Friday, 22nd November 2024

ಯುಪಿಐ: 8 ಬಿಲಿಯನ್ ವಹಿವಾಟು

ನವದೆಹಲಿ: ನವರಿ ತಿಂಗಳಿನಲ್ಲಿ ಭಾರತದಲ್ಲಿ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಮೂಲಕ 8 ಬಿಲಿಯನ್ ವಹಿವಾಟು ನಡೆದಿದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾಪೋರೇಷನ್ ಆಫ್ ಇಂಡಿಯಾ ಮಾಹಿತಿ ನೀಡಿದೆ.

ಒಟ್ಟಾಗಿ ಜನವರಿ ತಿಂಗಳಿನಲ್ಲಿ 13 ಲಕ್ಷ ಕೋಟಿ ರೂಪಾಯಿಯ ಯುಪಿಐ ವಹಿವಾಟು ನಡೆದಿದೆ ಎಂದು ತಿಳಿಸಿದೆ.

ದೇಶದಲ್ಲಿ ಯುಪಿಐ ವಹಿವಾಟು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲೇ ಇದೆ. ಪ್ರತಿ ತಿಂಗಳು ಕೂಡಾ ಯುಪಿಐ ವಹಿವಾಟು ಹೆಚ್ಚಳವಾಗುತ್ತಿದೆ. ಕಳೆದ ತಿಂಗಳು ಅಂದರೆ ಡಿಸೆಂಬರ್ 2022ರಲ್ಲಿ ದಾಖಲೆ ಪ್ರಮಾಣದಲ್ಲಿ ಯುಪಿಐ ವಹಿವಾಟು ನಡೆದಿದೆ. 2022ರ ಡಿಸೆಂಬರ್‌ ನಲ್ಲಿ ಭಾರತದಲ್ಲಿ ದಾಖಲೆಯ 7.82 ಬಿಲಿಯನ್ ವಹಿವಾಟು ನಡೆದಿದೆ. ಅಂದರೆ ಸುಮಾರು 12.82 ಟ್ರಿಲಿಯನ್ ರೂಪಾಯಿ ವಹಿವಾಟು ನಡೆದಿದೆ.

ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-24 ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಮಂಡನೆ ಮಾಡಿದ್ದಾರೆ. ಈ ಸಂದರ್ಭದಲ್ಲೇ 2022ರಲ್ಲಿ ಒಟ್ಟಾಗಿ ಎಷ್ಟು ಯುಪಿಐ ವಹಿವಾಟು ನಡೆದಿದೆ.

2022ರಲ್ಲಿ ಒಟ್ಟಾಗಿ ಯುಪಿಐ ವಹಿವಾಟು 1.24 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. 2000ಕ್ಕೂ ಅಧಿಕ ಸ್ಟಾರ್ಟ್‌ಅಪ್‌ಗಳು ಇದೆ. 2021ರಲ್ಲಿ ಫಿನ್‌ಟೆಕ್ ಸೆಕ್ಟರ್‌ಗಳು 50 ಬಿಲಿಯನ್ ಡಾಲರ್‌ ಮೌಲ್ಯವನ್ನು ಹೊಂದಿದೆ, ಇದು 2025ಕ್ಕೆ ಮೂರು ಪಟ್ಟು ಅಧಿಕವಾಗುವ ನಿರೀಕ್ಷೆಯಿದೆ ಎಂದಿದ್ದಾರೆ.7 ಬಿಲಿಯನ್ ವಹಿವಾಟಿಗೆ ಹೆಚ್ಚಳವಾಗಿದೆ.