ಐಎಂಎ (ಇಂಡಿಯನ್ ಮಿಲಿಟರಿ ಅಕಾಡೆಮಿ), ಐಎನ್ಎ (ಇಂಡಿಯನ್ ನೇವಲ್ ಅಕಾ ಡೆಮಿ), ಎಎಫ್ಎ (ಏರ್ ಫೋರ್ಸ್ ಅಕಾಡೆಮಿ) ಮತ್ತು ಒಟಿಎ (ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ) ಸೇರಿದಂತೆ ವಿವಿಧ ಸಶಸ್ತ್ರ ಪಡೆಗಳ ಅಕಾಡೆಮಿಗಳಲ್ಲಿ 341 ಅಭ್ಯರ್ಥಿಗಳನ್ನು ನೇಮಕ ಮಾಡಲು ಯುಪಿಎಸ್ಸಿ ಸಿಡಿಎಸ್ 1 ಪರೀಕ್ಷೆಯನ್ನು ನಡೆಸ ಲಾಗಿತ್ತು.
ಯುಪಿಎಸ್ಸಿ ಸಿಡಿಎಸ್ 1 ಲಿಖಿತ ಪರೀಕ್ಷೆಯನ್ನ ಏಪ್ರಿಲ್ 16, 2023 ರಂದು ನಡೆಸಲಾಗಿತ್ತು. ಒಟ್ಟು 6518 ಅಭ್ಯರ್ಥಿಗಳು ಪರೀಕ್ಷೆ ಯಲ್ಲಿ ಉತ್ತೀರ್ಣರಾಗಿದ್ದಾರೆ. ಈಗ ಅವರು ಸಂದರ್ಶನ ಸುತ್ತಿಗೆ ಹಾಜರಾಗಬೇಕಾಗುತ್ತದೆ.
ಯುಪಿಎಸ್ಸಿ ಎಸ್ಎಸ್ಬಿ ಸಂದರ್ಶನಕ್ಕೆ ಅಭ್ಯರ್ಥಿಗಳನ್ನ ಕರೆಯಲಾಗುತ್ತದೆ. ಅಲ್ಲಿ ಅವರು ಐದು ದಿನಗಳಲ್ಲಿ ಮಾನಸಿಕ, ವೈದ್ಯಕೀಯ ಮತ್ತು ದೈಹಿಕ ಪರೀಕ್ಷೆಗಳನ್ನ ಎದುರಿಸುತ್ತಾರೆ. ಯುಪಿಎಸ್ಸಿ ಸಿಡಿಎಸ್ ಎಸ್ಎಸ್ಬಿ ಸಂದರ್ಶನದಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಭಾರತೀಯ ಸಶಸ್ತ್ರ ಪಡೆಗಳ ಅಕಾಡೆಮಿಗಳಿಗೆ ದಾಖಲಾಗುತ್ತಾರೆ.