Sunday, 15th December 2024

ಎರಿಕ್ ಗಾರ್ಸೆಟ್ಟಿ – ಭಾರತಕ್ಕೆ ಹೊಸ ಯುಎಸ್ ರಾಯಭಾರಿ

ನವದೆಹಲಿ: ಲಾಸ್ ಏಂಜಲೀಸ್‌ನ ಮಾಜಿ ಮೇಯರ್ ಎರಿಕ್ ಗಾರ್ಸೆಟ್ಟಿ ಅವರು ಭಾರತಕ್ಕೆ ಹೊಸ ಯುಎಸ್ ರಾಯಭಾರಿಯಾಗಲಿದ್ದಾರೆ.

US ಸೆನೆಟ್ ಗಾರ್ಸೆಟ್ಟಿಯ ನಾಮನಿರ್ದೇಶನವನ್ನು ದೃಢಪಡಿಸಿದೆ. ಭಾರತಕ್ಕೆ US ರಾಯಭಾರಿಯಾಗಿ ಅವರ ನಾಮನಿರ್ದೇಶನವನ್ನು ಸೆನೆಟ್‌ನಲ್ಲಿ 52-42 ರಿಂದ ಅಂಗೀಕರಿಸಲಾಯಿತು.

ಮಾಜಿ ಮೇಯರ್ ಅವರ ನಾಮನಿರ್ದೇಶನವು ಜುಲೈ 2021 ರಿಂದ US ಕಾಂಗ್ರೆಸ್‌ಗೆ ಬಾಕಿ ಉಳಿದಿತ್ತು. ಅವರು ಬೈಡನ್ ಅವರಿಂದ ಪ್ರತಿಷ್ಠಿತ ರಾಜತಾಂತ್ರಿಕ ಪೋಸ್ಟಿಂಗ್‌ಗೆ ನಾಮನಿರ್ದೇಶನಗೊಂಡರು.