Friday, 22nd November 2024

ನಾಗರಿಕ ಸೇವಾ (ಪೂರ್ವಭಾವಿ) ಪರೀಕ್ಷೆ ಇಂದು

ನವದೆಹಲಿ : ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ ಸಿ) ನಾಗರಿಕ ಸೇವಾ (ಪೂರ್ವಭಾವಿ) ಪರೀಕ್ಷೆ ಇಂದು ನಡೆಯ ಲಿದ್ದು, ದೇಶದ 72 ನಗರಗಳ 2,569 ಕೇಂದ್ರಗಳಲ್ಲಿ ನಡೆಯಲಿದೆ.

ಈ ಹಿಂದೆ ಮೇ 31ರಂದು ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಲಾಗಿತ್ತು. ಆದರೆ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಲಾಗಿತ್ತು. ಇಂದು ಪರೀಕ್ಷೆ ನಡೆಯಲಿದ್ದು, ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಈ ಕೆಳಗಿನ ಪ್ರಮುಖ ಮಾರ್ಗಸೂಚಿಗಳನ್ನು ಪಾಲಿಸ ಬೇಕು.

ನಾಗರಿಕ ಸೇವಾ (ಪೂರ್ವಭಾವಿ) ಪರೀಕ್ಷೆ ತೆಗೆದುಕೊಳ್ಳುವ ಎಲ್ಲಾ ಅಭ್ಯರ್ಥಿಗಳು ಮಾಸ್ಕ್ ಧರಿಸುವುದು ಕಡ್ಡಾಯ.

– ಯಾವುದೇ ವಿದ್ಯಾರ್ಥಿಗೆ ಫೇಸ್ ಮಾಸ್ಕ್ ಇಲ್ಲದೆ ಪರೀಕ್ಷೆ ಬರೆಯಲು ಅವಕಾಶ ವಿರುವುದಿಲ್ಲ.

– ಅಭ್ಯರ್ಥಿಗಳು ಪರೀಕ್ಷಾ ಹಾಲ್ ಗೆ ಸಾನಿಟೈಸರ್ ಗಳನ್ನು ಕೊಂಡೊಯ್ಯಬೇಕು.

– ಪರೀಕ್ಷಾ ಕೊಠಡಿ, ಕೊಠಡಿ ಸೇರಿದಂತೆ ಕ್ಯಾಂಪಸ್ ನಲ್ಲಿ ಸಾಮಾಜಿಕ ಅಂತರ ಅನುಸರಿಸಬೇಕು.

– ಪ್ರವೇಶ ಪಡೆಯಲು, ಅಭ್ಯರ್ಥಿಗಳು ತಮ್ಮ ಫೋಟೋ ಐಡಿ ಕಾರ್ಡ್ ಗಳನ್ನು ತರಬೇಕು, ಅವರ ಸಂಖ್ಯೆಯನ್ನು ಅವರ ಇ-ಅಡ್ಮಿಟ್ ಕಾರ್ಡ್ ಗಳಲ್ಲಿ ನೀಡಲಾಗುತ್ತದೆ.

– ಮೊದಲ ಪರೀಕ್ಷೆ ಬೆಳಗ್ಗೆ 9.30ರಿಂದ 11.30ರವರೆಗೆ ನಡೆಯಲಿದ್ದು, ಎರಡನೇ ಪಾಳಿ ಮಧ್ಯಾಹ್ನ 2.30ರಿಂದ 4.30ರವರೆಗೆ ನಡೆಯಲಿದೆ.