲಕ ವಹಿವಾಟು ನಡೆಸಬಹುದಾಗಿದೆ. ಯುಪಿಐ ಅಥವಾ ಏಕೀಕೃತ ಪಾವತಿ ಇಂಟರ್ಫೇಸ್ ದೇಶದಲ್ಲಿ ಡಿಜಿಟಲ್ ವಹಿವಾಟುಗಳನ್ನು ಸಾಕಷ್ಟು ಜನಪ್ರಿಯಗೊಳಿಸಿದೆ. ಅನೇಕ ಜನರು ಫೋನ್ ಪೇ, ಪೇಟಿಎಂ ಮತ್ತು ಗೂಗಲ್ ಪೇ ಮೂಲಕ ಮಾತ್ರ ಸಣ್ಣ ಮೊತ್ತದಿಂದ ದೊಡ್ಡ ಮೊತ್ತದವರೆಗೆ ಪಾವತಿಗಳನ್ನು ನಡೆಸಬಹುದು.

ದಿನಸಿ ಶಾಪಿಂಗ್, ಆನ್‌ಲೈನ್ ಪಾವತಿಯಾಗಿರಲಿ ಹೆಚ್ಚಿನ ಜನರು ಈಗ ಯುಪಿಐ ಮೂಲಕವೇ ಪಾವತಿಗಳನ್ನು ನಡೆಸುತ್ತಿದ್ದಾರೆ. ಈ ಕಾರಣದಿಂದಾಗಿ ಜನರು ಜೇಬಿನಲ್ಲಿ ಹೆಚ್ಚಿನ ನಗದು ಹಿಡಿದುಕೊಳ್ಳುವುದನ್ನು ಕಡಿಮೆ ಮಾಡಿದ್ದಾರೆ. ಯುಪಿಐ ಪಾವತಿಗಳಲ್ಲಿ ಬಳಕೆದಾರರ ಅನುಕೂಲಕ್ಕಾಗಿ ಈಗ ಹೊಸ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ.

ಈ ಮೊದಲು ಯುಪಿಐ ಪಾವತಿಗೆ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡುವುದು ಅವಶ್ಯಕವಾಗಿತ್ತು. ಆದರೆ ಇನ್ನು ಮುಂದೆ ಅದರ ಅಗತ್ಯವಿಲ್ಲ. ಯಾಕೆಂದರೆ ಬ್ಯಾಂಕ್ ಖಾತೆಯನ್ನು ಹೊಂದಿಲ್ಲದಿದ್ದರೂ ಯುಪಿಐ ಖಾತೆಯನ್ನು ರಚಿಸಬಹುದು. ಖಾತೆಯಿಲ್ಲದೆ ಯುಪಿಐ ಖಾತೆಯನ್ನು ಹೇಗೆ ರಚಿಸುವುದು ಎಂಬುದರ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

UPI Payment

ಬ್ಯಾಂಕ್ ಖಾತೆ ಇಲ್ಲದೆ ಪಾವತಿ

ಎನ್ ಪಿಸಿಐ ಇತ್ತೀಚೆಗೆ ಡೆಲಿಗೇಟೆಡ್ ಪೇಮೆಂಟ್ ಸಿಸ್ಟಮ್ ಅನ್ನು ಪ್ರಾರಂಭಿಸಿದೆ. ಈ ಸಹಾಯದಿಂದ ಬಳಕೆದಾರರು ಬ್ಯಾಂಕ್ ಖಾತೆಯಿಲ್ಲದೆ ಯುಪಿಐ ಖಾತೆಯನ್ನು ರಚಿಸಬಹುದು. ಈ ಮೊದಲು ಯುಪಿಐ ಸೇವೆಯನ್ನು ಬಳಸಲು ಬ್ಯಾಂಕ್ ಖಾತೆಯನ್ನು ಹೊಂದಿರುವುದು ಮತ್ತು ಇದರೊಂದಿಗೆ ಯುಪಿಐ ಐಡಿಯನ್ನು ಸಕ್ರಿಯಗೊಳಿಸಲು ಮೊಬೈಲ್ ಮತ್ತು ಆಧಾರ್ ಕಾರ್ಡ್‌ಗಳನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡುವುದು ಅಗತ್ಯವಾಗಿತ್ತು.

