Saturday, 26th October 2024

US elections : ಅಮೆರಿಕದಲ್ಲಿ ಅರ್ಲಿ ವೋಟಿಂಗ್ ಪ್ರಾರಂಭ

US elections

ವರದಿ: ಬೆಂಕಿ ಬಸಣ್ಣ, ನ್ಯೂಯಾರ್ಕ್‌

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ (US elections) ಇರುವುದು ನವಂಬರ್ 5ನೇ ತಾರೀಕು. ಆದರೆ ಕೆಲವು ರಾಜ್ಯಗಳಲ್ಲಿ ಅರ್ಲಿ ವೋಟಿಂಗ್ ಪ್ರಾರಂಭವಾಗಿದೆ. ನ್ಯೂಯಾರ್ಕ್ ರಾಜ್ಯದಲ್ಲಿ ಇಂದು ಶನಿವಾರ ಅಕ್ಟೋಬರ್ 26ರಂದು ಬೆಳಿಗ್ಗೆ 9 ಗಂಟೆಗೆ early voting ಪ್ರಾರಂಭವಾಯಿತು. ನಡುಗುವ ಚಳಿಯಲ್ಲಿ ಬಹಳಷ್ಟು ಜನರು ಎಂಟು ಗಂಟೆಗೆ ಬಂದು ಕ್ಯೂದಲ್ಲಿ ನಿಂತಿದ್ದರು. ಅಮೆರಿಕ ವಾಸಿ ಕನ್ನಡಿಗರು ಸೇರಿದಂತೆ ಹಲವರ ಸಾಲಿನಲ್ಲಿ ನಿಂತು ಅರ್ಲಿ ವೋಟಿಂಗ್ ಪ್ರಾರಂಭವಾದ ಮೊದಲ ದಿವಸವೇ ತಮ್ಮ ಮತದಾನ ಮಾಡಿದರು.

ಕಮಲ ಹ್ಯಾರಿಸ್ ಮತ್ತು ಡೊನಾಲ್ಡ್ ಟ್ರಂಪ್ ಮಧ್ಯ ತೀವ್ರ ಸ್ವರೂಪದ ಸ್ಪರ್ಧೆ ಏರ್ಪಟ್ಟಿದೆ. ಮೊದಲು ಟ್ರಂಪ್ ಡೆಮೊಕ್ರೆಟಿಕ್ ಪಕ್ಷದ ಅಭ್ಯರ್ಥಿ ಈಗಿನ ಅಧ್ಯಕ್ಷ ಜೋ ಬೈಡನ್ ವಿರುದ್ಧ ಒಪಿನಿಯನ್ ಪೋಲಿನಲ್ಲಿ ತುಂಬಾ ಮುಂದಿದ್ದರು. ಆದರೆ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗಿ ಕಮಲ ಹ್ಯಾರಿಸ್ ಬಂದ ಮೇಲೆ ರಿಪಬ್ಲಿಕ್ ಪಕ್ಷದ ಟ್ರಂಪ್ ಹಿನ್ನಡೆ ಸಾಧಿಸಿದ್ದರು. ಕಾರಣ ಪ್ರೆಸಿಡೆನ್ಸಿಯಲ್ ಡಿಬೇಟ್ ನಲ್ಲಿ ಕಮಲಾ ವಿರುದ್ಧ ಟ್ರಂಪ್ ಸರಿಯಾಗಿ ಮಾತನಾಡಲಿಲ್ಲ.

ಇತ್ತೀಚಿನ ಕೆಲವು ವಾರಗಳಲ್ಲಿ ಮತ್ತೆ ಟ್ರಂಪ್ ಮುನ್ನಡೆಗೆ ಬರುತ್ತಿದ್ದಾರೆ. ಹೀಗಾಗಿ ಈಗ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಯಾರು ಗೆಲ್ಲುತ್ತಾರೆ ಎಂದು ಹೇಳುವುದು ಕಷ್ಟವಾಗಿದೆ.

