Thursday, 19th September 2024

UPS: ಏಕೀಕೃತ ಪಿಂಚಣಿ ಯೋಜನೆ- ಇದು ಮೋದಿ ಸರ್ಕಾರದ ಕ್ರಾಂತಿಕಾರಕ ನಡೆ!

UPS

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(PM Narendra Modi) ನೇತೃತ್ವದ ಕೇಂದ್ರ  ಸರ್ಕಾರ ಏಕೀಕೃತ ಪಿಂಚಣಿ ಯೋಜನೆ(UPS)ಯನ್ನು ಜಾರಿಗೊಳಿಸುವ ಮೂಲಕ ಇತ್ತೀಚೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್‌ ನೀಡಿತ್ತು. ಈ ಯೋಜನೆ ಸರ್ಕಾರಿ ನೌಕರರಿಗೆ ಭವಿಷ್ಯದಲ್ಲಿಆರ್ಥಿಕ ಭದ್ರತೆ ಒದಗಿಸುತ್ತದೆ. ಒಟ್ಟಿನಲ್ಲಿ ನಿವೃತಿ ಬಳಿಕ ಸರ್ಕಾರಿ ನೌಕರರಿಗೆ ಸುಭದ್ರ ಜೀವನ ಕಲ್ಪಿಸುವುದು ಸರ್ಕಾರ ಬಹುದೊಡ್ಡ ಗುರಿಯಾಗಿದೆ. ಅದರ ಜತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲಿನ ಆರ್ಥಿಕ ಹೊರೆ ತಪ್ಪಿಸುವುದು ಕೂಡ ಈ ಯೋಜನೆಯ ಉದ್ದೇಶವಾಗಿದೆ.

ನಿವೃತ ನೌಕರರು ಕಳೆದ 12 ತಿಂಗಳ ಸೇವೆಯ ತಮ್ಮ ಸರಾಸರಿ  ಮೂಲ ವೇತನದ 50% ರಷ್ಟು ಮೊತ್ತವನ್ನು ಪಿಂಚಣಿಯಾಗಿ ಪಡೆಯಲು ಯುಪಿಎಸ್‌ ಅವಕಾಸ ಕಲ್ಪಿಸಿದೆ. ಇದು ನೌಕರರಿಗೆ ನಿಶ್ಚಿತತೆ ಮತ್ತು ಸ್ಥಿರತೆಯನ್ನು ನೀಡುತ್ತದೆ. ಇನ್ನು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ಜಾರಿಗೊಳಿಸಿದ್ದ ಪಿಂಚಣಿ ಸುಧಾರಣಾ ನೀತಿಗೆ ಧಕ್ಕೆಯಾಗದಂತೆ ಈ ನೂತನ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ನೌಕರರು ಮತ್ತು ಸರ್ಕಾರ ಇಬ್ಬರೂ ಪಿಂಚಣಿ ನಿಧಿಗೆ ಕೊಡುಗೆ ನೀಡುವಂತೆ ಮಾಡುವ ಮೂಲಕ, ಹಣಕಾಸಿನ ಜವಾಬ್ದಾರಿಯನ್ನು ಸಮತೋಲನಗೊಳಿಸುವ ಸಮರ್ಥನೀಯ ಮಾದರಿಯನ್ನು UPS ಪರಿಚಯಿಸುತ್ತದೆ.

ಹಳೆಯ ಪಿಂಚಣಿ ಯೋಜನೆಗಿಂತ ಭಿನ್ನ

ಯುಪಿಎಸ್ ಹಳೆಯ ಪಿಂಚಣಿ ಯೋಜನೆಗೆ (OPS) ಸಂಪೂರ್ಣವಾಗಿ ಭಿನ್ನವಾಗಿದೆ. ಹಳೆಯ ಪಿಂಚಣಿ ಯೋಜನೆಗಳಿಂದ ರಾಜ್ಯ ಸರ್ಕಾರಗಳಿಗೆ ಬಹುದೊಡ್ಡ ಮಟ್ಟದಲ್ಲಿ ಹೊರೆಯಾಗಲಿದೆ. ರಾಜಸ್ಥಾನ, ಛತ್ತೀಸ್‌ಗಢ, ಜಾರ್ಖಂಡ್, ಪಂಜಾಬ್ ಮತ್ತು ಹಿಮಾಚಲ ಪ್ರದೇಶದಂತಹ ರಾಜ್ಯಗಳು ಎನ್‌ಡಿಎಯೇತರ ನಾಯಕತ್ವದಲ್ಲಿ ಹಳೆಯ ಪಿಂಚಣಿ ಯೋಜನೆಯನ್ನೇ ಜಾರಿಗೊಳಿಸಿವೆ. ಆದರೆ ಈ ಕ್ರಮಕ್ಕೆ ಹಲವರಿಂದ ಭಾರೀ ವಿರೋಧ ವ್ಯಕ್ತವಾಗಿದ್ದು, ಆರ್ಥಿಕವಾಗಿ ಬೇಜವಾಬ್ದಾರಿ ಎಂದು ಟೀಕಿಸಲಾಗಿದೆ. ರಿಸರ್ವ್ ಇಂಡಿಯಾ ಆಫ್ ಇಂಡಿಯಾ (RBI) ಇಂತಹ ನಿರ್ಧಾರಗಳ ಭೀಕರ ಪರಿಣಾಮಗಳನ್ನು ಎತ್ತಿ ತೋರಿಸಿದೆ.

