Thursday, 24th October 2024

UPSC Recruitment 2024: ಯುಪಿಎಸ್‌ಸಿಯ 457 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಹೀಗೆ ಅಪ್ಲೈ ಮಾಡಿ

UPSC Recruitment 2024

ಬೆಂಗಳೂರು: ಕೇಂದ್ರ ಸರ್ಕಾರಿ ಉದ್ಯೋಗ ಹೊಂದಬೇಕು ಎನ್ನುವ ಕನಸು ಕಾಣುವವರಿಗೆ ಯೂನಿಯನ್‌ ಪಬ್ಲಿಕ್‌ ಸರ್ವಿಸ್‌ ಕಮಿಷನ್‌ (Union Public Service Commission) ಸುವರ್ಣಾವಕಾಶ ಒದಗಿಸುತ್ತಿದೆ. ಖಾಲಿ ಇರುವ 457 ಎಂಜಿನಿಯರಿಂಗ್‌ ಸರ್ವಿಸ್‌ ಎಕ್ಸಾಮಿನೇಷನ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ (UPSC Recruitment 2024). ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಉದ್ಯೋಗದ ಸ್ಥಳ: ಭಾರತಾದ್ಯಂತ. ಅರ್ಜಿ ಸಲ್ಲಿಸಲು ಕೊನೆಯ ದಿನ ನವೆಂಬರ್‌ 22 (Job Guide).

ವಿದ್ಯಾರ್ಹತೆ

ಎಂಜಿನಿಯರಿಂಗ್‌ ಸರ್ವಿಸ್‌ ಎಕ್ಸಾಮಿನೇಷನ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರ ವಿದ್ಯಾರ್ಹತೆ: ಯಾವುದೇ ಬೋರ್ಡ್‌, ವಿಶ್ವವಿದ್ಯಾನಿಯದಿಂದ ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಪದವಿ, ಎಂ.ಎಸ್‌ಸಿ ಪಡೆದವರು ಅರ್ಜಿ ಸಲ್ಲಿಸಬಹುದು.

ವಯೋಮಿತಿ

ಯುಪಿಎಸ್‌ಸಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳ ಕನಿಷ್ಠ ವಯಸ್ಸು 21 ವರ್ಷ ಮತ್ತು ಗರಿಷ್ಠ ವಯಸ್ಸು 30 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ

ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಬಿಡಿ/ಮಹಿಳಾ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಇತರ ಎಲ್ಲ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 200 ರೂ. ಪಾವತಿಸಬೇಕು. ಪಾವತಿ ವಿಧಾನ: ಆನ್‌ಲೈನ್‌/ಎಸ್‌ಬಿಐ ಬ್ಯಾಂಕ್‌.

ಆಯ್ಕೆ ವಿಧಾನ

ಪ್ರಿಲಿಮಿನರಿ ಪರೀಕ್ಷೆ, ಮೈನ್ಸ್‌ ಪರೀಕ್ಷೆ, ಪರ್ಸನಾಲಿಟಿ ಟೆಸ್ಟ್‌, ಸಂದರ್ಶನ ಮುಂತಾದ ವಿಧಾನಗಳ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ಪ್ರಿಲಿಮಿನರಿ ಪರೀಕ್ಷೆ ನಡೆಯುವ ಕೇಂದ್ರಗಳು

ಅಗರ್ತಲಾ, ಅಹಮಾದಾಬಾದ್‌, ಆಲಿಗಢ, ಪ್ರಯಾಗ್‌ರಾಜ್‌, ಬೆಂಗಳೂರು, ಬರೇಲಿ, ಭೋಪಾಲ್‌, ಚಂಡೀಗಢ, ಚೆನ್ನೈ, ಕಟಕ್‌, ಡೆಹ್ರಾಡೂನ್‌, ದಿಲ್ಲಿ, ಧಾರವಾಡ, ಗುವಹಾಟಿ, ಗ್ಯಾಂಗ್ಟೋಕ್‌, ಹೈದರಾಬಾದ್‌, ಇಂಫಾಲ, ಇಟಾನಗರ, ಜೈಪುರ, ಜಮ್ಮು, ಜೊಹ್ರತ್‌, ಕೊಚ್ಚಿ, ಕೊಹಿಮಾ, ಕೋಲ್ಕತ್ತಾ, ಲಕ್ನೋ, ಮಧುರೈ, ಮುಂಬೈ, ನಾಗ್ಪುರ, ಪಣಜಿ, ಪಾಟ್ನಾ, ಪೋರ್ಟ್‌ ಬ್ಲೇರ್‌, ಪಾರ್‌ಪುರ, ರಾಂಚಿ, ಸಂಬಳಾಪುರ, ಸಿಲ್ಲಾಂಗ್‌, ಶಿಮ್ಲಾ, ಶ್ರೀನಗರ, ತಿರುವನಂತಪುರಂ, ತಿರುಪತಿ, ಉದಯಪುರ, ವಿಶಾಖಪಟ್ಟಣ

UPSC Recruitment 2024 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ (https://upsconline.nic.in/upsc/OTRP/)
  • ಮೊದಲು ಹೆಸರು ನೋಂದಾಯಿಸಿ.
  • ಪಾಸ್‌ವರ್ಡ್‌ ಬಳಸಿ ಲಾಗಿನ್‌ ಆಗಿ.
  • ಈಗ ಕಂಡುಬರುವ ಅಪ್ಲಿಕೇಷನ್‌ ಫಾರಂ ಅನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
  • ಅಗತ್ಯ ದಾಖಲೆಗಳನ್ನು ಸರಿಯಾದ ಅಳತೆಯಲ್ಲಿ ಅಪ್‌ಲೋಡ್‌ ಮಾಡಿ.
  • ಅರ್ಜಿ ಶುಲ್ಕವನ್ನು ಪಾವತಿಸಿ (ಅಗತ್ಯವಿದ್ದವರು ಮಾತ್ರ).
  • ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.
  • ಭವಿಷ್ಯದ ಅಗತ್ಯಗಳಿಗೆ ಅಪ್ಲಿಕೇಷನ್‌ ಫಾರಂ ಡೌನ್‌ಲೋಡ್‌ ಮಾಡಿಟ್ಟುಕೊಳ್ಳಿ.

ಹೆಚ್ಚಿನ ವಿವರಗಳಿಗೆ, ಸಂಶಯ ನಿವಾರಣೆಗೆ ದೂರವಾಣಿ ಸಂಖ್ಯೆ: 011-23385271 / 011-23381125/011-23098543ಕ್ಕೆ ಕರೆ ಮಾಡಿ.

ಈ ಸುದ್ದಿಯನ್ನೂ ಓದಿ: Job Guide: ನ್ಯಾಷನಲ್‌ ಫರ್ಟಿಲೈಸರ್ಸ್‌ ಲಿಮಿಟೆಡ್‌ನಲ್ಲಿದೆ 336 ಹುದ್ದೆ; 10ನೇ ತರಗತಿ ಪಾಸಾದವರು ಅಪ್ಲೈ ಮಾಡಿ