ಎನ್ ಸಿಪಿಐಯ ಹೊಸ ವೈಶಿಷ್ಟ್ಯದ ಅನಂತರ ಯುಪಿಐ ಸೇವೆಗಾಗಿ ಬ್ಯಾಂಕ್ ಖಾತೆಯ ಅಗತ್ಯವಿರುವುದಿಲ್ಲ. ಈಗ ಬಳಕೆದಾರರು ತಮ್ಮ ಉಳಿತಾಯ ಖಾತೆಯಿಂದಲೇ ಇತರರಿಗೆ ಯುಪಿಐ ಪಾವತಿಗಳನ್ನು ನಡೆಸಬಹುದು. ಈ ಸೇವೆಯನ್ನು ಸಕ್ರಿಯಗೊಳಿಸಲು ಬಳಕೆದಾರರು ಸಣ್ಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಬಳಿಕ ಬಳಕೆದಾರರು ಪಾವತಿಗಳನ್ನು ನಡೆಸಬಹುದು.

ಏನು ವಿಶೇಷ?

ಇದರಲ್ಲಿ ಪ್ರಾಥಮಿಕ ಖಾತೆದಾರರು ತಮ್ಮ ವಹಿವಾಟುಗಳ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿರುತ್ತಾರೆ. ಯುಪಿಐನ ಈ ವೈಶಿಷ್ಟ್ಯದಿಂದ ಕುಟುಂಬದ ಇತರ ಸದಸ್ಯರೂ ಕೇವಲ ಒಂದು ಬ್ಯಾಂಕ್ ಖಾತೆಯಿಂದ ಯುಪಿಐ ಖಾತೆಯನ್ನು ನಿರ್ವಹಿಸಬಹುದು. ಇದರಲ್ಲಿ ಪ್ರಾಥಮಿಕ ಖಾತೆದಾರರು ಸಂಪೂರ್ಣ ನಿಯಂತ್ರಣವನ್ನು ಹೊಂದಿರುತ್ತಾರೆ. ಲಿಂಕ್ ಮಾಡಿದ ಖಾತೆಗೆ ಪಾವತಿಗಳಿಗೆ ಪ್ರವೇಶವನ್ನು ಸಕ್ರಿಯಗೊಳಿಸಲು ಮತ್ತು ನಿಷ್ಕ್ರಿಯಗೊಳಿಸಲು ಪ್ರಾಥಮಿಕ ಖಾತೆದಾರರಿಗೆ ಆಯ್ಕೆ ಅವಕಾಶವಿದೆ.

UPI Payment

ಯುಪಿಐ ಐಡಿ ರಚಿಸುವುದು ಹೇಗೆ?

ಮೊದಲು ಯುಪಿಐ ಪಾವತಿ ಅಪ್ಲಿಕೇಶನ್‌ನಲ್ಲಿ ಯುಪಿಐ ಅನ್ನು ಕ್ಲಿಕ್ ಮಾಡಿ. ಕುಟುಂಬ ಮತ್ತು ಸ್ನೇಹಿತರನ್ನು ಸೇರಿಸಿ.

ಬಳಿಕ ಎರಡನೇ ಯುಪಿಐ ಐಡಿಯನ್ನು ಮಾಡಬೇಕು. ಇದಕ್ಕಾಗಿ ಅವರ ಸಂಖ್ಯೆಯನ್ನು ನಿಮ್ಮ ಸಂಪರ್ಕ ಪಟ್ಟಿಯಿಂದ ನೇರವಾಗಿ ಸೇರಿಸಬಹುದು. ಇಲ್ಲಿ ದ್ವಿತೀಯ ಖಾತೆಯ ಮಿತಿ ಮತ್ತು ಪ್ರತಿ ಪಾವತಿಯ ಅನುಮೋದನೆಯನ್ನು ಹೊಂದಿಸುವ ಆಯ್ಕೆ ಇದೆ.

Fixed Deposit: ಎಸ್‌ಬಿಐ ಎಫ್‌ಡಿ; 7 ವರ್ಷಗಳವರೆಗೆ 7 ಲಕ್ಷ ರೂ. ಹೂಡಿಕೆ ಮಾಡಿದರೆ ಸಿಗುವ ಬಡ್ಡಿ ಎಷ್ಟು?

ದ್ವಿತೀಯ ಬಳಕೆದಾರರು ವಿನಂತಿಯನ್ನು ಸ್ವೀಕರಿಸಲು ಅಧಿಸೂಚನೆಯನ್ನು ಪಡೆಯುತ್ತಾರೆ. ಸ್ವೀಕರಿಸಿದ ಅನಂತರ ಮಾತ್ರ ದ್ವಿತೀಯ ಬಳಕೆದಾರರಿಗೆ ಯುಪಿಐ ಖಾತೆಯೊಂದಿಗೆ ವಹಿವಾಟು ನಡೆಸಲು ಸಾಧ್ಯವಾಗುತ್ತದೆ.