ಏನಿದು ಅರ್ಲಿ ವೋಟಿಂಗ್‌?

ಅರ್ಲಿ ವೋಟಿಂಗ್‌ ಅಮೆರಿಕ ಚುನಾವಣೆಯ ಪ್ರಮುಖ ಭಾಗವಾಗಿದೆ. ಇದು ಅಮೆರಿಕನ್ನರಿಗೆ ಚುನಾವಣಾ ದಿನದ ಮೊದಲು ತಮ್ಮ ಮತಗಳನ್ನು ಚಲಾಯಿಸಲು ಅವಕಾಶ ಮಾಡಿಕೊಡುತ್ತದೆ. 2024ರ ಚುನಾವಣೆ ಸಮೀಪಿಸುತ್ತಿದ್ದಂತೆ, ಜಾರ್ಜಿಯಾದಂತಹ ಪ್ರಮುಖ ಪ್ರಾಂತ್ಯಗಳುಉ ಸೇರಿದಂತೆ ಅನೇಕ ರಾಜ್ಯಗಳು ಈಗಾಗಲೇ ಅರ್ಲಿ ವೋಟಿಂಗ್ಪ್ರಾ ರಂಭಿಸಿವೆ. ಉದಾಹರಣೆಗೆ, ಜಾರ್ಜಿಯಾದಲ್ಲಿ, ಆರಂಭಿಕ ಮತದಾನದ ಮೊದಲ ದಿನದಂದು 300,000 ಕ್ಕೂ ಹೆಚ್ಚು ಜನರು ಮತ ಚಲಾಯಿಸಿದ್ದಾರೆ. ಈ ಆಯ್ಕೆಯು ಮತದಾನದಲ್ಲಿ ಹೆಚ್ಚು ಜನರು ಪಾಲ್ಗೊಳ್ಳುವಂತೆ ಮಾಡುತ್ತದೆ.

ಇದನ್ನೂ ಓದಿ: DK Shivakumar: ಕಮಲಾ ಹ್ಯಾರಿಸ್‌ ಫೋನ್‌ ಕರೆ; ಚುನಾವಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಡಿಕೆ ಶಿವಕುಮಾರ್‌ ಅಮೆರಿಕಕ್ಕೆ

ಅರ್ಲಿ ವೋಟಿಂಗ್‌ ಪ್ರತಿ ರಾಜ್ಯದಲ್ಲಿ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ. ಹೆಚ್ಚಿನ ರಾಜ್ಯಗಳು ಚುನಾವಣಾ ದಿನಕ್ಕಿಂತ ಮುಂಚಿತವಾಗಿ ಮತದಾನ ಸ್ಥಳಗಳಲ್ಲಿ ಮತ ಚಲಾಯಿಸಲು ಜನರಿಗೆ ಅವಕಾಶ ನೀಡುತ್ತವೆ. ಕೆಲವು ರಾಜ್ಯಗಳು ಮೇಲ್-ಇನ್ ಮತದಾನದ ಅವಕಾಶ ನೀಡುತ್ತವೆ. ಅಲ್ಲಿ ಮತದಾರರು ತಮ್ಮ ಮತಪತ್ರವನ್ನು ಮೇಲ್‌ನಲ್ಲಿ ಸ್ವೀಕರಿಸುತ್ತಾರೆ. ಗಡುವಿನ ಮೊದಲು ಅದನ್ನು ಹಿಂತಿರುಗಿಸಬೇಕು. ವರ್ಜೀನಿಯಾದಂತಹ ರಾಜ್ಯಗಳಲ್ಲಿ, ಚುನಾವಣಾ ದಿನಕ್ಕಿಂತ ಎರಡು ವಾರಗಳಿಗಿಂತ ಮುಂಚಿತವಾಗಿ ಆರಂಭಿಕ ಮತದಾನ ಪ್ರಾರಂಭವಾಗುತ್ತದೆ.