UPSನಿಂದ ಲಾಭವೇನು?

ಮೋದಿ ಸರ್ಕಾರದ UPS ಸರ್ಕಾರಿ ನೌಕರರ ಕುಂದುಕೊರತೆಗಳನ್ನು ಪರಿಹರಿಸುವ ವಿವೇಕಯುತ ನಡೆಯಾಗಿದೆ.  ಮೂಲ ವೇತನಕ್ಕೆ ಸರ್ಕಾರದ ಕೊಡುಗೆ 18.5%ಕ್ಕೆ ಹೆಚ್ಚಿಸುವ ಮೂಲಕ ಮತ್ತು ಉದ್ಯೋಗಿಯ ಕೊಡುಗೆಯನ್ನು 10%  ನಿಗಧಿಪಡಿಸುವ ಮೂಲಕ ದಿಟ್ಟ ಹೆಜ್ಜೆಯಟ್ಟಿದೆ. ಇದರಿಂದ ಸರ್ಕಾರದ ಮೇಲಿನ ಹೊರೆಯೂ ಕಡಿಮೆ ಆಗುತ್ತದೆ, ಅಲ್ಲದೇ ನೌಕರರ ಆರ್ಥಿಕ ಭವಿಷ್ಯವನ್ನೂ ಸುಭದ್ರಗೊಳಿಸುತ್ತದೆ.

ಯುಪಿಎಸ್ ಅನ್ನು ಅಳವಡಿಸಿಕೊಳ್ಳುವ ರಾಜ್ಯಗಳು ತಮ್ಮ ಆರ್ಥಿಕ ಸ್ಥಿರತೆಗೆ ಧಕ್ಕೆಯಾಗದಂತೆ ಮೂಲಸೌಕರ್ಯ ಮತ್ತು ಸಮಾಜ ಕಲ್ಯಾಣಗಳಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸಬಹುದು. ಮೋದಿ ಆಡಳಿತವು ಪಾರದರ್ಶಕತೆ ಮತ್ತು ಹಣಕಾಸು ಹೊರೆ ನಿಯಂತ್ರಿಸುವ ಬಗ್ಗೆ ಕೇಂದ್ರೀಕೃತವಾಗಿದ್ದು, ಈ ಯೋಜನೆ ಆ ಗುರಿಯನ್ನು ತಲುಪುವಲ್ಲಿ ಬಹಳಷ್ಟು ಪೂರವಾಗಿದೆ.

ಮೂಲಭೂತವಾಗಿ, ಯುಪಿಎಸ್ ಯೋಜನೆ ಸಾಮಾಜಿಕ ಭದ್ರತೆಯೊಂದಿಗೆ ಆರ್ಥಿಕ ಬೆಳವಣಿಗೆಯನ್ನು ಸಮತೋಲನಗೊಳಿಸುವ ಮೋದಿ ಸರ್ಕಾರದ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಇದು ಕೇವಲ ಪಿಂಚಣಿ ಸುಧಾರಣೆಯಲ್ಲ, ಬದಲಾಗಿ ರಾಜ್ಯಗಳ ಆರ್ಥಿಕ ಹೊರೆಯನ್ನು ತಗ್ಗಿಸುವ ಮಹತ್ವದ ಹೆಜ್ಜೆಯಾಗಿದೆ.  ದೇಶದ ಆರ್ಥಿಕ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಈ ಯೋಜನೆ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ, ರಾಷ್ಟ್ರದ ಹಣಕಾಸಿನ ಸ್ಥಿತಿಗತಿಯನ್ನು ಖಾತ್ರಿಪಡಿಸುವ ಮೂಲಕ ಲಕ್ಷಾಂತರ ಸರ್ಕಾರಿ ಉದ್ಯೋಗಿಗಳ ಆರ್ಥಿಕ ಭವಿಷ್ಯವನ್ನು ಭದ್ರಪಡಿಸುತ್ತದೆ.