Thursday, 12th December 2024

ಯುಪಿಐ ಪಾವತಿ ವಹಿವಾಟು: ಏಪ್ರಿಲ್‌ನಲ್ಲಿ ಶೇ.59 ಏರಿಕೆ

ಮುಂಬೈ: ಆನ್‌ಲೈನ್‌ ಮತ್ತು ಕ್ಷಿಪ್ರ ಪಾವತಿ ಕ್ಷೇತ್ರದಲ್ಲಿ ಉತ್ತಮ ವ್ಯವಸ್ಥೆ ರೂಪಿಸಿಕೊಟ್ಟ ಯುನಿಫೈಡ್‌ ಪೇಮೆಂಟ್ಸ್‌ ಇಂಟರ್‌ ಫೇಸ್‌ (ಯುಪಿಐ) ಏಪ್ರಿಲ್‌ನಲ್ಲಿ 890 ಕೋಟಿ ವಹಿವಾಟು ನಡೆಸಿದೆ.

ಅದರ ಮೌಲ್ಯವೇ 14.07 ಲಕ್ಷ ಕೋಟಿ ರೂ. ಆಗಿ, ದಾಖಲೆಯೇ ಆಗಿದೆ ಎಂದು ಭಾರತದ ರಾಷ್ಟ್ರೀಯ ಪಾವತಿ ನಿಗಮ ಹೇಳಿದೆ.

ಕಳೆದ ತಿಂಗಳು ಯುಪಿಐ ವಹಿವಾಟು ಪ್ರಮಾಣ 2022 ಏಪ್ರಿಲ್‌ಗೆ ಹೋಲಿಕೆ ಮಾಡಿದರೆ ಶೇ.59 ಏರಿಕೆ ಕಂಡಿದೆ.

ಒಂದು ವರ್ಷದ ಹಿಂದಿನದ್ದಕ್ಕೆ ಹೋಲಿಕೆ ಮಾಡಿದರೆ ವಹಿವಾಟು ಮೌಲ್ಯ ಕೂಡ ಶೇ.49 ಹೆಚ್ಚಾಗಿದೆ ಎಂದು ಪಾವತಿ ನಿಗಮ ಹೇಳಿದೆ. ಫೆಬ್ರವರಿಗೆ ಹೋಲಿಕೆ ಮಾಡಿದರೆ, ಮಾರ್ಚ್‌ ನಲ್ಲಿ ವಹಿವಾಟು ಏರಿಕೆಯಾಗಿತ್ತು. ಐಎಂಪಿಎಸ್‌ ಮೂಲಕ ನಡೆಸಿದ ವಹಿವಾಟು ಪ್ರಮಾಣ ಕೊಂಚ ಇಳಿಕೆಯಾಗಿದ್ದು, 49.6 ಕೋಟಿ ಆಗಿತ್ತು.

ಮಾರ್ಚ್‌ನಲ್ಲಿ 49.7 ಕೋಟಿ ವಹಿವಾಟು ನಡೆದಿತ್ತು. ಇನ್ನು ಫಾಸ್ಟಾಗ್‌ ವಹಿವಾಟು ದಾಖಲೆಯ 30.5 ಕೋಟಿ ಆಗಿದ್ದು, ಅದರ ಮೌಲ್ಯ 5,149 ಕೋಟಿ ರೂ. ಆಗಿದೆ.